ಮನೆ ಮನೆಗಳಲ್ಲಿ ಉತ್ತಮ ಆರೋಗ್ಯ ಇರಲು ಯೋಗ ಅತ್ಯವಶ್ಯಕ : ಕೆ.ಇ.ಕಾಂತೇಶ್.

  ಶಿವಮೊಗ್ಗ: ಮನೆ ಮನೆಗಳಲ್ಲಿ ಸದಾ ಉತ್ತಮ ಆರೋಗ್ಯ ಇರಲು ಕಾಯಿಲೆಯಿಂದ ಮುಕ್ತರಾಗಿ ಸದಾ ಚಟುವಟಿಕೆಯಿಂದ ಇರಲು ಯೋಗ ಅತ್ಯಂತ್ತ ಪರಿಣಾಮಕಾರಿಯಾದ ಔಷಧ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಭಾರತೀಯ ಜನತಾ ಪಕ್ಷ ಅವರು ಇಂದು ಬೆಳಿಗ್ಗೆ ಶಿವಗಂಗ ಯೋಗ ಕೇಂದ್ರ ರಾಘವಶಾಖೆವತಿಯಿಂದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಳ್ಳಲಾದ ಐದು ದಿನಗಳ ವಿಶೇಷ ಯೋಗ, ಪ್ರಾಣಯಾಮ, ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಮ್ಮ ಮಾತೃಶ್ರೀಗೆ ಆದ ಹಿಪ್ ಜಾಂಟ್ ಹಾಗೂ ಮಂಡಿನೋವಿನ ತೀರ್ವತಹರದ ಸಮಸ್ಯೆ ಆಪರೇಷನ್ ಹಂತ ತಲುಪಿತಾದ ತಾಯಿಯವರ ಒಂದು ತಿಂಗಳ ಯೋಗಾಭ್ಯಾಸದ ನಂತರ ಆಪರೇಷನ್ ಮಾಡಿಸಿದೆ ಎಂದು ಹೇಳಿ ಯೋಗ ಶಿಬಿರ ಸೇರಿದ ನಂತರ ಯಾವುದೇ ಆಪರೇಷನ್ ಇಲ್ಲದೇ ಗುಣಮುಖರಾಗಿರುವುದು ತುಂಬಾ ಸಂತೋಷವಾಗಿದೆ ಎಂದು ತಮ್ಮ ಅನುಭವ ಹಂಚಿಕೊAಡರು.
ಇAದು ಪ್ರಪಂಚ ೧೭೨ ರಾಷ್ಟçಗಳ ಯೋಗವನ್ನು ಒಪ್ಪಿ ನಮ್ಮ ದೇಶದಲ್ಲಿ ಬಂದು ಯೋಗವನ್ನು ಅಭ್ಯಾಸ ಮಾಡಿ ವಿದೇಶಿಯವರು ಪರಿಣಿತರಾಗುತ್ತಿದ್ದಾರೆ. ಹಾಗಿದ್ದಾಗ ನಮ್ಮ ದೇಶದ ಪಾರಂಪರಿಕ ಯೋಗ ಪದ್ದತಿಯನ್ನು ನಾವೇಕೆ ಅಳವಡಿಸಿಕೊಳ್ಳಬಾರದೆಂದು ಎಂದು ನುಡಿದ ಅವರು ಪ್ರತಿಯೊಬ್ಬರು ತಪ್ಪದೇ ಇಂತಹ ಯೋಗ, ಪ್ರಣಾಯಾಮ, ಧ್ಯಾನ ಶಿಬಿರಲ್ಲಿ ಪಾಲ್ಗೊಳ್ಳಬೇಕೆಂದು ನುಡಿದರು. ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿಯವರು ಪಾಲ್ಗೊಂಡು ಯೋಗಭ್ಯಾಸ ಮಾಡಿ ಮಾತನಾಡುತ್ತಾ ಮಹಿಳೆಯರ ಅನೇಕ ಸಮಸ್ಯೆಗಳಿಗೆ ಯೋಗಭ್ಯಾಸದಲ್ಲಿ ಪರಿಹಾರವಿದೆ. ಇಂತಹ ಒಳ್ಳೆಯ ಕಾರ್ಯಗಳಿಗೆ ನಮ್ಮ ಇಲಾಖೆಯ ಸಹಕಾರ ಎಂದೆAದೂ ಇರುತ್ತದೆ ಎಂದು ನುಡಿದರು. ಇನ್ನು ಮುಂದೆ ನಾನು ತಪ್ಪದೇ ಯೋಗಭ್ಯಾಸ ಮಾಡುತ್ತೇನೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ರಾಷ್ಟçಪತಿ ಪ್ರಶಸ್ತಿ ಪುರಸ್ಕೃತರಾದ ಸಿ.ವಿ.ರುದ್ರರಾಧ್ಯರು ವಿಶೇಷ ಆವರ್ತನ ದ್ಯಾನ ಹಾಗೂ ಸೂರ್ಯನಮಕಸ್ಕಾರ ದ್ಯಾನದ ಲಾಭಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. 
ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳಾದ ಶ್ರೀಮತಿ ನಂದಿನಿ ಹಾಗೂ ಯೋಗ ಶಿಕ್ಷಕರಾದ ಬಸವರಾಜ್, ಅನುರಾಧ, ವೀಣಾ ಶಿವಕುಮಾರ್, ಮಂಜುಳ, ಜಿ.ಎಸ್.ಒಂಕಾರ್, ವಿಜಯಕೃಷ್ಣ, ಹೆಚ್.ಕೆ.ಹರೀಶ್, ಕಾಟನ್ ಜಗದೀಶ್, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ, ಸಂತೋಷ್, ಕೇಶವ್, ಯೋಗ ಬಂಧುಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.