ಹಿರಿಯ ಕೈಗಾರಿಕೋದ್ಯಮಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಭಾರದ್ವಾಜ್ ನಿಧನ

ಶಿವಮೊಗ್ಗ: ಪಾಪ್ಯುಲರ್ ಸೈಕಲ್ ಶಾಪ್ ಮತ್ತು ತಾಲೂಕು ಬ್ರಾಹ್ಮಣ ಸೇವಾ ಸಂಘದ ಮಾಜಿ ಅಧ್ಯಕ್ಷರು ಹಾಗೂ ದಾನಿಗಳು ಆದ *ಎಂ ಭಾರದ್ವಾಜ್* ಅವರು ನಂಜಪ್ಪ ಆಸ್ಪತ್ರೆಯಲ್ಲಿ ಇಂದು ಸಂಜೆ 5ಗಂಟೆಗೆ ನಿಧನರಾಗಿರುತ್ತಾರೆ..
ಹೀರೋ ಸೈಕಲ್,  ಹೀರೋ ಹೋಂಡ ಮೋಟಾರ್ಬೈಕುಗಳ  ಹೆಸರಾಂತ ಉದ್ಯಮಿ. ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳ ರುವಾರಿ. ಎಲ್ಲದಕ್ಕಿಂತ ಹೆಚ್ಚಾಗಿ ಶಿವಮೊಗ್ಗ ಸಾಂಸ್ಕೃತಿಕ ವಲಯದಲ್ಲಿ ತಮ್ಮ ಸಮಾಜಮುಖಿ  ಕಾರ್ಯಗಳ ಮೂಲಕ ಚಿರಪರಿಚಿತರಾದ ಹಾಗು ಸಂಗೀತ-ನೃತ್ಯ ಕ್ಷೇತ್ರದ ಅನೇಕ ಖ್ಯಾತನಾಮರು ಶಿವಮೊಗ್ಗೆ ಆಗಮಿಸಿ ಕಾರ್ಯಕ್ರಮ ನೀಡಲು ಕಾರಣರಾದ , ಶಿವಮೊಗ್ಗೆಯ ಸಾಂಸ್ಕೃತಿಕ ರಾಯಭಾರಿ ಎಂದೆ ಬಣ್ಣಿಸಲ್ಪಟ್ಟ ಶ್ರೀ ಎಂ ಭಾರದ್ವಾಜ್ ಇಂದು ದೈವಾಧೀನರಾಗಿದ್ದಾರೆ .  

ವಾಣಿಜ್ಯ ಸಂಘದ ಅಧ್ಯಕ್ಷರಾಗಿ, ಶ್ರೀ ರಾಮ ಸೇವಾ ಮಂಡಳಿ, ಶ್ರೀ ವಿದ್ಯಾ ಗಣಪತಿ ಸೇವಾ ಸಂಸ್ಥೆ , ಕರ್ನಾಟಕ ಸಂಘ , ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಇನ್ನೂ ಅನೇಕ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರವಹಿಸಿ .ತಮ್ಮ ತಂದೆಯವರ ಹೆಸರಿನಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಟ್ರಸ್ಚ್ ಮೂಲಕ ಹೊಸ ಹೊಸ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದ ಶಿವಮೊಗ್ಗದ ಸಾಮಾಜಿಕ-ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ಆದ  ವಿಶಿಷ್ಠ ಛಾಪನ್ನು  ಮೂಡಿಸಿದ . ಪಾಪ್ಯುಲರ್ ಸೈಕಲ್ ಶಾಪ್ ಮಾಲೀಕರೆಂದೇ ಪ್ರಸಿದ್ಧರಾದ ಭಾರಧ್ವಾಜ್ ನಿಧನದಿಂದ ಹಳೆಯ ತಲೆಮಾರಿನ ಮುಖ್ಯ ಕೊಂಡಿಯೊಂದು ಕಳಚಿದಂತಾಗಿದೆ. 

ಸರ್ಕಾರದ ಮತ್ತು ಅಭಿವೃದ್ಧಿ ಯೋಜನೆಗಳ ಜಾರಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ಇಂದು ಬೆಳಗ್ಗೆ ಕೂಡ 8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಸರಳ ಸಜ್ಜನರು ಹಾಗೂ ಸದಾ ಚಟುವಟಿಕೆಯ ವ್ಯಕ್ತಿತ್ವ ಹೊಂದಿದ್ದವರಾಗಿದ್ದರು. ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಜಿಲ್ಲೆಯ ಪ್ರಮುಖ ರಾಜಕಾರಣಿಗಳೊಂದಿಗೆ ಅವರು ಒಡನಾಟ ಹೊಂದಿದ್ದರು. 

ಪತ್ನಿ ಹಾಗೂ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದು, ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಅನೇಕ ಸಂಘ, ಸಂಸ್ಥೆಗಳು, ಜಿಲ್ಲಾ ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿವೆ. ಜೂ. 22 ಬುಧವಾರ ಬೆಳಗ್ಗೆ 10 ಗಂಟೆಗೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.