ವೈಟ್ ಬೋರ್ಡ್ ವಾಹನ ಬಾಡಿಗೆ ಕಳಿಸಿದರೇ ಕಾರ್ ಸೀಜ್! :ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಎಚ್ಚರಿಕೆ
- ವೈಟ್ ಬೋರ್ಡ್ ಟ್ಯಾಕ್ಸಿ ವಾಹನ ಮಾಲೀಕರಿಗೆ ಎಚ್ಚರಿಕೆ
- ಸ್ಟಾಂಡ್ ಅಲ್ಲಿ ನಿಲ್ಲಿಸಿ ಬಾಡಿಗೆ ಮಾಡುವ ಹಾಗಿಲ್ಲ
ಬೆಂಗಳೂರು: ಕರೋನಾ ಬಳಿಕ ಬಾಡಿಗೆ ವಾಹನಗಳ ಮಾಲೀಕರು, ಚಾಲಕರ ಬದುಕು ಅಯೋಮಯವಾಗಿದೆ. ಉದ್ಯಮಗಳ ನಷ್ಟ, ವರ್ಕ್ ಫ್ರಮ್ ಹೋಂ ಸೇರಿದಂತೆ ಹಲವು ಕಾರಣಗಳಿಂದ ಖಾಸಗಿ ಬಾಡಿಗೆ ವಾಹನಗಳು ಬಾಡಿಗೆ ಇಲ್ಲದೆ ತೊಂದರೆಯಲ್ಲಿವೆ.
ಸಾಲ ಪಡೆದ ಇಎಂಐ ಕಟ್ಟಲು ಕೂಡ ಚಾಲಕರು ಪರದಾಟ ಮಾಡುತ್ತಿದ್ದಾರೆ. ಈ ನಡುವೆ ಕೆಲವರು ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಬಳಸುವ ಮೂಲಕ ಹಳದಿ ಬೋರ್ಡ್ ಬಾಡಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇದು ಈಗ ಸರ್ಕಾರದ ಕಣ್ಣಿಗೆ ಬಿದ್ದಿದೆ.
ಬಾಡಿಗೆಗೆ ಬಳಸಂಗಿಲ್ಲ!: ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ರಸ್ತೆಗಿಳಿಸಿದರೆ ವಾಹನ ಸೀಜ್ ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಹಲವೆಡೆ ಅಧಿಕಾರಿಗಳ ದಾಳಿ!
ರಾಜ್ಯದ ಹಲವೆಡೆ ಬಾಡಿಗೆ ವಾಹನ ನಿಲ್ದಾಣಗಳ ಮೇಲೆ ದಾಳಿ ಮಾಡಿರುವ RTO ಅಧಿಕಾರಿಗಳು ವೈಟ್ ಬೋರ್ಡ್ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ಒಂದು ವಾರದ ಗಡುವು ನೀಡಿದ್ದಾರೆ. ಅಷ್ಟರೊಳಗೆ ಸ್ಟ್ಯಾಂಡ್ ನಿಂದ ವಾಹನಗಳನ್ನು ತೆಗೆಯಬೇಕು. ಕೂಡಲೇ ಎಲ್ಲೋ ಬೋರ್ಡ್‌ಗೆ ಮಾಡಿಸಿಕೊಳ್ಳಬೇಕು. ಗಡುವು ಮೀರಿ ವೈಟ್ ಬೋರ್ಡ್ ಗಾಡಿಗಳು ಬಾಡಿಗೆಗೆ ಓಡಿಸಿದರೆ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Leave a Comment