ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಯಶಸ್ವಿಯಾಗಿ ನಡೆದ ಸಾಹಿತ್ಯ ಹುಣ್ಣಿಮೆಯ 201 ನೆಯ ತಿಂಗಳ ಕಾರ್ಯಕ್ರಮ

ಶಿವಮೊಗ್ಗ:  ಜೂನ್ ೧೦ ರಂದು ಶುಕ್ರವಾರ ಸಂಜೆ *ಸಾಹಿತ್ಯ ಹುಣ್ಣಿಮೆಯ ೨೦೧ ನೆಯ ತಿಂಗಳ ಕಾರ್ಯಕ್ರಮ* ಯಶಸ್ವಿಯಾಗಿ ನಡೆಯಿತು. 

ಶಾಸಕ ಕೆ. ಎಸ್. ಈಶ್ವರಪ್ಪ ನವರ ಜನ್ಮದಿನದ ಸಂಭ್ರಮದ ಜೊತೆಯಲ್ಲಿ ಮಳೆಗಾಲದ ಆರಂಭದ ವರುಣನ ಸಿಂಚನದ ನಡುವೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನಸಮೂಹದ ಸಮ್ಮುಖದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ವಿವಿಧ ಶಾಲೆಗಳ ಆಯ್ದ ಎರಡು ನೂರ ಐವತ್ತು ಮಕ್ಕಳು ವೃಂದಗಾನದಲ್ಲಿ ಹಾಡು, ನೃತ್ಯ ದೊಂದಿಗೆ ಆರಂಭವಾದ ಸಾಹಿತ್ಯ ಹುಣ್ಣಿಮೆ ಮಹಿಳೆಯರು ವೃಂದಗಾನದಲ್ಲಿ ವಿವಿಧ ಹಾಡುಗಳನ್ನು ಹಾಡಿದರು. ಕವಿಗಳ ಕಾವ್ಯ ಸಿಂಚನ, ವಿದ್ಯಾರ್ಥಿನಿಯ ಹನಿಗವನದ ನಂತರ ಒಂದು ಹಂತದ ಕಾರ್ಯಕ್ರಮವಾಯಿತು.
ಸಮೂಹಗಾನದಲ್ಲಿ ವಿದ್ಯಾರ್ಥಿಗಳು ನಾಡಗೀತೆಹಾಡುವಾಗ ಅತಿಥಿಗಳು, ಸಭಿಕರೆಲ್ಲಾ ಎದ್ದುನಿಂತು ಗೌರವ ಸಲ್ಲಿಸಿದ ನಂತರ ಆತಿಥ್ಯನೀಡಿದ ಯುವನಾಯಕ ಕೆ. ಈ. ಕಾಂತೇಶ್ ಅವರ ಸ್ವಾಗತಿಸಿದರು.
ಗಿಡಕ್ಕೆ ನೀರೆರೆದು ಉದ್ಘಾಟನೆ ಮಾಡಿದ ಮಾನ್ಯ ಕೆ. ಎಸ್. ಈಶ್ವರಪ್ಪ ನವರು ಸಭೆಯನ್ನು ಕುರಿತು ಮಾತನಾಡಿದರು.
ನಂತರ ಮಾನ್ಯ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಾಮನಿ ಮಾತಿನ ಮಂಟಪ ನಿರ್ಮಿಸಿದರು. ಕಸಾಸಾಂ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷಿಯ ಮಾತುಗಳ ನಂತರ ಆಗಮಿಸಿದ್ದ ಸಾವಿರಾರು ಸಹೃದಯಿ ಗಳಿಗೆ ರುಚಿಕರವಾದ ಭೋಜನ ವ್ಯವಸ್ಥೆಯಾಗಿತ್ತು. ವೇದಿಕೆಯಲ್ಲಿ ಉಮೇಶ್ ಆರಾಧ್ಯ, ಯು. ಮಧುಸೂದನ್ ಐತಾಳ್, ಮಹಾಪೌರರಾದ ಸುನಿತಾ ಅಣ್ಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಅನಿತಾ ರವಿಶಂಕರ್, ಕೆ. ಎಸ್. ಮಂಜಪ್ಪ, ಡಿ. ಗಣೇಶ್, ಎಂ. ನವೀನ್ ಕುಮಾರ್, ಮಹಾದೇವಿ, ಉಮಾ ದಿಲಿಪ್, ಸೋಮಿನಕಟ್ಟಿ, ಭಾರತಿ ರಾಮಕೃಷ್ಣ,  ಬಿ. ಟಿ. ಅಂಬಿಕಾ, ನಾಗರಕೊಡಿಗೆ ಗಣೇಶ್ ಮೂರ್ತಿ, ಉಮರ್ ಕೋಯಾ,  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.