*12 ಜೂನ್ ದಿಂದ ಗೋವಾದಲ್ಲಿ 10 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ !**ದೇಶದ 350 ಹಿಂದೂ ಸಂಘಟನೆಗಳ 1000 ಕ್ಕೂ ಅಧಿಕ ಪ್ರತಿನಿಧಿಗಳ ಸಹಭಾಗಿ !*
ಬೆಂಗಳೂರು: ಗೋವಾದಲ್ಲಿ ಕಳೆದ ೧೦ ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ದೇಶದಲ್ಲಿ ಹಿಂದೂ ರಾಷ್ಟ್ರದ ಚರ್ಚೆಯು ಆರಂಭವಾಯಿತು ಮತ್ತು ಹಿಂದೂ ರಾಷ್ಟ್ರದ ಧ್ಯೇಯವನ್ನಿಟ್ಟು ವಿವಿಧ ಕ್ಷೇತ್ರಗಳಲ್ಲಿ ಕಾರ್ಯವು ಆರಂಭವಾಯಿತು. ಈ ೧೦ ನೇ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಕಾರ್ಯಪದ್ಧತಿ, ‘ಹಿಂದೂ ರಾಷ್ಟ್ರದಲ್ಲಿ ಆದರ್ಶ ರಾಜ್ಯ ವ್ಯವಹಾರ ಹೇಗಿರಬೇಕು ? ಎನ್ನುವುದರ ಬಗ್ಗೆ ಹಿಂದೂ ರಾಷ್ಟ್ರ ಸಂಸತ್ತನ್ನು ಆಯೋಜಿಸಲಾಗಿದೆ. ಅಧಿವೇಶನದಲ್ಲಿ ೩ ದಿನ ‘ಹಿಂದೂ ರಾಷ್ಟ್ರ ಸಂಸತ್ತು’ ನಡೆಯಲಿದ್ದು ಮತ್ತು ಅದರಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಸದೀಯ ಮತ್ತು ಸಂವಿಧಾನಿಕ ಮಾರ್ಗ’, ‘ದೇವಸ್ಥಾನಗಳ ಸುವ್ಯವಸ್ಥಾಪನೆ’ ಮತ್ತು ‘ಹಿಂದೂ ಶೈಕ್ಷಣಿಕ ಧೋರಣೆಗಳನ್ನು ಹೇಗೆ ಅವಲಂಬಿಸಬೇಕು ?’ ಈ ಬಗ್ಗೆ ತಜ್ಞ ಗಣ್ಯರಿಂದ ವಿಸ್ತಾರವಾಗಿ ಚರ್ಚೆಯಾಗಲಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಈ ವರ್ಷ ೧೨ ರಿಂದ ೧೮ ಜೂನ್ ೨೦೨೨ ಈ ಕಾಲಾವಧಿಯಲ್ಲಿ ‘ಶ್ರೀ ರಾಮನಾಥ ದೇವಸ್ಥಾನ’, ಫೋಂಡಾ, ಗೋವಾದಲ್ಲಿ ೧೦ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜಿಸಲಾಗಿದೆ, ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.
ಬೆಂಗಳೂರಿನಲ್ಲಿ ಆಯೋಜಿತ ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಶ್ರೀ. ಪ್ರಶಾಂತ ಸಂಬರ್ಗಿ, ಸನಾತನ ಸಂಸ್ಥೆಯ ಸೌ. ಶಾರದಾ ಯೋಗೀಶ ಇವರು ಉಪಸ್ಥಿತರಿದ್ದರು.
ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ‘ಜಮೀಯತ್ ಉಲೆಮಾ-ಎ-ಹಿಂದ್’ನ ಮೌಲಾನಾ ಮಹಮೂದ್ ಮದನಿಯು ‘ಸಮಾನ ನಾಗರಿಕ ಕಾಯದೆಯ ಆಧಾರದಲ್ಲಿ ಶರಿಯತ್‌ನಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದಿಲ್ಲ ಮತ್ತು ಹಿಂದೂಗಳಿಗೆ ಮುಸಲ್ಮಾನರು ಇಷ್ಟವಾಗದಿದ್ದರೆ, ಹಿಂದೂಗಳು ಭಾರತವನ್ನು ಬಿಟ್ಟು ಹೋಗಬೇಕು’, ಎಂದು ಬಹಿರಂಗವಾಗಿ ಬೆದರಿಕೆ ನೀಡಿದ್ದಾರೆ. ಭಾರತದ ಬಹುಸಂಖ್ಯಾತ ಹಿಂದೂಗಳು ಮುಸಲ್ಮಾನರಿಗೆ ಅಲ್ಪಸಂಖ್ಯಾತರ ವಿಶೇಷ ರಿಯಾಯಿತಿ ನೀಡಿದರೂ ಬಂಧುತ್ವವನ್ನು ಕಾಪಾಡಿಕೊಂಡಿದ್ದಾರೆ, ಎಂಬುದನ್ನು ಗಮನದಲ್ಲಿಡಬೇಕು. ಇಂದಿನ ಭಾರತ ಗಾಂಧಿಗಿರಿ ಮಾಡುವುದಿಲ್ಲ, ಬದಲಾಗಿ ಛತ್ರಪತಿ ಶಿವಾಜಿ ಮಹಾರಾಜರನ್ನು ಆದರ್ಶವೆಂದು ನಂಬಿ ಸ್ವರಾಜ್ಯರಕ್ಷಣೆಯನ್ನು ಮಾಡಲಿದೆ, ಎಂದು ಅವರು ಗಮನದಲ್ಲಿಡಬೇಕು’, ಎಂದು ಹೇಳಿದರು.
ಕೊರೊನಾದಿಂದ ಕಳೆದ ಎರಡು ವರ್ಷಗಳ ಕಾಲ ಈ ಅಧಿವೇಶನವನ್ನು ಪ್ರತ್ಯಕ್ಷವಾಗಿ ನಡೆಸಲು ಸಾಧ್ಯವಾಗಲಿಲ್ಲ. ೨೦೨೦ ನೇ ಇಸವಿಯಲ್ಲಿ ‘ಆನ್‌ಲೈನ್’ ಅಧಿವೇಶನವನ್ನು ನಡೆಸಲಾಯಿತು. ಈ ವರ್ಷ ಪ್ರತ್ಯಕ್ಷ ಅಧಿವೇಶನ ನಡೆಯುತ್ತಿರುವುದರಿಂದ ದೇಶದಾದ್ಯಂತದ ಹಿಂದುತ್ವನಿಷ್ಠರಲ್ಲಿ ಅತ್ಯಂತ ಉತ್ಸಾಹವಿದೆ. ಈ ಅಧಿವೇಶನಕ್ಕೆ ಅಮೇರಿಕಾ, ಇಂಗ್ಲೆಂಡ್, ಹಾಂಗ್ ಕಾಂಗ್, ಸಿಂಗಾಪುರ, ಫಿಜಿ, ನೇಪಾಳ ಈ ದೇಶಗಳ ಸಹಿತ ಭಾರತದ ೨೬ ರಾಜ್ಯಗಳಲ್ಲಿನ ೩೫೦ ಕ್ಕಿಂತ ಹೆಚ್ಚು ಹಿಂದೂ ಸಂಘಟನೆಗಳ ೧೦೦೦ ಕ್ಕಿಂತ ಹೆಚ್ಚು ಪ್ರತಿನಿಧಿಗಳನ್ನು ಆಮಂತ್ರಿಸಲಾಗಿದೆ. ಈ ಅಧಿವೇಶನದಲ್ಲಿ ಪ್ರಮುಖವಾಗಿ ‘ಕಾಶಿಯಲ್ಲಿನ ಜ್ಞಾನವಾಪಿ ಮಸೀದಿ’, ‘ಮಥುರಾ ಮುಕ್ತಿ ಆಂದೋಲನ’, ‘ಪ್ಲೆಸೆಸ್ ಆಫ್ ವರ್ಶಿಪ್ ಆಕ್ಟ್’, ‘ಕಾಶ್ಮೀರಿ ಹಿಂದೂಗಳ ನರಮೇಧ’, ‘ಮಸೀದಿಗಳಲ್ಲಿ ಧ್ವನಿವರ್ಧಕದಿಂದ ಆಗುವ ಶಬ್ದ ಮಾಲಿನ್ಯ’, ‘ಹಿಜಾಬ್ ಆಂದೋಲನ’, ‘ಹಲಾಲ್ ಸರ್ಟಿಫಿಕೆಟ್ ಒಂದು ಆರ್ಥಿಕ ಜಿಹಾದ್’, ‘ಹಿಂದೂಗಳ ಸಂರಕ್ಷಣೆ’, ‘ಮಂದಿರ-ಸಂಸ್ಕೃತಿ-ಇತಿಹಾಸ ಇವುಗಳ ರಕ್ಷಣೆ’, ‘ಮತಾಂತರ’ ಮುಂತಾದ ವಿವಿಧ ವಿಷಯಗಳ ಚರ್ಚೆಯನ್ನು ಮಾಡಲಾಗುವುದು’ ಎಂದು ಹೇಳಿದರು.
ಸನಾತನ ಸಂಸ್ಥೆಯ ಸೌ. ಶಾರದಾ ಯೋಗೀಶ ರವರು ಮಾತನಾಡುತ್ತಾ ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಹಿಂದೂಪರ ಸರಕಾರ ಇರುವುದರಿಂದ ರಾಮಮಂದಿರ ನಿರ್ಮಾಣ, ಲವ್ ಜಿಹಾದ್ ಮತ್ತು ಮತಾಂತರ ಇವುಗಳ ವಿರುದ್ಧದ ಕಾಯದೆಗಳನ್ನು ಜಾರಿಗೆ ತರುವುದು ಮತ್ತು ಕಲಮ್ ೩೭೦ ನ್ನು ರದ್ದು ಮಾಡುವುದು, ಇತ್ಯಾದಿಗಳ ಬಗ್ಗೆ ಸಕಾರಾತ್ಮಕ ಕಾರ್ಯಗಳು ನಡೆದಿದ್ದರೂ, ಕಾಶಿ-ಮಥುರಾದೊಂದಿಗೆ ಹಿಂದೂಗಳ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳ ಮುಕ್ತಿಯಾಗುವುದು ಬಾಕಿ ಇದೆ. ಓವೈಸಿ ‘ಬಾಬರಿಯನ್ನು ತೆಗೆದುಕೊಂಡಿದ್ದೀರಿ, ಆದರೆ ಜ್ಞಾನವಾಪಿ ಮಸೀದಿಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ’, ಎಂದು ಹೇಳುತ್ತಿದ್ದಾರೆ. ದೇಶದಾದ್ಯಂತ ಹಿಂದೂಗಳ ಮೆರವಣಿಗೆ ಮತ್ತು ಧಾರ್ಮಿಕ ಉತ್ಸವಗಳ ಮೇಲೆ ಭೀಕರ ಹಲ್ಲೆ ನಡೆಯುತ್ತಿವೆ. ಮಿಶನರಿಗಳಿಂದ ಬಲವಂತದಿಂದಾಗುತ್ತಿರುವ ಮತಾಂತರದಿಂದ ಲಾವಣ್ಯಾಳಂತಹ ಹಿಂದೂ ಹುಡುಗಿಯರು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕಾಗುತ್ತಿದೆ. ಕಾಶ್ಮೀರಿ ಹಿಂದೂಗಳ ನರಮೇಧಕ್ಕೆ ೩೨ ವರ್ಷಗಳಾಗಿದ್ದರೂ ಕಾಶ್ಮೀರಿ ಹಿಂದೂಗಳ ಹತ್ಯೆ ಇಂದಿಗೂ ನಿಂತಿಲ್ಲ. ಒಟ್ಟಾರೆ ಹಿಂದೂಗಳು ಎಲ್ಲೆಡೆ ಅಸುರಕ್ಷಿತರಿದ್ದಾರೆ. ಆದುದರಿಂದ ಹಿಂದೂಗಳು ಸಾಂವಿಧಾನಿಕ ಅಧಿಕಾರಗಳಿಗಾಗಿ ಸಂಘಟಿತರಾಗುವುದು ಆವಶ್ಯಕವಾಗಿದೆ. ಹಿಂದೂಗಳ ವ್ಯಾಪಕ ಸಂಘಟನೆಗಾಗಿ ಈ ಅಧಿವೇಶನ ಮಾರ್ಗದರ್ಶಕವಾಗಲಿದೆ’ ಎಂದು ಹೇಳಿದರು.
ಉದ್ಯಮಿಗಳು ಹಾಗೂ ಹಿಂದೂಪರ ಹೋರಾಟಗಾರರಾದ ಶ್ರೀ. ಪ್ರಶಾಂತ ಸಂಬರ್ಗಿಯವರು ಮಾತನಾಡಿ, ಈ ಅಧಿವೇಶನದಲ್ಲಿ ಹಿಂದೂ ಮಂದಿರವನ್ನು ಹೇಗೆ ವಾಪಸ್ ಪಡೆಯಬೇಕು, ಹಿಂದೂ ರಾಷ್ಟ್ರದ ರೂಪುರೇಷೆ ಹೇಗಿರಬೇಕು. ಜನರಲ್ಲಿ ಹಿಂದೂ ರಾಷ್ಟ್ರದ ಭಾವನೆ ಹೇಗೆ ಮಾಡುವುದು, ಹಿಂದೂ ಸಂಪ್ರದಾಯಯನ್ನು ಬೆಳೆಸುವುದು, ಶೈಕ್ಷಣಿಕ ಮೂಲಕ ಹಿಂದೂ ರಾಷ್ಟ್ರದ ಜಾಗೃತಿ ಹೇಗೆ ಮಾಡುವುದು ಅದೇ ರೀತಿ ಬೇರೆ ಬೇರೆ ವಿಷಯಗಳಲ್ಲಿ ಉದಾ. ದೇವಸ್ಥಾನ ರಕ್ಷಣೆ, ಲವ್ ಜಿಹಾದ್‌ನಲ್ಲಿ ಹೇಗೆ ಕೃತಿ ಮಾಡಿ ಯಶಸ್ಸು ಪಡೆದರು ಇಂತಹ ಅನುಭವ ಹಂಚಿಕೆಯಾಗಲಿದೆ. ಇದು ಒಂದು ರೀತಿ ಜ್ಞಾನ ಹಂಚಿಕೆಯಾಗಿದೆ. ಹೀಗೆ ವಿವಿಧೆಡೆಗಳಲ್ಲಾದ ಯಶಸ್ಸಿನ ಹೋರಾಟವನ್ನು ಹಂಚಿಕೆ ಮಾಡಿ ಇತರರಿಗೂ ಅದರಿಂದ ಪ್ರೇರಣೆ ದೊರೆತು ಅವರೂ ತಮ್ಮ ಕ್ಷೇತ್ರಗಳಲ್ಲಿ ಅದನ್ನು ಕೃತಿ ಮಾಡಬಹುದು. ಇದು ಹಿಂದೂ ಸನಾತನಿಗಳನ್ನು ಒಗ್ಗೂಡಿಸುವ ವೇದಿಕೆಯಾಗಿದೆ ಎಂದರು.
ಈ ಅಧಿವೇಶನದಲ್ಲಿ ಕಾಶಿಯ ಜ್ಞಾನವಾಪಿ ಮಸೀದಿಯ ವಿರುದ್ಧ ಕಾನೂನು ಹೋರಾಟ ಮಾಡುವ ವಕೀಲರಾದ (ಪೂ.) ಹರಿಶಂಕರ ಜೈನ್, ವಿಷ್ಣು ಶಂಕರ ಜೈನ್, ಸಿಬಿಐನ ಮಾಜಿ ನಿರ್ದೇಶಕರಾದ ಶ್ರೀ. ನಾಗೇಶ್ವರ ರಾವ್, ಭಾಗ್ಯನಗರದ ಶಾಸಕರಾದ ಟಿ. ರಾಜಾಸಿಂಹ, ಪನೂನ್ ಕಾಶ್ಮೀರನ ಶ್ರೀ. ರಾಹುಲ ಕೌಲ್, ಝಾರಖಂಡನ ತರುಣ ಹಿಂದೂ ಅಧ್ಯಕ್ಷರಾದ ಶ್ರೀ. ನೀಲ ಮಾಧವ ದಾಸ, ತಮಿಳುನಾಡಿನ ಹಿಂದೂ ನೇತಾರ ಶ್ರೀ. ಅರ್ಜುನ ಸಂಪಥ, ಅರುಣಾಚಲ ಪ್ರದೇಶದ ಹಿಂದೂ ನೇತಾರ ಉಪಾಧ್ಯಕ್ಷ ಶ್ರೀ. ಕುರು ಥಾಯಿ, ಭಾರತ ಸೇವಾಶ್ರಮ ಸಂಘದ ಸ್ವಾಮಿ ಸಂಯುಕ್ತಾನಂದಜಿ ಮಹಾರಾಜರು, ಇಂಟರನ್ಯಾಶನಲ್ ವೇದಾಂತ ಸೋಸೈಟಿ’ಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜರು, ಹೀಗೆ ನೂರಾರು ಹಿರಿಯ ನ್ಯಾಯವಾದಿಗಳು, ಉದ್ಯಮಿಗಳು, ವಿಚಾರವಂತರು, ಲೇಖಕರು, ದೇವಸ್ಥಾನಗಳ ವಿಶ್ವಸ್ಥರು, ಸಮವಿಚಾರಿ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿಲಿದ್ದಾರೆ. ಈ ಅಧಿವೇಶನಕ್ಕೆ ದೇಶದಾದ್ಯಂತದ 45 ಕ್ಕಿಂತ ಹೆಚ್ಚು ಹಿಂದೂ ಸಂಘಟನೆಗಳು ಬೆಂಬಲ ಪತ್ರಗಳನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರ ಅಧಿವೇಶನ’ದ ನೇರ ಪ್ರಸಾರವನ್ನು Hindujagruti ಈ ಯೂ-ಟ್ಯೂಬ್ ಚಾನೆಲ್, ಜಾಲತಾಣದಿಂದ ಮಾಡಲಾಗುತ್ತದೆ.
Leave a Comment