*ವಿದ್ಯಾರ್ಥಿನಿಲಯ ಪ್ರಾರಂಭಿಸಲು ಬಾಡಿಗೆ ಕಟ್ಟಡಕ್ಕೆ ಅರ್ಜಿ ಆಹ್ವಾನ*
ಶಿವಮೊಗ್ಗ:ಮೆಟ್ರಿಕ್ ನಂತರದ ಬಾಲಕರ ವಿಯಾರ್ಥಿ ನಿಲಯ ಪ್ರಾರಂಭಿಸಲು ಕಟ್ಟಡವನ್ನು ಬಾಡಿಗೆಗೆ ನೀಡಲು ಆಸಕ್ತಿಯುಳ್ಳವರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದು.
2021-22 ನೇ ಸಾಲಿನ ಆಯವ್ಯಯ ಘೋಷಣೆಯಂತೆ ಶಿವಮೊಗ್ಗ ಜಿಲ್ಲೆಗೆ 100 ಸಂಖ್ಯಾಬಲದ 01 ಮೆಟ್ರಿಕ್‍ನಂತರದ ಬಾಲಕರ ವಿದ್ಯಾರ್ಥಿನಿಲಯ ಮಂಜೂರಾಗಿದ್ದು, 2022-23 ನೇ ಸಾಲಿಗೆ ಪ್ರಾರಂಭಿಸಬೇಕಾಗಿರುತ್ತದೆ.
ಆದ್ದರಿಂದ 100 ಸಂಖ್ಯಾಬಲದ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಅಗತ್ಯ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, 10 ಸ್ನಾನದ ಕೊಠಡಿ, 10 ಶೌಚಾಲಯ, ವಾಸದ ಕೊಠಡಿಗಳು, ಅಡುಗೆ ಮನೆ, ಊಟದ ಹಾಲ್, ಅಗ್ನಿ ಸುರಕ್ಷಾ ವ್ಯವಸ್ಥೆ, ದೋಬಿಗಾಟ್, ಸೋಲಾರ್‍ವಾಟರ್ ಹೀಟರ್ ಮತ್ತು ಬೋರ್‍ವೆಲ್ ಹಾಗೂ ಇತ್ಯಾದಿ ಸೌಕರ್ಯವುಳ್ಳ 7000 ದಿಂದ 8000 ಅಡಿ ವಿಸ್ತೀರ್ಣವುಳ್ಳ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯವರು ನಿಗದಿಪಡಿಸಿದ ಮಾಸಿಕ ಬಾಡಿಗೆಗೆ ಒಪ್ಪಿ ಬಾಡಿಗೆಗೆ ನೀಡು ಆಸಕ್ತಿಯುಳ್ಳ ಕಟ್ಟಡ ಮಾಲೀಕರು ಮೇ 9 ರಿಂದ 14 ರೊಳಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶ್ರೀ ತಿಪ್ಪೇಸ್ವಾಮಿ ಕಾಂಪ್ಲೆಕ್ಸ್, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
Leave a Comment