ಶಿವಮೊಗ್ಗ ಡಿಸಿ ಮನೆ ಆವರಣದಲ್ಲಿ ನಾಗರಹಾವು!
ಶಿವಮೊಗ್ಗ, ಮೇ 8: ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ ಆವರಣದಲ್ಲಿ ಭಾನುವಾರ ನಾಗರಹಾವೊಂದು ಕಾಣಿಸಿಕೊಂಡ ಘಟನೆ ನಡೆದಿದೆ.
ಡಿಸಿ ಮನೆ ಹಿಂಭಾಗದ ಗಾರ್ಡನ್ ಸಮೀಪದ ಕಲ್ಲು ಚಪ್ಪಡಿಯ ಕೆಳಭಾಗದಲ್ಲಿ ಕಪ್ಪೆಯೊಂದನ್ನು ಹಾವು ಭಕ್ಷಿಸುತ್ತಿತ್ತು. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಗಳು, ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಕಿರಣ್, ಸುಮಾರು ಮೂರುವರೆ ಅಡಿ ಉದ್ದದ ಹಾವನ್ನು ಸಂರಕ್ಷಿಸಿದ್ದಾರೆ. ಕಳೆದ ಹಲವು ದಿನಗಳಿಂದ ನಿವಾಸದ ಸುತ್ತಮುತ್ತಲು ಹಾವು ಓಡಾಡುತ್ತಿತ್ತು. ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಎಂದು ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.
Leave a Comment