*ಮತದಾನ ಕೇಂದ್ರವಿರುವ ಶಾಲೆಗಳಿಗೆ ರಜೆ*
ಶಿವಮೊಗ್ಗ ಮೇ 18:
ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಮೇ 20 ರಂದು ಉಪ ಚುನಾವಣೆ ನಡೆಯುತ್ತಿದ್ದು ಅಂದು ಉಪಚುನಾವಣೆಯ ಮತದಾನ ದಿನವೆಂದು ಘೋಷಿಸಲಾಗಿದೆ ಹಾಗೂ ಮತದಾನ ಕೇಂದ್ರವಿರುವ ಶಾಲೆಗಳಿಗೆ ಅಂದು ರಜೆ ಘೋಷಿಸಲಾಗಿದೆ.
ಚುನಾವಣಾ ಕ್ಷೇತ್ರಗಳಲ್ಲಿ ಮತದಾನ ಕೇಂದ್ರಗಳು ಬಹುತೇಕ ಶಾಲೆಗಳಾಗಿದ್ದು, ಮತದಾನ ಕೇಂದ್ರಗಳಲ್ಲಿ ಮೇ 20 ರಂದು ಮತದಾನ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ಜನದಟ್ಟಣೆಯಾಗಿ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 174 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಳೇಕೊಪ್ಪ ಹಾಗೂ ಶಿಕಾರಿಪುರ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 17 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೊಗ್ಗ ಈ ಶಾಲೆಗಳಿಗೆ ಮೇ 20 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಆರ್. ಸೆಲ್ವಮಣಿ ತಿಳಿಸಿದ್ದಾರೆ.
==
Leave a Comment