ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನಿಂದ ಶಿವಮೊಗ್ಗದಲ್ಲಿ ಜನಧ್ವನಿ ಬೃಹತ್ ಪ್ರತಿಭಟನೆ

ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನಿಂದ ಇಂದು ನಗರದಲ್ಲಿ ಜನಧ್ವನಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಒಂದನೇ ಆರೋಪಿ ಕೆ. ಎಸ್. ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಜನವಿರೋಧಿ ನೀತಿ  ಹಾಗೂ ಪಿಎಸ್ಐ ನೇಮಕಾತಿಯ ಕರ್ಮಕಾಂಡ ಜೊತೆಗೆ ಎಲ್ಲಾ ನೇಮಕಾತಿಯಲ್ಲಿ ರೇಟ್ ಫಿಕ್ಸ್ ಮಾಡಿ ನಿರುದ್ಯೋಗಿ ಯುವಕರಿಗೆ ವಂಚಸಿ ಪೇಮೆಂಟ್  ಪಡೆಯಲಾಗಿದೆ ಎಂದು ದೂರಿದರು.
ಕಾಮಗಾರಿಗಳಲ್ಲಿ ಶೇಕಡ 40 ಕಮಿಷನ್ ಗುತ್ತಿಗೆದಾರರಿಂದ ಪಡೆದು ಗುತ್ತಿಗೆದಾರನ ಸಾವಿಗೆ ಕಾರಣವಾಗಿ ಬಿಜೆಪಿ ಸರ್ಕಾರ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪೆಟ್ರೋಲ್, ಡೀಸೆಲ್, ವಿದ್ಯುತ್ ಅಡುಗೆ ಅನಿಲ, ಅಡುಗೆಎಣ್ಣೆ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳು ಹಾಗೂ ರಸಗೊಬ್ಬರ, ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಗಗನಕ್ಕೇರಿದ್ದು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಧ್ಯಕ್ಷ ಧ್ರುವ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಜನಪ್ರತಿನಿಧಿಗಳು ಭಾಗಿಯಾಗಿದ್ದರು. ನಗರದ ಅಶೋಕ ಸರ್ಕಲ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿಎಚ್ ರಸ್ತೆ ನೆಹರು ರಸ್ತೆ ಗೋಪಿ ಸರ್ಕಲ್ ಮೂಲಕ ಸಾಗಿ ಭೋವಿ ಸಮುದಾಯ ಭವನದ ಬಳಿ ಬಹಿರಂಗ ಸಭೆ ನಡೆಸಲಾಯಿತು. ಶಾಸಕ ಬಿಕೆ ಸಂಗಮೇಶ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮಧುಬಂಗಾರಪ್ಪ ಆರ್ ಪ್ರಸನ್ನ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ಎಸ್ ಸುಂದರೇಶ್, ಮೊದಲಾದವರು ಭಾಗವಹಿಸಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.