ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ರವರಿಂದ ಮುದ್ದಿನ ಅಪ್ಪ ಬಸವಣ್ಯಪ್ಪ ಜೀವನ ಚರಿತ್ರೆ ಪುಸ್ತಕ ಬಿಡುಗಡೆ
ಶಿವಮೊಗ್ಗ: ಮುದ್ದಿನ ಅಪ್ಪ ಬಸವಣ್ಯಪ್ಪ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭ 29ರಂದು ಭಾನುವಾರ ಬೆಳಗ್ಗೆ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು .
ಹರಿಹರ ತಾಲೂಕು ಶ್ರೀ ನಂದಿಗುಡಿ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು., ಮಕ್ಕಳ ಸಾಹಿತಿ ಜೀನಹಳ್ಳಿ ಸಿದ್ಧಲಿಂಗಪ್ಪ ಪುಸ್ತಕ ಪರಿಚಯ ಮಾಡಿಕೊಟ್ಟರು..
ಲೇಖಕ ಹಾಗೂ ವೈದ್ಯರಾದ ಡಾ. ಭರತರಾಜ್ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಿ. ಈಶ್ವರಪ್ಪ, ಕೆ. ಬಸವರಾಜಪ್ಪ, ಜುಂಜಪ್ಪ ಹೆಗ್ಗಪ್ಪ ನವರು, ಗೌರಮ್ಮ ನಿಗ್ಗುಡಗಿ ಜಯಶೀಲ ಷಡಕ್ಷರಪ್ಪ, ಪಾರ್ವತಮ್ಮ ಮರಿಲಿಂಗಪ್ಪ ಲಿಂಗಮ್ಮ ತೀರ್ಥಪ್ಪ, ತೀರ್ಥಪ್ಪ ಎಂ. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲರನ್ನೂ ಡಾ||ಅನಿಲ್ ಸ್ವಾಗತಿಸಿದರು .ನಿರೂಪಣೆ ಸುರೇಶ್ ಮಾಡಿದರು.
Leave a Comment