ಮತ್ಸ್ಯ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ*
ಶಿವಮೊಗ್ಗ, ಮೇ 12 : 2021-22ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಾಕಿ ಉಳಿದಿರುವ ಘಟಕಗಳ ಮೀನುಗಾರಿಕೆ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಗೆ ಹಂಚಿಕೆಯಾಗಿರುವ ಬಯೋಫ್ಲಾಕ್ ಕೋಳ, ಬ್ಯಾಕ್‍ಯಾರ್ಡ್ ಅಲಂಕಾರಿಕ ಮೀನು ಪಾಲನಾ ಘಟಕ, ಸಮಗ್ರ ಅಲಂಕಾರಿಕ ಮೀನು ಪಾಲನಾ ಘಟಕ, ಮೀಡಿಯಮ್ ಸ್ಕೇಲ್ ಆರ್‍ಎಎಸ್ ಘಟಕ, ಸಣ್ಣ ಪ್ರಮಾಣದ ಆರ್‍ಎಎಸ್ ಘಟಕ, ಬ್ಯಾಕ್‍ಯಾರ್ಡ್ ಆರ್‍ಎಎಸ್ ಘಟಕ, 10 ಟನ್ ಸಾಮಥ್ರ್ಯದ ಐಸಿಇ ಪ್ಲಾಂಟ್, 30 ಟನ್ ಸಾಮಥ್ರ್ಯದ ಐಸಿಇ ಪ್ಲಾಂಟ್, ಮೀನು ಮಾರಾಟಕ್ಕಾಗಿ ಸೈಕಲ್ ಮತ್ತು ಐಸ್ ಬಾಕ್ಸ್ ಖರೀದಿಗೆ ಸಹಾಯ ಹಾಗೂ ಫಿಶ್ ಕಿಯೋಸ್ಕ್ ಘಟಕ ನಿರ್ಮಾಣಕ್ಕಾಗಿ ಆರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮೀನು ಕೃಷಿಕರು/ಮೀನುಗಾರರು/ ನೊಂದಾಯಿತ ಮೀನುಗಾರಿಕೆ ಸಹಕಾರ ಸಂಘಗಳು ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕು ಮೀನುಗಾರಿಕೆ ಕಚೇರಿಯಿಂದ ಪಡೆದು ದಿ: 31/05/2022 ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222716 ಅಥವಾ ಆಯಾ ತಾಲೂಕಿನ ಮೀನುಗಾರಿಕೆ ಕಚೇರಿಗಳನ್ನು ಸಂಪರ್ಕಿಸುವುದು.
-------------
Leave a Comment