ಬಾಲಕಾರ್ಮಿಕ ಪದ್ಧತಿ ನಿಲ್ಲಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು : ಬಿ. ವೈ. ರಾಘವೇಂದ್ರ

ಆನವಟ್ಟಿ: ಕಾರ್ಮಿಕ ದಿನಾಚರಣೆಯ ವಾಕ್ಯ " ಬಾಲ ಕಾರ್ಮಿಕ ವ್ಯವಸ್ಥೆ ನಿಲ್ಲಬೇಕು, 16 ವರ್ಷ ಒಳಗಿನ ಬಾಲಕ/ಬಾಲಕಿಯರಿಗೆ ಕೆಲಸಕ್ಕೆ ಸೇರಿಸಕೊಳ್ಳಬಾರದು, ನಮ್ಮ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ, ಎಷ್ಟೇ ಕಷ್ಟ ಬಂದರು ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳೋಣ ಆಗ ಮಾತ್ರ ಆ ಮಗು ತನ್ನ ಕಾಲಮೇಲೆ ನಿಂತು ಬಾಳುವಂತಾಗುತ್ತದೆ. ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.

ಸೊರಬ ತಾಲೂಕಿನ ಅನವಟ್ಟಿಯ ವೀರಶೈವ ಸಮುದಾಯ ಭವನದಲ್ಲಿ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟ, ಕಟ್ಟಡ ಕಾರ್ಮಿಕ ಸಂಘ ವತಿಯಿಂದ ಕಾರ್ಮಿಕ ದಿನಾಚರಣೆ 2022 ಮತ್ತು ಇಶ್ರಮ್ ಕಾರ್ಡ್ ವಿತರಣೆ, ಕಾರ್ಮಿಕ ಇಲಾಖೆಯ ಕಿಟ್ ಹಾಗೂ ಗೃಹಲಕ್ಷ್ಮಿ ಬಾಂಡ್ ವಿತರಣಾ ಕಾರ್ಯಕ್ರಮವನ್ನು ಸಂಸದರಾದ ಬಿ. ವೈ. ರಾಘವೇಂದ್ರ ಅವರು ಉದ್ಘಾಟಸಿ ಮಾತನಾಡಿದರು.

ದಿವ್ಯ ಸಾನಿಧ್ಯವನ್ನು ಡಾ. ಮಹಾಂತ ಸ್ವಾಮೀಜಿಯವರು, ಜಡೆ ಮಠ,ಸೊರಬ ಕ್ಷೇತ್ರದ ಶಾಸಕರಾದ ಕುಮಾರ್ ಬಂಗಾರಪ್ಪನವರು,ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ , ಜಿಲ್ಲಾ ಕಾರ್ಯಧ್ಯಕ್ಷರಾದ ಸುಂದರ್ ಬಾಬಣ್ಣ,
ಆನವಟ್ಟಿ ಒಕ್ಕೂಟದ ಅಧ್ಯಕ್ಷರಾದ ಅಜಿತ್ ಕುಮಾರ್, ವಿರೇಶ್ ಮೇಸ್ತ್ರಿ, ಜಿಲ್ಲೆಯ KSWC ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.