*ಆಯುರ್ವೇದ ಅಭ್ಯಾಸಿಸುವ ವಿದ್ಯಾರ್ಥಿಗಳು ಸಂಸ್ಕೃತವನ್ನು ಪ್ರೀತಿಸಬೇಕು, ಸಂಸ್ಕೃತದ ವಾಚನವನ್ನು ಕಲಿಯಬೇಕು : BAMS ವಿದ್ಯಾರ್ಥಿಗಳಿಗೆ ಎಸ್ ದತ್ತಾತ್ರಿ ಕಿವಿಮಾತು*

  ಶಿವಮೊಗ್ಗ:  ಸರ್ಕಾರಿ ಆಯುರ್ವೇದ ವೈದ್ಯಕೀಯ  ಮಹಾವಿದ್ಯಾಲಯದ ಮತ್ತು ಭೋಜನ ಆಸ್ಪತ್ರೆ ಮತ್ತು ತರುಣೋದಯ ಸೇವಾ ಘಟಕದ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಸಂಸ್ಕೃತ ಭವನದಲ್ಲಿ BAMS ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ "ಪರಿವರ್ತನಾ ಕಾರ್ಯಗಾರ"ವನ್ನು KSSIDC ಯ ಉಪಾಧ್ಯಕ್ಷರಾದ ಶ್ರೀ ಎಸ್. ದತ್ತಾತ್ರಿ ಯವರು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು...

ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಯುರ್ವೇದ ಶಾಸ್ತ್ರವು ಭಾರತದ ಪ್ರಾಚೀನ ವೈದ್ಯಕೀಯ ಶಾಸ್ತ್ರವಾಗಿದ್ದು, ಸುಮಾರು 3000 ವರ್ಷಗಳ ಇತಿಹಾಸ ಹೊಂದಿರುವ ಶಾಸ್ತ್ರ. ಅಂದಿನ ದಿನಗಳಲ್ಲಿ ಆಯುರ್ವೇದ ಶಾಸ್ತ್ರವನ್ನು ಲಿಖಿತ ರೂಪದಲ್ಲಿ ಬರೆದು ಮುಂದಿನ ತಲೆಮಾರುಗಳಿಗೆ ಕೊಡಬೇಕಾದ ಹಿನ್ನೆಲೆಯಲ್ಲಿ, ಅಂದು ಪ್ರಚಲಿತವಿದ್ದ ಸಂಸ್ಕೃತ ಭಾಷೆಯಲ್ಲೇ ಎಲ್ಲಾ ಆಯುರ್ವೇದ ಸಂಹಿತೆಗಳು ರಚಿಸಲ್ಪಟ್ಟಿವೆ...

ಈ ಹಿನ್ನೆಲೆಯಲ್ಲಿ ಪ್ರಸ್ತುತ ಆಯುರ್ವೇದ ಅಭ್ಯಾಸಕ್ಕೆ ಸೇರುವ ವಿದ್ಯಾರ್ಥಿಗಳು ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಪರಿಣಿತಿ ಹೊಂದಲು ಆಳವಾದ ಅಧ್ಯಯನ ನಡೆಸಲು ಅವರು ಸಂಸ್ಕೃತವನ್ನು ಕಲಿಯುವುದು ಅನಿವಾರ್ಯವಾಗುತ್ತದೆ...

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಆಯುರ್ವೇದ ಅಭ್ಯಾಸಿಸುವ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರೀತಿಸಬೇಕು, ಸಂಸ್ಕೃತದ ವಾಚನವನ್ನು ಕಲಿಯಬೇಕು. ಸಂಸ್ಕೃತ ಸಾಹಿತ್ಯವನ್ನು ಕಲೆತಾಗ ಆಯುರ್ವೇದ ವೈದ್ಯಕೀಯ ಶಾಸ್ತ್ರದ ಪದ್ಧತಿಯಲ್ಲಿರುವ ಸಾವಿರಾರು ಪುಸ್ತಕಗಳನ್ನು ಅಧ್ಯಯನ ಮಾಡಲು ಅತ್ಯಂತ ಸುಲಭವಾಗುತ್ತದೆ. ಸಂಸ್ಕೃತ ಶ್ಲೋಕಗಳು ಅತಿ ಸಣ್ಣದಾಗಿದ್ದರೂ ಕೂಡ ಸಂಸ್ಕೃತದ ಭಾವಾರ್ಥ ಅತ್ಯಂತ ದೊಡ್ಡದಾಗಿರುತ್ತದೆ. ಆ ಒಂದು ಶ್ಲೋಕದ ಭಾವಾರ್ಥವನ್ನು ತಿಳಿಯಬೇಕಾದರೆ ಸಂಸ್ಕೃತ ಪದಗಳ ಅಧ್ಯಯನ, ಪದಗಳ ಬಳಕೆ, ಪದದ ಉಚ್ಚಾರ ನಿರಂತರವಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಹಾಗೂ ಆಯುರ್ವೇದ ಪದ್ಧತಿಯಲ್ಲಿ ಅಂಗ ಶಾಸ್ತ್ರಕ್ಕೆ ಸಂಬಂಧಪಟ್ಟ ಚಿಕಿತ್ಸೆಗಳನ್ನು ಸಂಸ್ಕೃತಗಳಲ್ಲಿ ಲಿಖಿತವಾಗಿರುವುದರಿಂದ ಆಯುರ್ವೇದದ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಯಬೇಕಾಗುತ್ತದೆ...

ಈ ಹಿನ್ನಲೆಯಲ್ಲಿ ಇಂದು ಆಯುರ್ವೇದದ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಕಲಿಯಬೇಕಾಗಿರುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಪ್ರಸಕ್ತ ಸನ್ನಿವೇಶದಲ್ಲಿ ಸಂಸ್ಕಾರ ಭಾರತಿ, ಅರುಣೋದಯ ಸಂಸ್ಕೃತ ಘಟಕ, ಹೀಗೆ ಬೇರೆ ಬೇರೆ ಘಟಕಗಳು ಸಂಸ್ಕೃತ ಸಂಭಾಷಣ ಶಿಬಿರ, ಸಂಸ್ಕೃತ ಕಲಿಕಾ ಶಿಬಿರ, ಆನ್ಲೈನ್ ಮೂಲಕ ಹಾಗೂ ಅಂಚೆಯ ಮೂಲಕ ಸಂಸ್ಕೃತವನ್ನು ಕಲಿಸಲು ಸಾಕಷ್ಟು ವ್ಯವಸ್ಥೆ ಕಲ್ಪಿಸಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಆಯುರ್ವೇದ ವೈದ್ಯಕೀಯ ಪದ್ಧತಿಯ ಜೊತೆಜೊತೆಗೆ ಸಂಸ್ಕೃತವನ್ನು ಕೂಡಾ ಕಲಿಯಬೇಕೆಂದು ವಿದ್ಯಾರ್ಥಿಗಳಲ್ಲಿ ಕಿವಿಮಾತು ಹೇಳಿ, ಶುಭ ಹಾರೈಸಿದರು...

ನಂತರ ಕಾರ್ಯಕ್ರಮದಲ್ಲಿ ತರುಣೋದಯ ಸೇವಾ ಘಟಕದ ಉಪಾಧ್ಯಕ್ಷರಾದ ಶ್ರೀ ಶೇಷಾಚಲ ರವರು ಕೂಡಾ ಮಾತನಾಡಿದರು, ಈ ಸಂದರ್ಭದಲ್ಲಿ ತರುಣೋದಯ ಸೇವಾ ಘಟಕದ ಸಂಸ್ಥಾಪಕರಾದ ಶ್ರೀ ಅ.ನ ವಿಜಯೇಂದ್ರ, ಜಿಲ್ಲಾ ಸಂಯೋಜಕರಾದ ಶ್ರೀ ಟಿ. ನರಸಿಂಹ ಮೂರ್ತಿ, ಶಿವಮೊಗ್ಗ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಪ್ರಕಾಶ್ ಕೇಕುಡಾ, ಡಾ. ವಿಶ್ವನಾಥ್, ಡಾ. ರಮೇಶ್, ವಾಣಿಜ್ಯ ಶಾಸ್ತ್ರೀ ಪ್ರಾಧ್ಯಪಕರು ಶ್ರೀನಿಧಿ, ಜಿ ಎಸ್ ಅನಂತ್ ರವರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು  ಮೊದಲನೇ ವರ್ಷದ BAMS ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.