ನಿವೃತ್ತ ASI ಸಣ್ಣಪ್ಪ ಎನ್. ಕೆ . ಹೃದಯಾಘಾತದಿಂದ ನಿಧನ- ಸಂತಾಪ
ಶಿವಮೊಗ್ಗ: ನಿವೃತ್ತ ASI ಸಣ್ಣಪ್ಪ ಎನ್. ಕೆ
ರವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿದನರಾಗಿರುತ್ತಾರೆ.ನಿಧನ ಸುದ್ದಿಯನ್ನು ತಿಳಿದ ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿ ಗಳು ತೀವ್ರ ಸಂತಾಪ ವ್ಯಕ್ತಪಡಿಸಿದರು.
ನಿವೃತ್ತ ASI ( Rtd ) ಸಣ್ಣಪ್ಪ ಎನ್. ಕೆ ದಿನಾಂಕ 01 - 06 -1953 ರಂದು ಜನಿಸಿ,
ದಿನಾಂಕ 31-05 -2013 ರಂದು ನಿವೃತ್ತಿ
ಹೊಂದಿ,ದಿನಾಂಕ 10 -04 -2018 ರಂದು ಶಿವಮೊಗ್ಗ
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು.
ಮೃತರ ಮಗ ಮಂಜುನಾಥ ರವರು ksrp ಮಾಚೇನಹಳ್ಳಿಯಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಶಾಂತಮ್ಮ,ಮತ್ತು
ಮಕ್ಕಳಾದ ಮಂಜುನಾಥ, ಮತ್ತು ಅಶ್ವತ್ ಮತ್ತು ಅಪಾರ
ಬಂದು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು
ಪತ್ನಿ,ಪುತ್ರರು
ಮತ್ತು ಬಂದು ಮಿತ್ರರಿಗೆ ದುಃಖ
ಬರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಪಧಾದಿಕಾರಿಗಳು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯ ಕ್ರಿಯೆಗೆ ಸಿಗುವ ಸಹಾಯಧನವನ್ನು ಕೊಡಿಸಿ ಕೊಡುವುದಾಗಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮ್ರತರ ಅಂತಿಮ ಸಂಸ್ಕಾರವನ್ನ
ಹಾವೇರಿ ಜಿಲ್ಲೆ ಅಣಜಿ ಗ್ರಾಮದಲ್ಲಿ ನೆರವೇರಿಸುವುದಾಗಿ ಕುಟುಂಬದವರು ತಿಳಿಸಿರುತ್ತಾರೆ.
Leave a Comment