ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ5ರಿಂದ ಮೇ7ರವರೆಗೆ 13ನೇ ವಾರ್ಷಿಕ ಬ್ರಹ್ಮಕಲಶೋತ್ಸವ ಮತ್ತು ಅನಂತ ಯಜ್ಞ ಶಾಲೆ ಉದ್ಘಾಟನೆ

ಶಿವಮೊಗ್ಗ,ಮೇ,02: ಸ್ವಾಮೀವಿವೇಕಾನಂದ ಬಡಾವಣೆಯಲ್ಲಿರುವ ನಾಗನಕ್ಷೇತ್ರ ಶ್ರೀ 
ನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ5ರಿಂದ ಮೇ7ರವರೆಗೆ 13ನೇ ವಾರ್ಷಿಕ 
ಬ್ರಹ್ಮಕಲಶೋತ್ಸವ ಮತ್ತು ಅನಂತ ಯಜ್ಞ ಶಾಲೆ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ 
ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯಯ ಹೇಳಿದರು. 
ಅವರು ಇಂದು ದೇವಸ್ಥಾನದಲ್ಲಿ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ 
ಮಾತನಾಡಿ, ಬ್ರಹ್ಮ ಕಲಶೋತ್ಸವದ ಜೊತೆಗೆ ನೂತನವಾಗಿ ನಿರ್ಮಾಣವಾಗಿರುವ ಆನಂತ 
ಯಜ್ಞ ಶಾಲೆ ಲೋಕಾರ್ಪಣೆ ಮಾಡಲಾಗುತ್ತದೆ. ಇದರ ಅಂಗವಾಗಿ ಷÀಷ್ಠಿಯ ದಿವಸ 
ಬೆಳಿಗ್ಗೆ 9ಗಂಟೆಗೆ ಅಷ್ಟೋತ್ತರ ಶತ ಪರಿಕಲಶ, ಬ್ರಹ್ಮ ಕಲಶಾಭಿಷೇಕ, ಹೋಮ 
ನಡೆಯುತ್ತದೆ ಎಂದರು.
5ರAದು ಬೆಳಿಗ್ಗೆ ನಾಗಸುಬ್ರಹ್ಮಮಣ್ಯ ಸ್ವಾಮಿಯ ಪ್ರಾರ್ಥನೆ, ಸಂಜೆ ಅನಂತಯಜ್ಞ 
ಶಾಲೆಯ ಸ್ಥಳ ಶುದ್ದಿ, ವಾಸ್ತು, ಹೋಮ ನಡೆಯುತ್ತದೆ. 6ರ ಬೆಳಿಗ್ಗೆ 9ಕ್ಕೆ ಶಿಖರ 
ಪ್ರತಿಷ್ಠೆ ಹಾಗೂ ಶಿಖರ ಕುಂಭಾಭೀಷೇಕ, ಸುಬ್ರಹ್ಮಣ್ಯ ಮಂತ್ರ ಹವನ, ಸಂಜೆ 6ಕ್ಕೆ 
ಬ್ರಹ್ಮ ಕಲಶ ಸ್ಥಾಪನೆ ಮಹಾಪೂಜೆ ನಡೆಯುತ್ತದೆ ಎಂದರು.
ಮೇ7ರAದು ಬೆಳಿಗ್ಗೆ 9ಕ್ಕೆ ಹೋಮ, ಬ್ರಹ್ಮಕಲಶಾಭಿಷೇಕದ ಜೊತೆಗೆ ಬೆಳಿಗ್ಗೆ 
12.30ಕ್ಕೆ ದಕ್ಷಿಣಾ ಕನ್ನಡದ ಹೆಸರಾಂತ ನಾಗಪಾತ್ರಿಗಳಾದ ವೇದ ಬ್ರಹ್ಮ ಸುಬ್ರಹ್ಮಣ್ಯ 
ಏ. ಮಧ್ಯಸ್ಥ ಅವರಿಂದ ದರ್ಶನ ಸೇವೆ ನಡೆಯುತ್ತದೆ. ಈ ಸೇವೆಯಲ್ಲಿ 
ಭಾಗವಹಿಸುವವರು ಮೇ6ರ ಒಳಗೆ ಹೆಸರು ನೊಂದಾಯಿಸಬೇಕು. ದರ್ಶನ ಸೇವೆ 
12ರಿಂದ 2ರವರೆಗೆ ನಡೆಯಲಿದೆ ಎಂದರು.
ದೇವಸ್ಥಾನ ಸಮಿತಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ಹೆಚ್.ಮಂಜುನಾಥ್ 
ಮಾತನಾಡಿ, ಮೇ6ರಂದು 12ಕ್ಕೆ ನಡೆಯುವ ಅನಂತಯಜ್ಞ ಶಾಲೆ ಉದ್ಘಾಟನೆಯನ್ನು 
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೆರವೇರಿಸುವರು. ದೇವಸ್ಥಾನ ಸಮಿತಿಯ ಅಧ್ಯಕ್ಷ 
ಕೆ.ಎಸ್.ರವೀಂದ್ರನಾಥ್ ಭಾಗವಹಿಸುವರು ಎಂದರು.
ಕಾರ್ಯದರ್ಶಿ ಕಿಶೋರ್‌ಕುಮಾರ್ ಮಾತನಾಡಿ, ನಾಗ ಸುಬ್ರಹ್ಮಣ್ಯ ದೇವಸ್ಥಾನ ನಗರದ 
ಏಕೈಕ ನಾಗಕ್ಷೇತ್ರವಾಗಿದೆ. ಇದು ಲೋಕಾರ್ಪಣೆಗೊಂಡು 13ವರ್ಷಗಳಾಗಿವೆ. 
ಪ್ರತಿವರ್ಷವೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಈ 
ವರ್ಷ ಅನಂತಯಜ್ಞ ಶಾಲೆ ಲೋಕಾರ್ಪಣೆಗೊಳ್ಳುತ್ತದೆ. ಈ ಕಾರ್ಯಕ್ರಮಕ್ಕೆ 
ಭಕ್ತರು ಆಗಮಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ನಿರ್ದೇಶಕರುಗಳಾದ ಎಂ.ಹಾಲಪ್ಪ, 
ಹೆಚ್.ರಾಮಲಿಂಗಪ್ಪ, ಸುಜೇಯಾ, ಶಿವಕುಮಾರ್, ಮಂಜುಳಾ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.