30 ಮೆಟ್ರಿಕ್ ಟನ್ ಅಕೇಶಿಯಾ ಮರಗಳ ಅಕ್ರಮ ಕಟಾವು- ಸಾಗಾಣಿಕೆ:ಇಬ್ಬರು ಆರೋಪಿಗಳ ಸಮೇತ ಮಾಲು ವಶಕ್ಕೆ
ಶಿವಮೊಗ್ಗ: ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ *ಕರೂರು ಹೋಬಳಿ ನಾಡಕಿರುವಾಸೆ ಗ್ರಾಮದ ಎಂ.ಪಿ.ಎಂ ಗೆ ಸೇರಿದ ಅಕೇಶಿಯ ಮರಗಳ ನೆಡುತೋಪಿಗೆ* ಮಂಜುನಾಥ ಎಂಬುವವರನ್ನು ಕಾವಲುಗಾರರನ್ನಾಗಿ ನೇಮಕ ಮಾಡಿಲಾಗಿರುತ್ತದೆ.
ಈತನು ದಿನಾಂಕಃ-15-05-2022 ರಂದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ *ಅಂದಾಜು ಮೌಲ್ಯ 1,50,000/ ರೂಗಳ ಸುಮಾರು 30 ಮೆಟ್ರಿಕ್ ಟನ್ ಅಕೇಶಿಯಾ ಮರಗಳನ್ನು ಅಕ್ರಮವಾಗಿ* ಕಟಾವು ಮಾಡಿಸಿ ಮರದ ತುಂಡುಗಳನ್ನು 2 ಲಾರಿಯಲ್ಲಿ ಲೋಡ್ ಮಾಡಿ ಕಳ್ಳತನದಿಂದ ಸಾಗಾಣಿಕೆ ಮಾಡಿರುತ್ತಾನೆಂದು ಸಹಾಯಕ ಅರಣ್ಯಾಧಿಕಾರಿಗಳು ಎಂಪಿಎಂ ರವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ‍್ಯೆ 0033/2022 ಕಲಂ 381, 409 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ನಂತರ ಪಿಎಸ್ಐ ಕಾರ್ಗಲ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡು ಪ್ರಕರಣದ *ಆರೋಪಿತರಾದ 1) ಮಂಜುನಾಥ, 54 ವರ್ಷ, ಕರೂರು ಗ್ರಾಮ ಸಾಗರ ಮತ್ತು 2) ಮಣಿಕಂಠ, 27 ವರ್ಷ, ಕರೂರು ಗ್ರಾಮ ಸಾಗರ* ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಲಾರಿಗಳಲ್ಲಿ ತುಂಬಿದ್ದ *ಒಟ್ಟು 30 ಮೆಟ್ರಿಕ್ ಟನ್ ಅಕೇಶಿಯ ಹಾಗೂ ನೀಲಗಿರಿ ಮರದ ತುಂಡುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 02 ಲಾರಿ ಹಾಗೂ 01 ಕಾರ್ ಅನ್ನು* ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
Leave a Comment