ಶ್ರೀಗಂಧ ಸಂಸ್ಥೆ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಮೇ. 27 ರಂದು ವೈಶಿಷ್ಟ್ಯ ವಿದ್ವತ್ ಪೂರ್ಣ ಕಾರ್ಯಕ್ರಮ

ಶಿವಮೊಗ್ಗ : ಶ್ರೀಗಂಧ ಸಂಸ್ಥೆ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಮೇ. 27 ರ ಶುಕ್ರವಾರ ಸಂಜೆ 6.30 ಕ್ಕೆವೈಶಿಷ್ಟ್ಯ ವಿದ್ವತ್ ಪೂರ್ಣ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಖ್ಯಾತ ವಾಗ್ಮಿ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಶ್ರೀ ಶ್ರೀನಿವಾಸ ಕಲ್ಯಾಣ ವಿಶೇಷ ಉಪನ್ಯಾಸ ಕಾರ್ಯಕ್ರಮದ ಜೊತೆಗೆ ಧಾರ್ಮಿಕ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಮಹೋನ್ನತ ಸೇವೆಗಾಗಿ ನಗರದ ನಾಗರಿಕರ ಪರವಾಗಿ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಹೇಳಿದರು.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಅಂಕಣಕಾರರು ಮತ್ತು ಶ್ರೀಗಂಧ ಸಂಸ್ಥೆಯ ಪದಾಧಿಕಾರಿಗಳಾದ ಕೆ.ಜಿ.ಕೃಷ್ಣಾನಂದ ಅವರ  ಲೇಖನಗಳ ಸಂಗ್ರಹ ರೂಪದ ಪುಸ್ತಕ "ಒಳಸುಳಿಯೊಳಗಿಳಿದು" ಬಿಡುಗಡೆ ನಡೆಯಲಿದೆ ಎಂದರು.
ಶ್ರೀಗಂಧ ಸಂಸ್ಥೆ ಪ್ರಾರಂಭವಾದಾಗಿನಿಂದ ಉಡುಪಿ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ್ ಅವರು ಗೌರವಾದ್ಯಕ್ಷರಾಗಿ ಸಂಸ್ಥೆಗೆ ಪ್ರೇರೇಪಕ ಶಕ್ತಿಯಾಗಿದ್ದರು. ಈಗಲೂ ಶ್ರೀಗಂಧದ ಎಲ್ಲಾ ಸಂಸ್ಕøತಿಕ, ಧಾರ್ಮಿಕ, ಸಮಾಜ ಸೇವಾ ಕಾರ್ಯಗಳಿಗೆ ಅಂತಹ ಶಕ್ತಿಯ ಭಾಗವೇ ಆಗಿರುವ ಉಡುಪಿಯ ಶ್ರೀ ಪೇಜಾವರ ಮಠದ ಪೀಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆ ಸಂಚಾಲಕ ಬಿ.ಆರ್. ಮಧುಸೂದನ್ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದದ ಕೆ.ಎಸ್.ಈಶ್ವರಪ್ಪನವರು ವಹಿಸಲಿದ್ದಾರೆ.
ಸಾರ್ವಜನಿಕರು ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.
ವಿಶೇಷ ಉಪನ್ಯಾಸ-ಅಭಿನಂದನಾ ಸಮಾರಂಭ-ಪುಸ್ತಕ ಬಿಡುಗಡೆ ಹಾಗೂ  ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ ನೂರರಷ್ಟು ಅಂಕ ಪಡೆದ ಶಿವಮೊಗ್ಗ ನಗರದ
ಐದು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ನಗರದಲ್ಲಿ ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ ತನ್ನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಿಂದಾಗಿ ಜನಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.  ಮಠ ಮಂದಿರಗಳ ಭಾಗವಾಗಿದ್ದ ರಾಮಾಯಣ, ಮಹಾಭಾರತ, ಭಗವದ್ಗೀತೆ, ಪುರಾಣ, ಉಪನಿಷತ್ತು ಮುಂತಾದವುಗಳನ್ನು ಅದರಾಚೆ ತರುವಲ್ಲಿ ಮತ್ತು ಅವುಗಳು ಸಮಾಜದ ಕಟ್ಟಕಡೆಯ ಜನರಿಗೂ ಮುಟ್ಟುವಂತೆ ಮಾಡುವ ನಿಟ್ಟಿನಲ್ಲಿ ಬಯಲು ರಂಗಮಂದಿರ ಮತ್ತು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಜನರ ಬಳಿಗೇ ಧಾರ್ಮಿಕತೆಯ ಸಾತ್ವಿಕ ಸುಗಂಧವನ್ನು ತಲುಪಿಸುವಲ್ಲಿ ಯಶಸ್ವಿಯಾದ ಸಂಸ್ಥೆ ಕೂಡ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎನ್.ಡಿ. ಸತೀಶ್, ಚೇತನ್, ವಿಶ್ವಾಸ್, ಸುಧೀಂದ್ರ ಕಟ್ಟೆ, ದಿನೇಶ್ ಆಚಾರ್ಯ, ಆದರ್ಶ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.