*ಮೇ 24 ರಂದು ವಿದ್ಯುತ್ ವ್ಯತ್ಯಯ*

ಶಿವಮೊಗ್ಗ ಮೇ 21:
       ಮೇ 24 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-4ಫೀಡರ್‍ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ 11 ಕೆವಿ ಯು.ಜಿ. ಕೇಬಲ್ ಚಾರ್ಜಿಂಗ್ ಕಾಮಗಾರಿ ಇರುವುದರಿಂದ ನಗರ ವ್ಯಾಪ್ತಿಯ ಬ್ಲಡ್ ಬ್ಯಾಂಕ್ ರಸ್ತೆ, ರೈಲ್ವೆ ಸ್ಟೇಷನ್, ಬಸವನಗುಡಿ, ವಿನಾಯಕನಗರ, ಹನುಮಂತನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.