ಜೆ.ಎನ್.ಎನ್.ಸಿ.ಇ : 'ಟೆಕ್ ಅನ್ವೇಷಣ್ - 2022'**ವಿದ್ಯಾರ್ಥಿಗಳ ನಾವಿನ್ಯ ಯೋಜನೆಗಳ ಅನಾವರಣ*

ಶಿವಮೊಗ್ಗ : ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ , ಇನ್ಫಾರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್, ಎಂ.ಸಿ.ಎ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ 80 ಕ್ಕು ಹೆಚ್ಚು ನಾವಿನ್ಯ  ಯೋಜನೆಗಳನ್ನು ಪ್ರದರ್ಶಿಸಲಾಯಿತು.
ರಸ್ತೆಗಳ ಗುಂಡಿಗಳನ್ನು ಸರಾಗವಾಗಿ ಮುಚ್ಚಬಲ್ಲ ಪಾಟ್ ಹೋಲ್ ಮಿಕ್ಸ್ ಪುಡಿ, ಐಓಟಿ ತಂತ್ರಜ್ಞಾನದ ಮೂಲಕ ನೀರು ಮತ್ತು ಪೋಷಕಾಂಶಗಳಿಂದ ಸಸ್ಯಗಳ ಬೆಳವಣಿಗೆ ನಿರ್ವಹಣಾ ಯೋಜನೆ, ಪೋರ್ಟೆಬಲ್ ಆಮ್ಲಜನಕ ಸಾಂದ್ರಕ, ಚಿತ್ರ ಸಂಸ್ಕರಣಾ ತಂತ್ರಜ್ಞಾನದ ಮೂಲಕ ಮೂತ್ರಪಿಂಡದ ಕಲ್ಲು ಹಾಗೂ ಮೆದುಳಿನ ಗಡ್ಡೆ ಪತ್ತೆ ಹಚ್ಚು ಅಪ್ಲಿಕೇಷನ್, ಕಾರ್ಖಾನೆಗಳಲ್ಲಿ ಮಾನವ ಸಂಪನ್ಮೂಲ ಕಡಿಮೆಗೊಳಿಸುವ ಮಾನವ ಅನುಯಾಯಿ ರೋಬೊಟ್, ವಿದ್ಯುತ್ ಚಾಲಿತ ಬೈಕ್, ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ ನೀರನ್ನು ಸಸ್ಯಗಳ ಮೂಲಕ ಶುದ್ದಕರಿಸುವ ಯಂತ್ರ, ಟ್ರಾಪಿಕ್ ಅಲ್ಸರ್ ರೋಗಿಗಳಿಗೆ ಉಪಯುಕ್ತವಾಗುವ ಎಲೆಕ್ಟ್ರಿಕಲ್ ಹಾಸಿಗೆ , ಬ್ಯಾಟರಿ ಚಾಲಿತ ಮೆಕ್ಕೆಜೋಳ ಬೀಜ ಬಿತ್ತನಾ ಯಂತ್ರ, ಅಂಧರಿಗೆ ವಿಶೇಷವಾಗಿ ರೂಪಿಸಿದ ಶೂ, ಎನ್ಕ್ರಿಪ್ಷನ್ ಮೂಲಕ ದತ್ತಾಂಶಗಳ ಭದ್ರತಾ ವ್ಯವಸ್ಥೆ , ಗೇಮಿಂಗ್ ವೆಬ್‌ಸೈಟ್‌, ಐಒಟಿ ಮೂಲಕ ವಿದ್ಯುತ್ ಶಕ್ತಿ ನಿರ್ವಹಣಾ ವ್ಯವಸ್ಥೆ , ಮಣ್ಣಿನ ಮತ್ತು ತಾಪಮಾನ ತೇವಾಂಶ ಸಂವೇದಕ ವ್ಯವಸ್ಥೆಯ ಮೂಲಕ ಕೃಷಿ ನೀರಾವರಿ ನಿರ್ವಹಣೆ ವ್ಯವಸ್ಥೆ ಸೇರಿದಂತೆ ಹಲವಾರು ನಾವಿನ್ಯ ಯೋಜನೆಗಳು ನೋಡುಗರನ್ನು ಆಕರ್ಷಿಸಿತು.

*ನಾವಿನ್ಯ ಯೋಚನೆಗಳು ಅನುಷ್ಟಾನಗೊಳ್ಳಲಿ :*
 ವಿದ್ಯಾರ್ಥಿಗಳ ನಾವಿನ್ಯ ಯೋಚನೆಗಳು ಹಾಗೆಯೇ ಉಳಿಯದೆ ಯೋಜನೆಗಳಾಗಿ ಅನುಷ್ಟಾನಗೊಳ್ಳುವುದರ ಮೂಲಕ ಸಾಮಾಜಿಕ ಬಳಕೆಗೆ ತೆರೆದುಕೊಳ್ಳಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ ಅಭಿಪ್ರಾಯಪಟ್ಟರು

ಜೆ.ಎನ್.ಎನ್.ಸಿ.ಇ 'ಟೆಕ್ ಅನ್ವೇಷಣ್ -2022' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಉದ್ಯಮಶೀಲ ಕೌಶಲ್ಯತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದ್ದು ಆಗ ಮಾತ್ರ ನಾವಿನ್ಯ ಚಿಂತನೆಗಳು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲು ಸಾಧ್ಯ. ಇಂದು ಸರ್ಕಾರದ ಅನೇಕ ಯೋಜನೆಗಳು ಸ್ಟಾರ್ಟ್ ಅಪ್ ಕಂಪನಿಗಳನ್ನು ಪ್ರಾರಂಭಿಸಲು ಪ್ರೇರಣಾ ವೇದಿಕೆಗಳನ್ನು ನೀಡುತ್ತಿದ್ದು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳಿ. ಈ ಮೂಲಕ ಉದ್ಯಮಿಗಳಾಗಿ ಸಮಾಜದ ಉನ್ನತಿಗೆ ಕೊಡುಗೆ ನೀಡುವುದರ ಮೂಲಕ ಬದುಕಿನ ನಿಜವಾದ ಸಾರ್ಥಕತೆ ಪಡೆಯಿರಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಮಂಜುನಾಥ. ಪಿ, ಕಾರ್ಯಕ್ರಮ ಸಂಯೋಜಕರಾದ ಜಿ.ಸುರೇಶ್, ಡಾ.ಸಂತೋಷ್ ಶಾನಭಾಗ್ ಉಪಸ್ಥಿತರಿದ್ದರು. ಅಶ್ವಿನಿ ಎಸ್.ಆರ್ ನಿರೂಪಿಸಿ ಸಿ.ಎಂ.ನೃಪತುಂಗ ವಂದಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.