ಮೇ 15 ರಿಂದ 22 ರವರೆಗೆ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ ಬಾಕ್ಸಿಂಗ್ ಸಂಸ್ಥೆಯ 5 ಕ್ರೀಡಾಪಟುಗಳು
ಶಿವಮೊಗ್ಗ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ 15 ರಿಂದ 22 ರವರೆಗೆ ನಡೆಯಲಿರುವ ಎರಡನೇ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ ಬಾಕ್ಸಿಂಗ್ ಸಂಸ್ಥೆಯ 5 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಮೊಗ್ಗ ವಿನೋದ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 45 ರಿಂದ 49 ಕೆಜಿ ವಿಭಾಗದಲ್ಲಿ ಸವಳಂಗ ಸರ್ಕಾರಿ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ್, ಜೈನ್ ಪಬ್ಲಿಕ್ ಶಾಲೆಯ ಮದಿಯ ಇಬ್ರಾಹಿಂ ಹಾಗೂ ಸರ್ವೋದಯ ಶಾಲೆಯ ನಂದನ್ ಎಸ್. ಪಾಲ್ಗೊಳ್ಳಲಿದ್ದಾರೆ. 64 ರಿಂದ 67 ಕೆಜಿ ವಿಭಾಗದಲ್ಲಿ ರಾಮಕೃಷ್ಣ ಶಾಲೆಯ ವಂಶಿ, 49 ರಿಂದ 52 ಕೆಜಿ ವಿಭಾಗದಲ್ಲಿ ಕಸ್ತೂರಿಬಾ ಶಾಲೆಯ ಕಾವ್ಯ ಭಾಗವಹಿಸುತ್ತಿದ್ದಾರೆ ಎಂದರು.
ಈ ಕ್ರೀಡಾಕೂಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿದೆ. ಹಲವು ಕ್ರೀಡೆಗಳೊಂದಿಗೆ ಬಾಕ್ಸಿಂಗ್ ಕ್ರೀಡೆಯೂ ಕೂಡ ಪ್ರಮುಖವಾಗಿದೆ. ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ಬಾಕ್ಸಿಂಗ್ ತರಬೇತಿ ನೀಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶರವಣ, ಉಪಾಧ್ಯಕ್ಷ ವೆಂಕಟೇಶ್, ಶ್ರೇಯಸ್ ಇದ್ದರು.
Leave a Comment