UGD ಕಳಪೆ ಕಾಮಗಾರಿ ವಿರುದ್ಧ SDPI ಟಿಪ್ಪು ನಗರ ವಾರ್ಡ್ ಸಮಿತಿ ಆಯುಕ್ತರಿಗೆ ಭೇಟಿ ದೂರು ಸಲ್ಲಿಕೆ.*

ಶಿವಮೊಗ್ಗ ನಗರದ ವಾರ್ಡ್ ನಂ.32 ಟಿಪ್ಪು ನಗರದಲ್ಲಿ UGD ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದೆ. UGD ಕಾಮಗಾರಿ ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದು ಮತ್ತು ಅವೈಜ್ಞಾನಿಕವಾಗಿ ಸಾಗುತ್ತಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ.ಮಹಾನಗರ ಪಾಲಿಕೆಯ ಸದಸ್ಯರು, ಇಂಜಿನಿಯರ್ ಹಾಗೂ ಅಧಿಕಾರಿಗಳು ಅದರಲ್ಲಿ ಶಾಮಿಲಾಗಿರುವ ಮಾತು ಕೇಳಿ ಬರುತ್ತಿದ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ವತಿಯಿಂದ ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರಿಗೆ ಭೇಟಿ ಮಾಡಿ UGD ಕಾಮಗಾರಿಯಲ್ಲಿ ನಡೆಯುತ್ತಿರುವ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ತನಿಖೆಗೆ ಒಳಪಡಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು SDPI ಟಿಪ್ಪು ನಗರ ವಾರ್ಡ್ ಸಮಿತಿ ಆಗ್ರಹಿಸಿ ಮನವಿ ನೀಡಿದೆ.
ಕಳಪೆ ಕಾಮಗಾರಿ ಆಗಿರುವ UGD ಗಳನ್ನು ಪರಿಶೀಲಿಸಿ ಉನ್ನತ ಮಟ್ಟದ ಕಾಮಗಾರಿ ನಡೆಸಬೇಕು ಎಂದು SDPI ಆಗ್ರಹಿಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.