ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ SSLC ಶಿಕ್ಷಣವನ್ನು ಕೇವಲ ಒಂದು ರೂಪಾಯಿಗೆ ನೀಡಲಾಗುವುದು:ಶಾಲೆಯ ಫೌಂಡರ್ ಡೈರೆಕ್ಟರ್ ಎಸ್.ಬಿ. ಜಗದೀಶ್ ಗೌಡ

ಶಿವಮೊಗ್ಗ: ಹೊಳೆಹೊನ್ನೂರು ರಸ್ತೆಯ ಗುರುಪುರದಲ್ಲಿ 2013 ರಲ್ಲಿಯೇ ಆರಂಭವಾಗಿರುವ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕ ಹಿತದೃಷ್ಠಿಯಿಂದ ಎಸ್ಎಸ್ಎಲ್ಸಿ ಶಿಕ್ಷಣವನ್ನು ಕೇವಲ ಒಂದು ರೂಪಾಯಿಗೆ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಶಾಲೆಯ ಫೌಂಡರ್ ಡೈರೆಕ್ಟರ್ ಎಸ್.ಬಿ. ಜಗದೀಶ್ ಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆ ಮಲೆನಾಡಿನಲ್ಲಿಯೇ ಮನೆ ಮಾತಾಗಿದ್ದು, ಅತ್ಯಂತ ಪ್ರಸಿದ್ಧಿಯಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಶಿಕ್ಷಣ ಇಂದು ಬಹಳ ಮುಖ್ಯ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಅದರಲ್ಲೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉನ್ನತ ಆದರ್ಶವನ್ನಿಟ್ಟುಕೊಂಡು ನಮ್ಮ ಸಂಸ್ಥೆ ಎಸ್ಎಸ್ಎಲ್ಸಿ ಓದುತ್ತಿರುವ ಬಡ ಪ್ರತಿಭಾವಂತ ಮಕ್ಕಳಿಗೆ ಕೇವಲ 1 ರೂ.ನಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ಇದು ಶಿವಮೊಗ್ಗದಲ್ಲಿಯೇ ಖಾಸಗಿ ಶಾಲೆಗಳಲ್ಲಿಯೇ ಪ್ರಥಮವಾಗಿದೆ.  ಹಲವು ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದ ಕಲಿಕೆಯಲ್ಲಿ ಹಿಂದುಳಿದ ಶೇ. 40 ರಷ್ಟು ಅಂಕ ಪಡೆದ  ಮಕ್ಕಳಿಗೆ ನಮ್ಮ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆ ಸವಾಲಿನ ರೀತಿಯಲ್ಲಿ ಪ್ರವೇಶ ನೀಡಿ ಅವರನ್ನು ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸುವಂತೆ ಸಾಧನೆ ಮಾಡಿರುವುದು ನಮ್ಮ ಶಾಲೆಯ ಹೆಮ್ಮೆಯಾಗಿದೆ ಎಂದರು.
ನಮ್ಮ ಶಾಲೆಯ ಮಕ್ಕಳನ್ನು ನಾವು ಕೇವಲ ಅಂಕಗಳ ಹುಳುಗಳನ್ನಾಗಿ ಮಾಡುತ್ತಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ಕ್ರೀಡೆ, ಸಂಸ್ಕೃತಿ, ವಿಷಯಗಳನ್ನು ಕೂಡ ಹೆಚ್ಚು ಕಲಿಸುತ್ತೇವೆ. ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ತೆರೆದುಕೊಳ್ಳುವಂತೆ ತಯಾರು ಮಾಡುತ್ತೇವೆ. ಬಹುಶಃ ಜಿಲ್ಲೆಯಲ್ಲಿಯೇ ಇಂತಹ ಹಲವಾರು ವಿಷಯಗಳನ್ನು ಮಕ್ಕಳಿಗೆ ಕಲಿಸುವ ಏಕೈಕ ಶಾಲೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದರು.
ಹೊಳೆಹೊನ್ನೂರು ರಸ್ತೆಯ ಗುರುಪುರದಲ್ಲಿ 2013 ರಲ್ಲಿಯೇ ಆರಂಭವಾಗಿರುವ ನಮ್ಮ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಗೆ 2019 ರಲ್ಲಿ ಬೆಸ್ಟ್ ಇಂಟರ್ ನ್ಯಾಷನಲ್ ಶಾಲೆ ಎಂಬ ಅವಾರ್ಡ್ ಸಿಕ್ಕಿದೆ. ಗುರುಪುರದಲ್ಲಿ ಇರುವ ಶಾಲೆ 3 ಎಕರೆಗೂ ಹೆಚ್ಚು ಎಕರೆ ಜಾಗದಲ್ಲಿದ್ದು, ಸುಸಜ್ಜಿತ ಕಟ್ಟಡಗಳು, ಮಕ್ಕಳಿಗಾಗಿ ಪ್ರತ್ಯೇಕ ಆಸನ,  ಶೌಚಾಲಯ ವಿಶಾಲವಾದ ಆಟದ ಮೈದಾನ, ಪಾಠೋಪಕರಣಗಳು, ಕ್ರೀಡೋಪಕರಣಗಳು, ಉತ್ತಮವಾದ ಲೈಬ್ರರಿ, ನುರಿತ ಶಿಕ್ಷಕರು ಇದ್ದು, ಶೈಕ್ಷಣಿಕ ಅಭಿವೃದ್ಧಿಗೆ ಇರಬೇಕಾದ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಹೊಂದಿದೆ ಎಂದರು. 
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಲ್ಲದೇ, ವೈಯಕ್ತಿಕ ಆರೋಗ್ಯದ ದೃಷ್ಠಿಯಿಂದಲೂ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಾ ಬಂದು ತನ್ನ ಛಾಪು ಮೂಡಿಸಿದೆ. ಕಳೆದ 25 ವರ್ಷಗಳಾದರೂ ಸಿಗದ ಮುಂದಾಲೋಚನೆಯ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಪೋಷಕರಿಂದ ಸೈ ಎನಿಸಿಕೊಂಡು ಈ ಶಾಲೆ ಧನಾತ್ಮಕವಾಗಿ ಬೆಳೆಯುತ್ತಿದೆ. ಮಕ್ಕಳ ಪಾಲಿಗಂತೂ ಇದು ಒಂದು ಆಶಾಕಿರಣವೇ ಆಗಿದೆ. ಈ ಶಾಲೆ ಕುರಿತು ಗೂಗಲ್ ರೇಟಿಂಗ್ ಮತ್ತು ರೀವೀವ್ ಗಳನ್ನು ನೋಡಿದರೆ ಶಾಲೆಯ ಬಗ್ಗೆ ಅತ್ಯಂತ ಗೌರವ ಮೂಡುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ತಿಳಿಸಿದರು.
ಪೋಷಕರು ಆಸೆ, ಪ್ರೋತ್ಸಾಹ, ಸಹಕಾರ ಹೀಗೆ ಎಲ್ಲಾ ರೀತಿಯ ಭಾವನೆಗಳನ್ನು ಇಟ್ಟುಕೊಂಡು ಎಸ್.ಪಿ. ಜಗದೀಶ್ ಗೌಡರು ಮುಂದುವರೆಯುತ್ತಿದ್ದು, ಇವರು ಫೌಂಡರ್ ಡೈರೆಕ್ಟರ್ ಆಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ನೀಡಬೇಕು ಎನ್ನುವುದು ಇವರ ಹೆಬ್ಬಯಕೆಯಾಗಿದೆ.
ಶಾಲೆಯಲ್ಲಿ ಈಗ ಪ್ಲೇಗ್ರೂಪ್ ನಿಂದ 9 ನೇ ತರಗತಿಗಳಿಗೆ(ಸಿ.ಬಿ.ಎಸ್.ಇ.) ಪ್ರವೇಶ ಆರಂಭಗೊಂಡಿದೆ. ಎಸ್ಎಸ್ಎಲ್ಸಿ ದಾಖಲಾತಿ ಕೂಡ ಆರಂಭವಾಗಿದ್ದು, ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ತಮ್ಮ ಹೆಸರು ನೋಂದಾಯಿಸಿಕೊಳ್ಳುವುದರ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ 94482 20170, 81053 60578 ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ಅನಿತಾ ಸುರೇಶ್, ಶಶಿಕುಮಾರ್ ಎಸ್.ಪಿ., ಜಗದೀಶ್, ಸವಿತಾ, ಪ್ರತಾಪ್ ಎಲ್.ಪಿ., ಫರಿಜಾನ್

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.