ಶಿವಮೊಗ್ಗ ಉಪ ವಿಭಾಗದ ಡಿವೈಎಸ್ ಪಿಯಾಗಿ ಬಾಲರಾಜ್ ಅಧಿಕಾರ ಸ್ವೀಕಾರ .

ಶಿವಮೊಗ್ಗ :--ಸರ್ಕಾರದ ಆದೇಶದಂತೆ ಶಿವಮೊಗ್ಗ ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿಸೇವೆ ಸಲ್ಲಿಸಿದ  ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಜನ ಮೆಚ್ಚುಗೆ ಗಳಿಸಿದ ಬಾಲರಾಜ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಬಾಲ್ ರಾಜ್ ರವರು ಈ ಹಿಂದೆ ತೀರ್ಥಹಳ್ಳಿಯಲ್ಲಿ ಸೇವೆ ಸಲ್ಲಿಸುವಾಗ ರಾಜ್ಯದ ಅತಿ ದೊಡ್ಡ ಮಹತ್ವದ ಗಂಭೀರ ಪ್ರಕರಣಗಳಾದ ನಕ್ಸಲ್ ಸಂಘಟನೆಯನ್ನು ನಿಯಂತ್ರಣ ಮಾಡಲು ಯಶಸ್ವಿಯಾಗಿದ್ದರು .
ಬೆಂಗಳೂರಿನಂತಹ ಕೇಂದ್ರಸ್ಥಾನವನ್ನು ಸೇವೆ ಸಲ್ಲಿಸಿ ಲೋಕಾಯುಕ್ತ ಮತ್ತು ಸಿಒಡಿಯಲ್ಲಿ ಸಹ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದವರಾಗಿದ್ದಾರೆ .
ಶಿವಮೊಗ್ಗ ಜಿಲ್ಲೆಯಲ್ಲಿ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಹೊಂದಿದವರಾಗಿದ್ದು .
ಕ್ರಿಮಿನಲ್ ಗಳ ನಿಯಂತ್ರಿಸುವುದರ ಜತೆಯಲ್ಲಿ ಶಾಂತಿ ,ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹೆಚ್ಚಿನ  ಹೊಣೆಗಾರಿಕೆಯೂ ಬಾಲರಾಜ್ ಅವರ ಮೇಲಿದ್ದು .
ಶಿವಮೊಗ್ಗದ ಜನತೆ  ಡಿವೈಎಸ್ಪಿ ಬಾಲರಾಜ್ ರವರಿಂದ ಉತ್ತಮ ವಾದ  ಕಾರ್ಯ ಯೋಜನೆ ಗಳು  ಮತ್ತು ಸೇವೆಯಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ .

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.