ಶಿವಮೊಗ್ಗ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಬಾಲರಾಜ್ ನೇಮಕ
ಶಿವಮೊಗ್ಗ /ಬೆಂಗಳೂರು :---ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಡಿವೈಎಸ್ಪಿ ಬಾಲರಾಜ್ ರವರನ್ನು ಶಿವಮೊಗ್ಗ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ .
ಇವರು ಸಿಒಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು .ಈ ಹಿಂದೆ ಅರುಣ್ ಚಕ್ರವರ್ತಿ ಅವರು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಆಗಿದ್ದಾಗ ಬಾಲರಾಜ್ ರವರು ತೀರ್ಥಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ .ನಟೋರಿಯಸ್ ತಮಿಳು ಕುಮಾರನಶಿವಮೊಗ್ಗದಲ್ಲಿ ನಡೆದ ಎನ್ಕೌಂಟರ್ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದರು .
ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ನಿಯಂತ್ರಣಕ್ಕೆ ತರಲು ತೀರ್ಥಹಳ್ಳಿಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಬಾಲರಾಜ್ ಅವರು ಅತಿ ಹೆಚ್ಚಿನ ಶ್ರಮ ವಹಿಸಿದ್ದರು ಎಂಬ ಹೆಗ್ಗಳಿಕೆಯಿದೆ .
ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಒಂದಲ್ಲ ಒಂದು ಅಹಿತಕರ ಘಟನೆಗಳು ಸಂಭವಿಸಿವೆ. ಅಹಿತಕರ ಹಲ್ಲೆ ಪ್ರಕರಣಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಯಾಗುತ್ತಿದೆ.ಕಾನೂನು ಶಾಂತಿ ಮತ್ತು ಸುವ್ಯವಸ್ಥೆಯಲ್ಲಿ ಕಾಪಾಡುವಲ್ಲಿ ಸರಕಾರಕ್ಕೆ ತಲೆ ನೋವಾಗುತ್ತಿದೆ .ಈ ಕಾರಣದಿಂದ ಸರ್ಕಾರವು ದಕ್ಷ ಪ್ರಾಮಾಣಿಕ ಅಧಿಕಾರಿ ಬಾಲರಾಜ್ ರವರನ್ನು ಡಿವೈಎಸ್ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

Leave a Comment