ಜಯಕರ್ನಾಟಕ ಸಂಘಟನೆಯ ನಾಜೀಮ, ಮೋಹನ್ ದೇವರಾಜ್, ಪ್ರೇಮ ಅವರಿಗೆ ಚಂದನವನದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನ
ಶಿವಮೊಗ್ಗ: ಸಮಾಜಸೇವೆಯಲ್ಲಿ ಸದಾ ನಿರತರಾಗಿರುವ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ನಾಜೀಮ, ಮೋಹನ್ ದೇವರಾಜ್, ಪ್ರೇಮ ಅವರನ್ನು ಗೋಪಾಳದ ಚಂದನವನದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ನಾಜೀಮ, ಪ್ರೇಮ, ಮೋಹನ್ ದೇವರಾಜ್ ಅವರು ಕನ್ನಡಪರ ಸಂಘಟನೆಯಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ. ಕೊರೋನಾದ ಸಂದರ್ಭದಲ್ಲಿ ಈ ಮೂವರು ಪದಾಧಿಕಾರಿಗಳೊಂದಿಗೆ ಸೇರಿಕೊಂಡು ಸುಮಾರು 70 ದಿನಗಳ ಕಾಲ ಹಸಿದವರಿಗೆ ಅನ್ನ ನೀಡಿದ್ದಾರೆ. ಕನ್ನಡ ನಾಡು-ನುಡಿಯ ಬಗ್ಗೆ ಕಾಳಜಿ ಇರುವ ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಸಮಾಜಸೇವೆ ಮಾಡಿದವರನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ. ಇದರಿಂದ ಅವರು ಮತ್ತಷ್ಟು ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ಇವರ ಸೇವೆ ನಿರಂತರವಾಗಿರಲಿ. ಪಾರ್ಕ್ ಸ್ವಚ್ಛತೆಯಲ್ಲಿ ತೊಡಗುವುದಾಗಿ ಅವರು ಹೇಳಿರುವುದು ಅವರ ಪರಿಸರಪ್ರೇಮವನ್ನು ತಿಳಿಸುತ್ತದೆ ಎಂದರು.
ಕಾರ್ಯಪಾಲಕ ಇಂಜಿನಿಯರ್ ಹಾಲೇಶಪ್ಪ ಮಾತನಾಡಿ, ನಾಜೀಮ, ಪ್ರೇಮ, ಮೋಹನ್ ಭಾವೈಕ್ಯತೆಯ ಸಂಕೇತವಾಗಿದ್ದಾರೆ. ಮನುಷ್ಯ ಪ್ರೇಮದ ಇವರ ಸಮಾಜಮುಖಿ ಸೇವೆ ಹೀಗೆ ನಿರಂತರವಾಗಿರಲಿ ಎಂದರು.
ಶಶಿಧರ್ ಮಾತನಾಡಿ, ಇವರ ಸೇವೆ ದೇವರು ಮೆಚ್ಚುವಂತದ್ದು. ಮತ್ತಷ್ಟು ಕ್ರಿಯಾಶೀಲರಾಗಿ ಸಮಾಜಮುಖಿಯಾಗಿ ಇವರ ಸಂಘಟನೆ ಬೆಳೆಯಲಿ ಎಂದರು.
ನಾಜಿಮಾ, ಪ್ರೇಮ, ದೇವರಾಜ್ ಮಾತನಾಡಿ, ನಮ್ಮ ಸೇವೆಯನ್ನು ಗುರುತಿಸಿ ಅಭಿನಂದಿಸಿದ್ದಕ್ಕೆ ಕೃತಜ್ಞತೆಗಳು, ಇದರಿಂದ ಮತ್ತಷ್ಟು ಸೇವೆ ಮಾಡುವ ಹಂಬಲ ನಮಗಾಗಿದೆ. ನಮ್ಮ ಸಂಘಟನೆಯ ಪದಾಧಿಕಾರಿಗಳು ಸೇರಿ ಆಗಾಗ ಪಾರ್ಕ್ ಅನ್ನು ಸ್ವಚ್ಛಗೊಳಿಸುತ್ತೇವೆ. ಪರಿಸರ ಪ್ರೇಮ, ಬಡವರಿಗೆ ಸಹಾಯ, ಕನ್ನಡ ಪ್ರೀತಿ ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದರು.
ಆರುಂಡಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಿ ನಾಗಪ್ಪ, ಜಿ ಕೆಂಚಪ್ಪ, ಶಿವಣ್ಣ, ಧರ್ಮಪ್ಪ, ನಾರಾಯಣ್, ಶಬಾನಾ, ಪ್ರತಿಕ್ಷಾ, ನಯಾಜ್ ಅಹ್ಮದ್, ನವಿಲಪ್ಪ, ಭಾರತಿ, ಶೃತಿ, ಮಂಜುನಾಥ್, ದುಗ್ಗಪ್ಪ, ವಿಜಯಕುಮಾರ್, ಚಂದ್ರಶೇಖರ್ ಮೊದಲಾದವರಿದ್ದರು.
Leave a Comment