ರಾಜ್ಯದಲ್ಲಿ ಓಬವ್ವ ಆತ್ಮರಕ್ಷಣಾ ಕೌಶಲ್ಯ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲೂ ಮುಂದುವರಿಸುವಂತೆ ಮನವಿ

 ಶಿವಮೊಗ್ಗ :ನಗರದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ  ಬಸವರಾಜ್ ಬೊಮ್ಮಾಯಿ ರವರಿಗೆ ಕರ್ನಾಟಕ ರಾಜ್ಯ  ಕರಾಟೆ ಸಂಸ್ಥೆ ವತಿಯಿಂದ ರಾಜ್ಯದಲ್ಲಿ ಸ್ವರಕ್ಷಣಾ ಕೌಶಲ್ಯಕ್ಕೆ ಒತ್ತು ನೀಡಿರುವ ಬಗ್ಗೆ  ಅಭಿನಂದಿಸಿ ರಾಜ್ಯದಲ್ಲಿ ಓಬವ್ವ ಆತ್ಮರಕ್ಷಣಾ ಕೌಶಲ್ಯ ಯೋಜನೆಯನ್ನು  ಮುಂದಿನ ಶೈಕ್ಷಣಿಕ ವರ್ಷದಲ್ಲೂ  ಮುಂದುವರಿಸುವಂತೆ ಮನವಿ ಮಾಡಲಾಯಿತು 

 ಕರ್ನಾಟಕ ಸರ್ಕಾರವು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ  ಕೌಶಲ್ಯ ತರಬೇತಿಯ ಅವಶ್ಯಕತೆಯನ್ನು ಮನಗಂಡು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಓಬವ್ವ  ಆತ ರಕ್ಷಣಾ  ಕೌಶಲ್ಯ  ತರಬೇತಿ ಕಾರ್ಯಕ್ರಮವನ್ನು ಪರಿಚಯಿಸಿರುವುದು  ಬಹಳ ಉಪಯುಕ್ತ ಹಾಗೂ ಸಂತಸದ ವಿಚಾರವಾಗಿದೆ ಎಂದು ತಿಳಿಸಿ  ಈ ಕುರಿತು ಮುಖ್ಯಮಂತ್ರಿಗಳಿಗೆ ಅಭಿನಂದಿಸಿ ಪ್ರಸ್ತುತ ಮೇಲ್ಕಂಡ ಯೋಜನೆಯು ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿಗೆ ಮಾತ್ರ ಸೀಮಿತವಾಗಿದ್ದು ಅದನ್ನು ಮುಂದಿನ ವರ್ಷದ ಶೈಕ್ಷಣಿಕ ವರ್ಷದಲ್ಲೂ ಮುಂದುವರೆಸಿ ರಾಜ್ಯದಲ್ಲಿ ಸ್ವರಕ್ಷಣಾ ಕೌಶಲ್ಯ ತರಬೇತಿ ಗೆ ಒತ್ತು ನೀಡುವ ಮುಖಾಂತರ ವಿದ್ಯಾರ್ಥಿನಿಯರಿಗೆ ಧೈರ್ಯ  ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕೆಂದು ಮನವಿ ಮಾಡಲಾಯಿತು 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಅಧ್ಯಕ್ಷರಾದ  ಎಸ್ ಎಲ್ ವಿನೋದ್ ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.