ಪುರುಷರಿಗಿಂತ ಮಹಿಳೆ ಹೆಚ್ಚು ಸಾಮಥ್ಯ೯ ಹೊಂದಿದವಳಾಗಿದ್ದು ಮಹಿಳೆಯರಿಗೆ ಮೀಸಲಾತಿ ಬೇಕಾಗಿಲ್ಲ : ಇನ್ಫೊಸಿಸ್ ಫೌಂಡೇಷನ್ನಿನ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ
ಶಿವಮೊಗ್ಗ: ಪುರುಷರಿಗಿಂತ ಮಹಿಳೆ ಹೆಚ್ಚು ಸಾಮಥ್ಯ೯ ಹೊಂದಿದವಳಾಗಿದ್ದು ಮಹಿಳೆಯರಿಗೆ ಮೀಸಲಾತಿ ಬೇಕಾಗಿಲ್ಲ ಎಂದು ಇನ್ಫೊಸಿಸ್ ಫೌಂಡೇಷನ್ನಿನ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅಭಿಪ್ರಾಯಪಟ್ಟರು.
ಅವರು ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯು ತನ್ನ ಅಮೃತ ಮಹೋತ್ಸವದ ವಿಶೇಷ ಉಪನ್ಯಾಸ ಮಾಲಿಕೆ-2ರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಕಾಲೇಜು ಹೆಣ್ಣು ಮಕ್ಕಳೊಂದಿಗೆ ಸಂವಾದದಲ್ಲಿ ಮಾತನಾಡುತ್ತಿದ್ದರು.
ಮಹಿಳೆ ಹೆಚ್ಚು ಶಕ್ತಿಶಾಲಿಯಾಗಿದ್ದರೂ ನೈಸರ್ಗಿಕವಾಗಿ ಶಕ್ತಿಶಾಲಿಯಾಗಿರುವ ಪುರುಷರೊಂದಿಗೆ ಸ್ಪರ್ಧೆಸಲ್ಲ ಎಂದ ಅವರು ಮೆರಿಟ್ ಆಧಾರದ ಮೇಲೆ ಹೋದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಪುನರುಚ್ಛರಿಸಿದರು.
ಇನ್ನೊಂದು ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ಸರಳ ಜೀವನ ಕಷ್ಟ ಅಲ್ಲ. ಬರೇ ಓದೋದಲ್ಲಾ. ಜೀವನವನ್ನು ಕಣ್ತೆರೆದು ನೋಡಬೇಕು. ಜೀವನದ ಪ್ರತಿಯೊಂದು ವಿಫಲತೆಯೂ ಉನ್ನತ ಮಟ್ಟಕ್ಕೇರಲು ಮೆಟ್ಟಿಲುಗಳು ಎಂದು ಅವರು ಸ್ಪೂರ್ತಿಯ ಮಾತುಗಳನ್ನಾಡಿದರು.
ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಕರ್ತವ್ಯದಲ್ಲಿ ನೈತಿಕತೆ ಇರಬೇಕು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕು. ತನ್ನ ಜೀವನದ ನಿರ್ಧಾರವನ್ನು ತಾನೇ ತೆಗೆದುಕೊಳ್ಳಬೇಕು ಎಂದ ಅವರು ಆರ್ಥಿಕ ಸ್ವಾತಂತ್ರತೆ ಬಂತು ಎಂದು ಮಹಿಳೆ ಧಿಮಾಕು ತೋರಿಸಬಾರದು ಎಂದು ಕಿವಿ ಮಾತು ಹೇಳಿದರು.
ಆಧುನಿಕ ವಿಜ್ಞಾನ ತಂತ್ರಜ್ಞಾನ ಪ್ರಶ್ನೆಗೆ ಉತ್ತರಿಸಿದ ಅವರು ಅಂತರ್ಜಾಲವನ್ನು ಅವಶ್ಯಕತೆ ಇದ್ದರೆ ಮಾತ್ರ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿ ನಿತ್ಯ ಕ್ರಿಯಾಶಿಲರಾಗಿರಬೇಕು. ಯಾವಾಗ ದಿನ ನಿತ್ತಯದ ಕರ್ತವ್ಯದಲ್ಲಿ ಆಸಕ್ತಿ ಕುಂದುತ್ತದೆಯೋ ಆವಾಗ ವೃದ್ಧಾಪ್ಯ ಬಂದಂತೆ ಎಂದು ಮಾರ್ಮಿಕವಾಗಿ ನುಡಿದರು.
ಮಹಿಳಾ ಉದ್ಯಮ ಪುರುಷ ಉದ್ಯಮ ಎಂಬುದಿಲ್ಲ. ಉದ್ಯಮ ಆರಂಭಿಸುವಾಗ ಬಹಳ ಕಷ್ಟ ಪಡಬೇಕು ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಮಹಿಳಾ ಸಬಲೀಕರಣವಾಗಿಲ್ಲ. ಸಬಲೀಕರಣವಾಗಬೇಕಾದರೆ ಸಮಾನತೆ ಬರಬೇಕು ಎಂದು ತಿಳಿಸಿದರು.
ಸ್ತ್ರೀ ಮತ್ತು ಪುರುಷ ವಿರುದ್ಧ ಅಲ್ಲ. ಪತಿ-ಪತ್ನಿ ವಿರುದ್ಧ ಅಲ್ಲ. ಸೂರ್ಯ ಚಂದ್ರರಂತೆ ಸ್ನೇಹದಿಂದ ಬಾಳಬೇಕು ಎಂದು ಹೇಳಿದರು.
## ಕನ್ನಡಾಭಿಮಾನ ಮೆರೆದ ಸುಧಾ ಜೀ##
ಕನ್ನಡದ ಮೇಲೆ ನನಗೆ ಬಹಳ ಅಭಿಮಾನ. ಬೇರೆ ಗತಿ ಇಲ್ಲದೆ ಹೋದರೆ ಬೇರೆ ಭಾಷೆಯಲ್ಲಿ ಮಾತನಾಡುತ್ತೇನೆ. ಕನ್ನಡ ಮಾತೃ ಭಾಷೆ. ಅದನ್ನ ಬಿಡಬಾರದು ಎಂದು ವಿದ್ಯಾರ್ಥಿನಿಯೋರ್ವಳು ಇಂಗ್ಲೀಷಿನಲ್ಲಿ ಪ್ರಶ್ನೆ ಕೆಳಿದ್ದಕ್ಕೆ ಈ ರೀತಿ ಪ್ರತಿಕ್ರಯಿಸಿದರು.##
##ಸಾಮಾಜಿಕ ಸೇವೆಯಿಂದ ನೆಮ್ಮದಿ##
ವಾರಕ್ಕೆರಡು ತಾಸಾದರೂ ಸಾಮಾಜಿಕ ಸೇವೆ ಮಾಡಿ. ಬಡವರಿಗೆ ಸಹಾಯ ಮಾಡಿ. ಮಾನಸಿಕ ನೆಮ್ಮದಿ ಸಂತೋಷ ದೊರೆಯುತ್ತದೆ ಎಂದು ತಮ್ಮ ಸಾಮಾಜಿಕ ಸೇವೆಯ ಸವಿಯನ್ನು ಉಣಬಡಿಸಿದರು ಸುಧಾ ಜೀ##
ಎನ್.ಇ.ಎಸ್. ನೂತನ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅದ್ಯಕ್ಷತೆ ವಹಿಸಿದ್ದರು. ಎನ್.ಇ.ಎಸ್.ಕಾರ್ಯದರ್ಶಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಆರ್.ಎಂ.ಜಗದೀಶ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಚಾರ್ಯ ಡಾ.ಎಚ್.ಎಸ್.ನಾಗಭೂಷಣ ವಂದಿಸಿದರು.
ವರದಿ: ಡಾ.ಬಾಲಕೃಷ್ಣ ಹೆಗಡೆ

Leave a Comment