ತೀರ್ಥಹಳ್ಳಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನೂತನ ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ .
ತೀರ್ಥಹಳ್ಳಿ :---ಪಟ್ಟಣದಲ್ಲಿಕುರುವಳ್ಳಿ ಹರಿಯುತ್ತಿರುವ ತುಂಗಾನದಿಗೆ ನೂತನವಾಗಿ ನಿರ್ಮಿಸುತ್ತಿರುವ 56 ಕೋಟಿ ರೂಪಾಯಿಗಳ ವೆಚ್ಚದ ಸೇತುವೆ ಕಾಮಗಾರಿಯು ಭರದಿಂದ ಸಾಗುತ್ತಿದ್ದು .ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ವಿಭಾಗಕ್ಕೆ ಸೇರುತ್ತವೆ .ನಿನ್ನೆ ದಿನ ಮಧ್ಯಾಹ್ನ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮತ್ತು ಗುತ್ತಿಗೆದಾರರೊಂದಿಗೆ ಕಾಮಗಾರಿಯನ್ನೂ ವೀಕ್ಷಣೆ ಮಾಡಿದರು .
ಪಟ್ಟಣದ ಕುರುವಳ್ಳಿ ಯಿಂದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಹಾದು ಹೋಗಿ ತೋಟಗಾರಿಕೆ ಇಲಾಖೆಯ ಭೂಮಿ ಪಕ್ಕದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆಯ ಬಾಳೆಬೈಲು ತೀರ್ಥಹಳ್ಳಿ ಆಗುಂಬೆ ರಸ್ತೆ ರಾಷ್ಟ್ರೀಯ ಹೆದ್ದಾರಿ 169 (ಎ ) ಸೇರುತ್ತದೆ .ಕುರುವಳ್ಳಿಯಲ್ಲಿ ತುಂಗಾನದಿಗೆ ಸರ್ . ಎಂ. ವಿಶ್ವೇಶ್ವರಯ್ಯ ರವರ ಕಾರ್ಯಯೋಜನೆಯಲ್ಲಿ 75 ವರ್ಷಗಳ ಹಿಂದೆ ಮಹಾರಾಜರ ಅವಧಿಯಲ್ಲಿ ನಿರ್ಮಿಸಿದ ತುಂಗಾ ಕಮಾನು ಸೇತುವೆ ಯು ಈಗಾಗಲೇ ದುರಸ್ತಿಗೆ ಬಂದಿದ್ದು ಅದರ ಬದಲಿಗೆ ಈ ನೂತನ ಸೇತುವೆ ನಿರ್ಮಿಸಲಾಗುತ್ತಿದೆ .
ಈ ಸೇತುವೆ ಕಾಮಗಾರಿಯು 56 ಕೋಟಿ ವೆಚ್ಚ ತಗಲಿದ್ದು ,ಆಜುಬಾಜಿನ ರಸ್ತೆ, ಮಣ್ಣು ತುಂಬುವುದೆಂದು ಎಲ್ಲ ವೆಚ್ಚಗಳು ಸೇರಿ ಸುಮಾರು 70--80 ಕೋಟಿ ರೂಪಾಯಿಗಳ ಆಗುವ ಸಾಧ್ಯತೆಯಿದೆ .ನೂತನ ಸೇತುವೆ ಕಾಮಗಾರಿಯೂ ಪ್ರತಿಷ್ಟಿತ ನ್ಯಾಷನಲ್ ಗುತ್ತಿಗೆ ಕಂಪೆನಿಯ ಹಾಜಿ ಇಬ್ರಾಹಿಂ ಸಹೋದರರು ನಿರ್ಮಿಸುತ್ತಿದ್ದು, 2024ರಲ್ಲಿ ಕಾಮಗಾರಿ ಮುಗಿಯುತ್ತದೆ ಮತ್ತು ಸಂಚಾರಕ್ಕೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ .ಸೇತುವೆ ಕಾಮಗಾರಿಯು ಪಾರದರ್ಶಕವಾಗಿ ಮತ್ತು ಭರದಿಂದ ಸಾಗುತ್ತಿದ್ದು ಅತಿ ಶೀಘ್ರದಲ್ಲೇ ಕಾಮಗಾರಿಯನ್ನು ಮುಗಿಸಬೇಕೆಂಬ ಕಾರ್ಯ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ .
ಗೃಹ ಸಚಿವ ಆರಗ ಜ್ಞಾನೇಂದ್ರ ರವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳಾದ ನವೀನ್ ರಾಜ್ ,ಶಶಿಧರ್ ಜೋಯಿಸ್ ,ನ್ಯಾಷನಲ್ ಗುತ್ತಿಗೆ ಸಂಸ್ಥೆಯ ಹಾಜಿ ಇಬ್ರಾಹಿಂ ಶರೀಫ್ ,ಅಬ್ದುಲ್ ರಹಿಮಾನ್ ,ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ,ಹೆದ್ದೂರು ನವೀನ್ ,ಭಾರತೀಯ ಜನತಾಪಕ್ಷದ ತೀರ್ಥಹಳ್ಳಿ ತಾಲ್ಲೂಕಾಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯ್ಕ,ಮಿಲ್ಕ್ ಕೇರಿ ಅನಿಲ್ .ಟಿ .ಎನ್ . ಇನ್ನಿತರರು ಉಪಸ್ಥಿತರಿದ್ದರು.
Leave a Comment