ಶಿವಮೊಗ್ಗ ಪಾಲಿಕೆಯಲ್ಲಿ ಭ್ರಷ್ಟಾಚಾರ ಹಾಗೂ ಅವಶ್ಯಕತೆ ಮೀರಿ ಡಾಟಾಎಂಟ್ರಿ ಆಪರೇಟರ್‌ಗಳ ಅಕ್ರಮವಾಗಿ ನಿಯೋಜನೆ: ಕ್ರಮಕ್ಕೆ ಒತ್ತಾಯ
ಶಿವಮೊಗ್ಗ: ಮಹಾನಗರಪಾಲಿಕೆಯಲ್ಲಿ ಭ್ರಷ್ಟಾಚಾರ ಹಾಗೂ ಅವಶ್ಯಕತೆ ಮೀರಿ ಡಾಟಾಎಂಟ್ರಿ ಆಪರೇಟರ್‌ಗಳನ್ನು ಅಕ್ರಮವಾಗಿ ನಿಯೋಜನೆ ಮಾಡಿರುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಆರ್ ಶಿವಕುಮಾರ್ ಆರೋಪಿಸಿದ್ದಾರೆ. ಮತ್ತು ಅಗತ್ಯ ಕ್ರಮಕ್ಕೆ ಆಗ್ರಹಿಸಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
,ಡಾಟಾ ಎಂಟ್ರಿ ಆಪರೇಟರ್ಗಳ ಬಗ್ಗೆ ಮತ್ತು ಒಳಚರಂಡಿ ನೀರು ಸರಬರಾಜು ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆ ನಗರಸಭೆ ಅವಧಿಯಲ್ಲಿ ಕೇವಲ ಹತ್ತು ಜನ ಡಾಟಾ ಎಂಟ್ರಿ ಆಪರೇಟರ್‌ಗಳು ಮಾತ್ರ ಇಡೀ ನಗರಸಭೆಯಲ್ಲಿ ಅವಶ್ಯಕತೆ ಇದ್ದು, ವಿಭಾಗಗಳಲ್ಲಿ ಕೆಲಸ ನಿರ್ವಸುತ್ತಿದ್ದರು. ಆ ಸಮಯದಲ್ಲಿ ಕಛೇರಿ ಸಿಬ್ಬಂದಿಗಳಿಗೆ ಕಂಪ್ಯೂಟರ್ ಜ್ಞಾನದ ಕೊರತೆ ಇದ್ದುದರಿಂದ ಸಹಾಯಕರಾಗಿ ಅಂದರೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಯಿತು. ಆಗ ಅದೇ 35 ವಾರ್ಡ್ಗಳಿದ್ದು, ನಂತರ 2014 ರಲ್ಲಿ ಮಹಾನಗರಪಾಲಿಕೆ ಆದ ನಂತರ ಅದೇ 35 ವಾರ್ಡ್ಗಳಿದ್ದು, ಕೆಲಸ ಕಾರ್ಯಗಳು ಅಷ್ಟೇ ಇರುತ್ತದೆ. ಸಿಬ್ಬಂದಿಗಳು ಸಹ ಸರ್ಕಾರದಿಂದ ನೇಮಕವಾಗಿರುತ್ತಾರೆ.
ಇಂಜಿನಿಯರ್, ಬಿಲ್‌ಕಲೆಕ್ಟರ್, ಪ್ರಥಮ ದರ್ಜೆ ಸಹಾಯಕರು ಇತರೇ ಸಿಬ್ಬಂದಿಗಳಿಗೆ ಕಂಪ್ಯೂಟರ್ ಜ್ಞಾನ ಇರುವಂತವರು ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಎ.ಆರ್.ರವಿರವರು 50 ವರ್ಷದೊಳಗಿರುವ ಸಿಬ್ಬಂದಿಗೆ ಕಂಪ್ಯೂಟರ್ ತರಬೇತಿ ನೀಡಿದ್ದು, ತದ ನಂತರ ಎಲ್ಲಾ ಸಿಬ್ಬಂದಿಗಳಿಗೆ ಕಂಪ್ಯೂಟರ್ ಜ್ಞಾನವಿದ್ದು, ಇವರೆಲ್ಲರೂ ಕಂಪ್ಯೂಟರ್ ಕಲಿತು ಕೆಲಸ ನಿರ್ವಹಿಸುತ್ತಿರುತ್ತಾರೆ.
ಈ ರೀತಿಯಾಗಿ ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಕಂಪ್ಯೂಟರ್ ಕೆಲಸವನ್ನು ನಿರ್ವಹಿಸತ್ತಿರುವಾಗ 60 ಜನ ಕಂಪ್ಯೂಟರ್ ಆಪರೇಟರ್ ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಇಲ್ಲದಿದ್ದರೂ ಸಹ ಸನ್ಮಾನ್ಯ ಸದಸ್ಯರು ತಮ್ಮ ಸಂಬಂಧಿಗಳು, ಸ್ನೇಹಿತರ ಮಕ್ಕಳು, ಮಹಾನಗರಪಾಲಿಕೆ ಸದಸ್ಯರ ಮಕ್ಕಳು ಎಂದು ಸುಮಾರು 35 ಜನರನ್ನು ನಿಯೋಜಿಸಿಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ
ಆದ ಕಾರಣ ತಾವುಗಳು ದಯಮಾಡಿ ಖುದ್ದಾಗಿ, ಪರಿಶೀಲಿಸಿ, ಏಜೆನ್ಸಿಗಳ ಮೂಲಕ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಕೂಡಲೇ ಬಿಡುಗಡೆಗೊಳಿಸಿ ಮತ್ತು ಏಜೆನ್ಸಿಯಯನ್ನು ರದ್ದುಗೊಳಿಸಿ, ಏಜೆನ್ಸಿಯವರು ಕಂಪ್ಯೂಟರ್ ಆಪರೇಟರಗಳ ನೇಮಕ ಮಾಡುವಾಗ ಅವರುಗಳಿಂದ ಲಕ್ಷಾಂತ ರೂ. ವಸೂಲಿ ಮಾಡಿ ಕಂಪ್ಯೂಟರ್ ಆಪರೇಟರ್‌ಗಳನ್ನ ನೇಮಕ ಮಾಡಿದ್ಧಾರೆ. ಇದರ ಬಗ್ಗೆಯೂ ಕೂಡಾ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
Leave a Comment