ವಿಷಕಾರಿ ಪದಾರ್ಥಗಳ ಔಷಧೀಯ ಅನ್ವಯಿಕತೆ ಕುರಿತು ವಿಶೇಷ ಉಪನ್ಯಾಸ
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯ ಜೀವರಸಾಯನ ಶಾಸ್ತ್ರ ವಿಭಾಗವು ಶುಕ್ರವಾರ ಪ್ರೊ. ಎಸ್.ಪಿ ಹೀರೆಮಠ ಸಭಾಂಗಣದಲ್ಲಿ `ಹಾವು ಮತ್ತು ಕೀಟಗಳ ವಿಷಕಾರಿ ಪದಾರ್ಥಗಳ ಔಷಧೀಯ ಅನ್ವಯಿಕತೆ` ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್ ವಿಶ್ವವಿದ್ಯಾಲಯದ ಪ್ರೊ. ಮಂಜುನಾಥ್ ಆರ್ ಕಿಣಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು, ಮೈಸೂರು ವಿಶ್ವವಿದ್ಯಾಲಯದ ಪ್ರೊ. ವಿಶ್ವನಾಥ್, ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಎ ನೀಲಗುಂದ್, ಉಪನ್ಯಾಸಕರಾದ ಸತೀಶ್, ನಿರಂಜನ್ ಹಾಗೂ ಹಲವು ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.
# # #
Leave a Comment