ನೂತನವಾಗಿ ಪ್ರತಿಷ್ಠಾಪನೆ ಆಗಿರುವ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಕುಂಬಾಭಿಷೇಕ

 ಶಿವಮೊಗ್ಗ ನಗರದ ವಿನಾಯಕ ನಗರದಲ್ಲಿ ಇಂದು ನೂತನವಾಗಿ ಪ್ರತಿಷ್ಠಾಪನೆ ಆಗಿರುವ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಕುಂಬಾಭಿಷೇಕ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಾಸವಿ ಪೀಠಂ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿ, ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ. ಎಸ್. ಅರುಣ್ ಕುಟುಂಬದವರು, ಟಿ.ಆರ್.ಅಶ್ವತ್ಥ್ ನಾರಾಯಣ್ ಕುಟುಂಬದವರು,ಶ್ರೀ ನಿವಾಸ್ ಕುಟುಂಬದವರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಆರ್ಯ ವೈಶ್ಯ ಸಮಾಜ ಭಾಂದವರು ಉಪಸ್ಥಿತರಿದ್ದರು. ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಷ್ಠಾಪನಾ ಸಮಾರಂಭವು ಇಂದು ಕೂಡ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.