ವಿದ್ಯಾವಂತರಾಗದ ಹೊರತು ಆರ್ಥಿಕ, ಸಾಮಾಜಿಕ ಸಮಾನತೆ ಸಾಧ್ಯವಿಲ್ಲ- ಸಿದ್ದರಾಮಯ್ಯ ಪ್ರತಿಪಾದನೆ

ಶಿವಮೊಗ್ಗ : ಕಲ್ಲು ಒಡೆಯುವವರು. ಒಡೆದ ಕಲ್ಲು ಬಳಸಿ ದೇವಾಸ್ಥಾನ ಕಟ್ಟುವವರು ನೀವು.ಆದರೆ ಆ ದೇವಾಸ್ಥಾನದ ಒಳಗಡೆ ಹೋಗುವವರೆ ಬೇರೆ.ಇದು ಬದಲಾಗವೇಕು‌. ಯಾಕಂದ್ರೆ ಜಾತಿ ವ್ಯವಸ್ಥೆ ಹೋಗುವ ತನಕ  ಇದು ಪ್ರಜಾ ಪ್ರಭುತ್ವ ವ್ಯವಸ್ಥೆ ಎನಿಸಿಕೊಳ್ಳುವುದಿಲ್ಲ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಭೋವಿ ( ವಡ್ಡರ) ಸಮಾಜವು ಭಾನುವಾರ ನಗದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಹಾಗೂ ಭೋವಿ ಭವನದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.

ನಮ್ಮದು ವೃತ್ತಿ ಆಧಾರಿತ ಜಾತಿ ವ್ಯವಸ್ಥೆ. ಕಲ್ಲಿನ ಕೆಲಸ ಮಾಡುವುದರಿಂದ ಭೋವಿ ಸಮಾಜವನ್ನು ಸ್ಥಳೀಯ ಭಾಷೆಯಲ್ಲಿ ವಡ್ಡರು ಎಂದು ಕರೆಯಲಾಗಿದೆ. ಈ ಜಾತಿ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಇದೆ, ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಅನೇಕ ಜನ ಶರಣರು, ಸೂಫಿ ಸಂತರು ಸಮಾಜ ಸುಧಾರಣೆಯನ್ನು ಮಾಡಿದ್ದಾರೆ. ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆಯ ಸಾಧನೆ ಎಂಬುದು ಮರೀಚಿಕೆಯ ರೀತಿ ಅಸಾಧ್ಯವಾದ ಕೆಲಸ ಎಂದರು.

ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ಮತ್ತು ಅತಿ ಶೂದ್ರ ವರ್ಗದ ಜನರು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತಗೊಂಡಿದ್ದರು. ಇದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ ಕಾರಣಬಹುದಾಗಿದೆ. ಶಿಕ್ಷಣ ವಂಚಿತ ಜಾತಿಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದು ಕಷ್ಟದ ಕೆಲಸ. ಇದೇ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು.
ಅದೇ ಕಾರಣಕ್ಕೆ‌ಭೋವಿ ಸಮಾಜದ ಯುವಕರು ನೂರಕ್ಕೆ ನೂರರಷ್ಟು ವಿದ್ಯಾವಂತರಾಗಬೇಕಿದೆ. ವಿದ್ಯಾವಂತ ರಾಗದ ಹೊರತು ಭೋವಿ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದರು‌.

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಬೇಕು ಎಂದು ಎಸ್.ಸಿ.ಪಿ/ ಟಿ.ಎಸ್.ಪಿ ಕಾನೂನು ರೂಪಿಸಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಈ ಯೋಜನೆಗೆ ನೀಡಿದ್ದ ಅನುದಾನ ರೂ. 29,690 ಕೋಟಿ. ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ ರೂಪಾಯಿ. ಇಂದಿನ ಬಜೆಟ್ ಗಾತ್ರ 2.65 ಲಕ್ಷ ಕೋಟಿ ರೂಪಾಯಿ, ಇದಕ್ಕೆ ಹೋಲಿಸಿದರೆ ಇಂದು ಈ ಯೋಜನೆಗೆ ರೂ. 42,000 ಕೋಟಿ ಹಣ ಇಡಬೇಕಿತ್ತು, ಆದರೆ ಸರ್ಕಾರ 28,000 ಕೋಟಿ ರೂಪಾಯಿ ಇಟ್ಟಿದೆ. ಇದು ನ್ಯಾಯವೋ ಅನ್ಯಾಯವೋ ನೀವೆ ಯೋಚನೆ ಮಾಡಿ ಎಂದು  ಹೇಳಿದರು‌.

ಭೋವಿ ಭವನ ಉದ್ಘಾಟಿಸಿ ಮಾತನಾಡಿದ  ಭೋವಿ ಸಮಾಜದ ಮುಖಂಡ , ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿ ಸಮಾಜ ತುಂಬಾ ಸ್ವಾವಲಂಬಿ ಸಮಾಜ‌.ಅದರಲ್ಲೂ 
 ನಾವು ಸಾಮರಸ್ಯ ಹಾಗೂ ಸ್ವಾಭಿಮಾನದಿಂದ ಬದುಕುವ ಜನ. ಅನೇಕ ಇತಿಹಾಸ ತೆಗೆದರೆ, ಇದು ಸತ್ಯವೇ ಆಗಿದೆ. ಇಂತಹ ಸಮಾಜ‌ ಈಗ ಸರ್ಕಾರ ಗಳ‌ಕಟ್ಟು ನಿಟ್ಟಿ‌ನ ಧೋರಣೆಗಳಿಂದ ಸಂಕಷ್ಟಕ್ಕೆ ಸಿಲುಕಿದೆ.ಕಲ್ಲು ಒಡೆಯುವ ಕಾಯಕಕ್ಕೆ ಅಡೆ ತಡೆ ಎದುರಾಗಿದೆ‌. ಶ್ರೀಮಂತರು ಗಣಿಗಾರಿಕೆ  ಮಾಡುತ್ತಿದ್ದಾರೆ. ಕಲ್ಲು ಒಡೆಯುವುದನ್ನೇ ಕುಲ ಕಸುಬಾಗಿಸಿಕೊಂಡ ಬಂದ ಭೋವಿ ಸಮಾಜ ಕುಲ‌ಕಸುಬು ಇಲ್ಲದೆ ಸಂಕಷ್ಟ ಎದುರಿಸುತ್ತಿದೆ.ಈ ಹಿನ್ನೆಲೆಯಲ್ಲಿ ಸರ್ಕಾರ ಭೋವಿ ಸಮಾಜದ ನೆರವಿಗೆ ಬರಬೇಕಿದೆ ಎಂದರು‌.
.
ಸಂಸದ ಬಿ. ವೈ ರಾಘವೇಂದ್ರ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ‌ಮಾತನಾಡಿದರು‌. ನಂಬಿಕೆ‌ಮತ್ತು ವಿಶ್ವಾಸಕ್ಕ ಇನ್ನೊಂದು ಹೆಸರು ಭೋವಿ ಸಮಾಜ.‌ಈ‌ಸಮಾಜದ ಕೊಡುಗೆಯಾಗಿಯೇ ನಾನು ಸಂಸದನಾಗಿರುವೆ‌. ಅವರ ಎಲ್ಲಾ ಬೇಡಿಕೆಗಳನ್ನು ತುಂಬಾ ಪ್ರಾಮಾಣಿಕವಾಗಿ ಸರ್ಕಾರಕ್ಕೆ‌ಮುಟ್ಟಿಸುವ ಕೆಲಸ‌ ಮಾಡುವೆ. ಯಾಕಂದ್ರೆ ಯಡಿಯೂರಪ್ಪ ಅವರ ಕೊಡುಗೆಯನ್ನು ಈ‌ಸಮಾಜ ಮರೆತಿಲ್ಲ. ಅದಕ್ಕೆ ನಾನು‌ಕೂಡ ಬದ್ದನಾಗಿರುವೆ ಎಂದರು.

ಶಾಸಕ ಶಿವರಾಜ್ ತಂಗಡಗಿ ಮಾತನಾಡಿ, ‌ಭೋವಿ ಸಮಾಜದ ಪ್ರಗತಿಯಲ್ಲಿ‌ಮೈಸೂರು ಭಾಗದ ಕೊಡುಗೆ ಹೆಚ್ಚಿದೆ. ಮೊಟ್ಟ ಮೊದಲ‌ ಬಾರಿಗೆ ಈ ಸಮಾಜವನ್ನು ನಾಲ್ವಡಿ ಕೃಷ್ಣದೇವರಾಯ ಒಡೆಯರು ಗುರುತಿಸಿದ್ದರು. ಅಲ್ಲಿಂದ ದೇವರಾಜ್ ಅರಸು ಅವರು ಈ‌ ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟರು. ಹಾಗೆಯೇ ಸಿದ್ದರಾಮಯ್ಯ ನವರು ಭೋವಿ ಅಭಿವೃದ್ದಿ ನಿಗಮ ಸ್ಥಾಪಿಸಿ, ಭೋವಿ‌ಸಮಾಜದ‌ಪ್ರಗತಿಗೆ ಕಾರಣರಾದರು.ಹಾಗಾಗಿ ಭೋವಿ‌ಸಮಾಜ ಮೈಸೂರು ಕೊಡುಗೆಯನ್ನು ಮರೆಯಬಾರದು ಎಂದರು.
ಚಿತ್ರದುರ್ಗದ ಭೋವಿ ಗುರುಪೀಠದ  ಜಗದ್ಗುರು ಇಮ್ಮಡಿ‌  
ಸಿದ್ದರಾಮೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಮಾವೇಶದಲ್ಲಿ ಶಾಸಕರಾದ ಬೈರತಿ ಸುರೇಶ್. ಅಖಂಡ‌ಶ್ರೀನಿವಾಸ ಮೂರ್ತಿ, ವೆಂಕಟರಮಣಪ್ಪ, ಚಂದ್ರಪ್ಪ, ಅಶೋಕ್ ನಾಯ್ಕ್ , ಭೋವಿ ಸಮಾಜದ ಮುಖಂಡರಾದ ರವಿ‌ಮಾಕಳಿ, ರಾಮಪ್ಪ ಸೇರಿದಂತೆ ಹಲವರು ಹಾಜರಿದ್ದರು.ಜಿಲ್ಲಾ ಭೋವಿ‌ಸಮಾಜದ ಅಧ್ಯಕ್ಷ ಎಸ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು‌.

,

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.