ಅಕ್ರಮ ಬಯಲಿಗೆಳೆದ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ನೋಟಿಸ್ ನೀಡಿದ ಸಿಐಡಿ ಅಧಿಕಾರಿಯನ್ನು ಅಮಾನತ್ತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹ
ಶಿವಮೊಗ್ಗ: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ತಲೆ ಮರಿಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಬಂಧಿಸದೆ ಅಕ್ರಮ ಬಯಲಿಗೆಳೆದ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ನೋಟಿಸ್ ನೀಡಿದ ಸಿಐಡಿ ಅಧಿಕಾರಿಯನ್ನು ಅಮಾನತ್ತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಅಕ್ರಮವಾಗಿ ದುಡ್ಡು ಮಾಡುವ ನೆಪದಲ್ಲಿ ಶಾಸಕಾಂU, ನ್ಯಾಯಾಂಗ, ಕಾರ್ಯಾಂಗವನ್ನೇ ಬುಡಮೇಲು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಿಜೆಪಿ ತನ್ನ ಪಕ್ಷದ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಹಣ ಮಾಡುವ ದೃಷ್ಟಿಯಿಂದ ಪವಿತ್ರವಾದ ಸರ್ಕಾರಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಹಗಲು-ರಾತ್ರಿ ಕಷ್ಟಪಟ್ಟು ಓದಿದರೂ ಕೂಡ ದೈಹಿಕ ಚಟುವಟಿಕೆಯಲ್ಲಿ. ವ್ಯಾಯಾಮ ಯೋಗಾಸನ ಒಟ್ಟು ಮುಂತಾದ ಚಟುವಟಿಕೆಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿದರು ಕೂಡ ಸರ್ಕಾರದ ಹಣದ ಆಸೆಗೆ ವಿದ್ಯಾಭ್ಯಾಸವೆಲ್ಲ. ವ್ಯರ್ಥವಾಗುತ್ತಿದೆ.ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಸಚಿವರು ಶಾಸಕರು ಮತ್ತು ಬಿಜೆಪಿ ಮುಂಚೂಣಿ ಕಾರ್ಯಕರ್ತರು ಸರ್ಕಾರಿ ಪ್ರಮುಖ ಹುದ್ದೆಗಳನ್ನು ತನ್ನ ಕಾರ್ಯಕರ್ತರಿಗೆ ಹಂಚಲ್ಪಡುತ್ತಿದೆ ಎಂದು ದೂರಿದರು.
ಕೇವಲ ಪಿಎಸ್ಐ ಹುದ್ದೆ ಗೋಸ್ಕರ ೫೦ರಿಂದ ೭೦ ಲಕ್ಷ ರೂಪಾಯಿಗಳಷ್ಟು ಹಣ ಪಡೆದುಕೊಂಡು ಸರ್ಕಾರಿ ಉದ್ಯೋಗವನ್ನು ಬೇಕಾಬಿಟ್ಟಿ ಮಸಾಲೆ ದೋಸೆಯಂತೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಹುದ್ದೆಗಳನ್ನು, ಈ ರೀತಿ ಕೋಟ್ಯಾಂತ ರೂಪಾಯಿಗೆ ಮಾರಾಟ ಮಾಡಿದರೆ ಅನುಭವವಿಲ್ಲದ ದ್ವೇಷ ಅಸೂಯೆಗಳಿಂದ ಕೂಡಿದ ಬಿಜೆಪಿ ಕಾರ್ಯಕರ್ತರು.. ಪೋಲಿಸ್ ಹುದ್ದೆಗೆ ಬಂದರೆ ಸಂವಿಧಾನ ಕಾಪಾಡಬೇಕಾದ ಕಾನೂನು ಪಾಲಕರು ಮುಂದೆ ಎಂತಹ ಕಾನೂನು ಕಾಪಾಡಿ ಸಂವಿಧಾನ ರಕ್ಷಿಸುವವರು ಎಂದು ಯೋಚಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳ ಭವಿಷ್ಯದ ಮೇಲೆ ಮಾರಕವಾಗುವ ಹಣಕ್ಕೋಸ್ಕರ ಇಂತಹ ಹೀನ ಕೆಲಸಕ್ಕೆ ಕೈಹಾಕಿರುವುದು ಸಾಬೀತಾದರೂ ಕೂಡ ಪಕ್ಷದ ಕಾರ್ಯಕರ್ತರನ್ನು ರಜೆಸುವ ಸಲುವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಖಂಡರು ಆದಂತಹ ಪ್ರಿಯಾಂಕ ಖರ್ಗೆ ಅವರಿಗೆ ರಾಜ್ಯ ಸರ್ಕಾರವು ನೋಟೀಸನ್ನು ಸಿಐಡಿಯಿಂದ ನೀಡಿರುವುದು ನೋಡಿದರೆ ಹಣಕ್ಕೋಸ್ಕರ ಎಂತಹ ಹೀನ ಕಾರ್ಯ ಮಾಡಿದರು ಕೂಡ ರಾಜ್ಯಸರ್ಕಾರವು ನಿಮ್ಮ ಜೊತೆ ಇರುತ್ತದೆ ಎಂದು ಮೇಲ್ನೋಟಕ್ಕೆ ಇಂತಹ ಪ್ರಕರಣದಿಂದ ಸಾಬೀತಾಗಿದೆ ಎಂದು ದೂರಿದರು.
ಆದ್ದರಿಂದ ಮುಂದಿನ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಈ ಕೂಡಲೇ ರಾಜ್ಯ ಸರ್ಕಾರವು ದಿವ್ಯ ಹಾಗರಗಿ ಯನ್ನು ಬಂಧಿಸಬೇಕು ಹಾಗೂ ವಿನಾಕಾರಣ ಆರೋಪಿಯನ್ನು ಪತ್ತೆ ಹಚ್ಚಲು ಸಹಕರಿಸಿದ ಪ್ರಿಯಾಂಕ ಖರ್ಗೆಗೆ ನೋಟಿಸ್ ನೀಡಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಮುಖಂಡರಾದ ರಾಘವೇಂದ್ರ, ಅರ್ಜುನ, ಶಿವಾನಂದ, ನಿಸಾರ್ ಅಹಮ್ಮದ್, ಜಾನ್, ಭರತ್, ಕಾಶಿ, ಜಮೀಲ್ ಇನ್ನಿತರರು ಭಾಗವಹಿಸಿದ್ದರು.
Leave a Comment