ಕಷ್ಟದಕಾಲದಲ್ಲಿಯೇ ಬಿಎಸ್ ಯಡಿಯೂರಪ್ಪನವರು ಪಕ್ಷ ಕಟ್ಟಿದ್ದಾರೆ: ಮುಖ್ಯಮಂತ್ರಿ *ಶ್ರೀ ಬಸವರಾಜ ಎಸ್ ಬೊಮ್ಮಾಯಿ

      ಶಿವಮೊಗ್ಗ:   ರಾಜ್ಯದಲ್ಲಿ ಕಾಂಗ್ರೆಸ್ಸ್ ಗಟ್ಟಿಯಾಗಿದ್ದಾಗಲೇ ಯಡಿಯೂರಪ್ಪನವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ,ಈಗಿರುವುದು ಟೊಳ್ಳು ಕಾಂಗ್ರೆಸ್ ಹಾಗಾಗಿ ಬಿಜೆಪಿಯ ಓಟನ್ನು ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ *ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರು ಹೇಳಿದ್ದಾರೆ.
ಅವರು ಇಂದು ಸಂಜೆ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ,ಕಷ್ಟಕಾಲದಲ್ಲಿ ಬಿ ಎಸ್ ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿ ಕಟ್ಟಿದರು, ಯಾರಿಗೂ ರಾಜ್ಯದಲ್ಲಿ ಬಿಜೆಪಿ ಬರುತ್ತದೆ ಎಂದು ನಂಬಿಕೆ ಇರಲಿಲ್ಲ,*ಆದರೆ ಬಿ ಎಸ್  ಯಡಿಯೂರಪ್ಪಅವರಿಗೆ ತಮ್ಮ ಹೋರಾಟದ ಮೇಲೆ ನಂಬಿಕೆ ಇತ್ತು.ಅವರ ಹೋರಾಟ ಬದ್ಧತೆಯ ಪರಿಣಾಮವಾಗಿ ನಾನಿಂದು ಮುಖ್ಯಮಂತ್ರಿಯಾಗಿದ್ದೇನೆ,ಎಂದು ಮುಖ್ಯಮಂತ್ರಿ ಶ್ರೀ ಎಸ್ ಬಸವರಾಜ್ ಬೊಮ್ಮಾಯಿ ಅವರು ಬಿ ಎಸ್ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದರು*,
ರಾಷ್ಟ್ರೀಯ ಪಕ್ಷಕ್ಕೆ ತತ್ತ್ವ ಸಿದ್ಧಾಂತ ಹಾಗೂ ಸಮರ್ಥ ನಾಯಕತ್ವ ಬೇಕು.*ಇದೆಲ್ಲವೂ ಬಿಜೆಪಿಗಿದೆ*.ಆದರೆ ಯಾವುದೂ ಇಲ್ಲದ ಕಾಂಗ್ರೆಸ್ ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿ  ಭೂತದಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಪಟ್ಟಿಯನ್ನು ನಾವು ನೋಡುತ್ತೇವೆ.*ದೇಶದಲ್ಲಿ ಬಿಜೆಪಿ  ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು*.ಸಾರ್ವಜನಿಕರಿಗೆ ಉತ್ತಮ ಬದುಕು ಸಿಗಬೇಕು ಶಿವಮೊಗ್ಗ ಜಿಲ್ಲೆಯ ಕೊಡುಗೆ ಈ ರಾಜ್ಯಕ್ಕೆ ಹೆಚ್ಚಿದೆ. ಭವಿಷ್ಯತ್ತಿನಲ್ಲಿ ಶಿವಮೊಗ್ಗ ಬೆಂಗ್ಳೂರಿನ ರೀತಿಯಲ್ಲಿ ದೊಡ್ಡ ನಗರವಾಗಲಿದೆ ಎಂದರು, ಇಲ್ಲಿನ ಜನ ಪಕ್ಷಕ್ಕೆ ಯಾವತ್ತೂ ಬೆಂಬಲವಾಗಿ ನಿಂತು ಮುಖ್ಯಮಂತ್ರಿಯನ್ನು ನೀಡಿದ್ದಾರೆ ಇದಕ್ಕೆ ಪ್ರತಿಫಲವಾಗಿ *ರೈಲ್ವೆ.ಕೈಗಾರಿಕೆ. ವಿಮಾನನಿಲ್ದಾಣ*. ಎಲ್ಲವೂ ಶಿವಮೊಗ್ಗದಲ್ಲಿ ಆಗಿದೆ *ಶಿವಮೊಗ್ಗ ಜಿಲ್ಲೆಯಲ್ಲಿರುವ ಬಗರ್ ಹುಕುಂ ಶರಾವತಿ ಮುಳುಗಡೆ ಸಂತ್ರಸ್ತರು ಚಕ್ರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ತ್ವರಿತ ಪರಿಹಾರ ಒದಗಿಸಲಾಗುವುದು* ಎಂದರು ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸ್ ಮಾತಿಗೆ ಜನ ಮರಳಾಗಲ್ಲ ಎಂದು ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಹೇಳಿದರು, ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ *ಶ್ರೀ ಸದಾನಂದಗೌಡ*,ಸಚಿವರಾದ *ಶ್ರೀ ಆರಗ ಜ್ಞಾನೇಂದ್ರ*,*ಶ್ರೀ ಅಶ್ವತ್ಥ್ ನಾರಾಯಣ್*, *ಶ್ರೀ ಶ್ರೀರಾಮುಲು*,*ಮಾಜಿ ಸಚಿವರಾದ ಶ್ರೀ ಲಕ್ಷ್ಮಣ್ ಸವದಿ*,ಸಂಸದರಾದ *ಶ್ರೀ ಬಿ ವೈ ರಾಘವೇಂದ್ರ*,ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ *ಶ್ರೀ ಬಿ ವೈ ವಿಜಯೇಂದ್ರ*,*ಶ್ರೀ ನಿರ್ಮಲ್ ಕುಮಾರ್ ಸುರಾನಾ*,*ಶ್ರೀಮತಿ ನಯನಾ ಗಣೇಶ್*, ಶಾಸಕರಾದ *ಶ್ರೀ ಆಯನೂರು ಮಂಜುನಾಥ್*,*ಶ್ರೀ ಎಸ್ ರುದ್ರೇಗೌಡ*,*ಶ್ರೀ ಹರತಾಳು ಹಾಲಪ್ಪ*,*ಶ್ರೀ ಕುಮಾರ್ ಬಂಗಾರಪ್ಪ*,*ಶ್ರೀ ಅಶೋಕ್ ನಾಯ್ಕ*,*ಶ್ರೀ ಡಿ ಎಸ್ ಅರುಣ್*, ರಾಜ ಪ್ರಕೋಷ್ಠಗಳ ಸಂಯೋಜಕರಾದ *ಶ್ರೀ ಭಾನುಪ್ರಕಾಶ್*,ರಾಜ್ಯ  ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕರಾದ *ಶ್ರೀ ಆರ್ ಕೆ ಸಿದ್ದರಾಮಣ್ಣ* ,ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ *ಶ್ರೀ ಟಿ ಡಿ ಮೇಘರಾಜ್* ವಹಿಸಿದ್ದರು,ಮತ್ತು ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾದ *ಶ್ರೀ ಗಿರೀಶ್ ಪಟೇಲ್* ಮತ್ತು *ಶ್ರೀ ಗಣೇಶ್ ರಾವ್*,*ಶ್ರೀ ಎ ಎನ್ ನಟರಾಜ್*, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಶಿವರಾಜು*,*ಶ್ರೀ ಬಿ ಕೆ ಶ್ರೀನಾಥ್, ಶ್ರೀ ಧರ್ಮಪ್ರಸಾದ್*,ಸೇರಿದಂತೆ ಪ್ರಮುಖರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.