(ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೋಗುವ ಹೊಸ ವಿಶೇಷ ಎಕ್ಸ್‍ಪ್ರೆಸ್ ರೈಲು ಸೇವೆ ಪ್ರಾರಂಭ
ಶಿವಮೊಗ್ಗ, : ರೈಲ್ವೆಯು ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೋಗುವ ಹೊಸ ವಿಶೇಷ ಎಕ್ಸ್‍ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಿದೆ.
ಈ ವಿಶೇಷ ಎಕ್ಸ್‍ಪ್ರೆಸ್ ರೈಲು ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಯಾತ್ರಿ ಕೇಂದ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದ್ದು,
ವಾರದಲ್ಲಿ ಎರಡು ದಿನ ಹೊರಡುವ ವಿಶೇಷ ರೈಲಿಗೆ ಸಂಸದರಾದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮತ್ತು ಇತರೆ ಗಣ್ಯರು .ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸುವರು. ಈ ವೇಳೆ ವಿಧಾನ ಪರಿಷತ್ ಶಾಸಕರಾದ ಆಯನೂರ್ ಮಂಜುನಾಥ, ರುದ್ರೇಗೌಡ, ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ ಇತರರು ಪಾಲ್ಗೊಂಡಿದ್ದರು.
Leave a Comment