ನಾನು ರಾಜೀನಾಮೆ ನೀಡಲ್ಲ,ಇದೊಂದು ಷಡ್ಯಂತ್ರ ತನಿಖೆಯಾಗಲೀ: ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

 ಶಿವಮೊಗ್ಗ;ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ಅಗತ್ಯ‌ವಿದೆ.‌ಈ ಪ್ರಕರಣದಲ್ಲಿ ಕೆಲವರ ಕೈವಾಡವಿದೆ ಎಂದು ಹೇಳಿದ ಅವರು ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಸಾದ್ಯವಿಲ್ಲಾ.ನಾನು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದ್ದಾರೆ.
ರಾಜ್ಯ ನಾಯಕರು ಕೂಡ ರಾಜೀನಾಮೆ ಬಗ್ಗೆ ಹೇಳಿಲ್ಲ. ಒಟ್ಟಾರೆ ಇದೊಂದು ಷಡ್ಯಂತ್ರ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸುದ್ದಿ ಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾಳೆ ಅಥವಾ ನಾಡಿದ್ದು ಬೆಂಗಳೂರು ಗೆ ತೆರಳಿ ಸಿ.ಎಂ ಬೇಟಿ ಮಾಡುವೆ.ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತನಿಖೆ ಯಾಗಬೇಕು.ಇಂತಹ ನೂರಾರು ಕೇಸುಗಳನ್ನು ನೋಡಿದ್ದೆವೆ ಕಾಂಗ್ರೆಸ್ ನವರ ಆರೋಪಗಳಿಗೆ ನಾವು ಜಗ್ಗಲ್. ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಲ್ಲ.ವ್ಯಾಟ್ಸಪ್ ನಲ್ಲಿ ಟೈಪ್ ಮಾಡಿ ಕಳುಹಿಸಲಾಗಿದೆ. ಸಹಿ ಸಹ ಇಲ್ಲ. ಸಂತೋಷ್ ಪಾಟೀಲ್ ಮುಖ ಸಹ ನೋಡಿಲ್ಲ.ಆತ ಯಾರು ಎಂದು ಸಹ ನನಗೆ ಗೊತ್ತಿಲ್ಲ.ತನಿಖೆಯಾದ್ರೆ ಅಸಲಿ ಸತ್ಯ ಹೊರಗೆ ಬರುತ್ತೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಹೈಕಮಾಂಡ್ ನಿಂದ ಯಾವುದೇ ಪೋನ್ ಬಂದಿಲ್ಲವೆಂದು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.