ನಮ್ಮ ದೇಶ ಯಾವ ಸ್ಥಿತಿ ತಲುಪುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ : ಬಿ. ವೈ. ರಾಘವೇಂದ್ರ

ಶಿವಮೊಗ್ಗ : ಪ್ರಧಾನಿ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ದೃಡ ನಿರ್ಧಾರದಿಂದ ನಮ್ಮ ದೇಶವು ಕೋವಿಡ್ ಮಹಾಮಾರಿಯನ್ನು ಮೆಟ್ಟಿ ನಿಂತಿದೆ, ಭಾರತೀಯ ಬಯೋ ಟೆಕ್ ಸಂಸ್ಥೆಯಿಂದ ಲಸಿಕೆಯನ್ನು ಸಂಶೋದಿಸಿ ಉಚಿತ ಲಸಿಕಾ ಅಭಿಯಾನದ ಮೂಲಕ ಭಾರತೀಯರ ಆರೋಗ್ಯವನ್ನು ರಕ್ಷಿಸಿದ್ದಾರೆ, ಅನೇಕ ದೇಶಗಳು ಯುದ್ಧ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಆದರೆ ನಮ್ಮ ದೇಶದ 
ಜಿಡಿಪಿ, ಎಕ್ಸ್ಪೋರ್ಟ್ ಹೆಚ್ಚಿದೆ, ಪ್ರಧಾನಿ ಮೋದಿಯವರ ಮುಂದಾಲೋಚನೆ ಇರದಿದ್ದರೆ ನಮ್ಮ ದೇಶ ಯಾವ ಸ್ಥಿತಿ ತಲುಪುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.

ಭಾರತೀಯ ಜನತಾ ಪಕ್ಷದ 40ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಏಪ್ರಿಲ್ 7ರಿಂದ ಏಪ್ರಿಲ್ 20ರ ವರೆಗೆ ಬಿಜೆಪಿಯ ವಿವಿಧ ಜನಪರ ಕೆಲಸಗಳನ್ನು ಜನರಿಗೆ ತಲುಪಿಸುವ ಅಂಗವಾಗಿ ವಿದ್ಯಾನಗರ ಭಾರತೀಯ ವಿದ್ಯಾಭವನದಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ 'ಉಚಿತ ಲಸಿಕಾ ಅಭಿಯಾನಕ್ಕೆ'  ಸಂಸದರಾದ ಬಿ. ವೈ. ರಾಘವೇಂದ್ರ ಅವರು ಚಾಲನೆ ನೀಡಿದರು.

KSSIDC ಉಪಾಧ್ಯಕ್ಷರಾದ ಎಸ್. ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ 
ಪಾಲಿಕೆಯ ಮಹಾಪೌರರಾದ ಸುನಿತಾ ಅಣ್ಣಪ್ಪ, ಸಂಸ್ಥೆಯ ಕಾರ್ಯದರ್ಶಿಗಳಾದ ಲಕ್ಷ್ಮಿ ನಾರಾಯಣ್, ಶಿವಮೊಗ್ಗ ಬಿಜೆಪಿಯ ನಗರದ ಅಧ್ಯಕ್ಷರಾದ ಜಗದೀಶ್, ಸುಡಾ ಅಧ್ಯಕ್ಷರಾದ ನಾಗರಾಜ್, ವಿದ್ಯಾನಗರ ಆರೋಗ್ಯ ಕೇಂದ್ರದ ಡಾ ಉಮಾದೇವಿ, ಪ್ರಾಥಮಿಕ ಆರೋಗ್ಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

2 ಕಾಮೆಂಟ್‌ಗಳು:

  1. ನಮ್ಮ ದೇಶಕ್ಕೆ ಬೇರೆ ಪ್ರಧಾನಮಂತ್ರಿ ಇದ್ದಿದ್ದರೆ, ಕರೋನ ಎಂಬ ವೈರಸ್ ಜನ್ಮ ತಾಳುತ್ತಿರಲಿಲ್ಲ. ಅಂತಾ ಮಾತಾಡ್ತಾರೆ ಹೌದಾ .......

    ಪ್ರತ್ಯುತ್ತರಅಳಿಸಿ
  2. Ayyo nimmannu gellisi kaluyisiddare neeu kelasa mada beku aste nanu pradhanamantri Aguirre innu channagi kelasa maduttiddeneno

    ಪ್ರತ್ಯುತ್ತರಅಳಿಸಿ

Blogger ನಿಂದ ಸಾಮರ್ಥ್ಯಹೊಂದಿದೆ.