ಏ.8, 9 ಮತ್ತು 10 ಶಿವಮೊಗ್ಗ ವಲಯದ ನಡುವೆ ಕ್ರಿಕೆಟ್ ಲೀಗ್ ಮ್ಯಾಚ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ

ಶಿವಮೊಗ್ಗ: ಗೋವಾ ಫ್ರೆಂಡ್ಸ್ ಕ್ರಿಕೆಟ್ ಲೀಗ್ ಹಾಗೂ ಶಿವಮೊಗ್ಗ ವಲಯದ ನಡುವೆ
ಕ್ರಿಕೆಟ್ ಲೀಗ್ ಮ್ಯಾಚ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಏ.8, 9 ಮತ್ತು 10
ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಸಿಎ ವಲಯ ಸಂಚಾಲಕರಾಗಿರುವ ವಿಧಾನ ಪರಿಷತ್
ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಕ್ರೀಡಾ
ಪ್ರವಾಸೋದ್ಯಮವನ್ನು ಹೆಚ್ಚು ಮಾಡುವ ಸಲುವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ
ಮಾಡಲಾಗುತ್ತಿದೆ. ಈಗಾಗಲೇ ಗೋವಾದಿಂದ ತಂಡ ಬಂದಿದೆ ಎಂದರು.

ಕೆಎಸ್‌ಸಿಎ ಎರಡು ಅಂಕಣಗಳು ಸೇರಿದಂತೆ ನಗರದಲ್ಲಿ ನಾಲ್ಕು ಸ್ಟೇಡಿಯಂಗಳಿವೆ.
ಭದ್ರಾವತಿಯಲ್ಲಿದೆ. ಶಿವಮೊಗ್ಗದಲ್ಲಿರುವ ಕೆಎಸ್‌ಸಿಎ ಗ್ರೌಂಡ್‌ಗೆ ಬೆಸ್ಟ್ ಗ್ರೌಂಡ್
ಬಿರುದು ಬಿಸಿಸಿಐ ನೀಡಿದೆ. ಹೀಗಾಗಿ ಶಿವಮೊಗ್ಗ ವಲಯದಿಂದ ಅತೀ ಹೆಚ್ಚು ಕ್ರಿಕೆಟ್
ಪ್ರತಿಭೆಗಳನ್ನು ಹೊರ ತರುವ ಗುರಿ ಹೊಂದಲಾಗಿದೆ ಎಂದರು.

  ಫ್ರೆಂಡ್ಸ್ ಕ್ರಿಕೆಟ್ ಲೀಗ್ನ ಚಿರಾಗ್ ನಾಯಕ್ ಮಾತನಾಡಿ, ಕ್ರಿಕೆಟ್
ಪ್ರತಿಭೆಗಳನ್ನು ಗುರುತಿಸಲು ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಪ್ರತಿಭೆ ಬೆಳೆಯಲು ಈ
ಪಂದ್ಯಾವಳಿ ಸಾಕಾರವಾಗಲಿದೆ. ಇಲ್ಲಿಗೆ ಬಂದು ಆಡುತ್ತಿರುವುದು ಹೆಮ್ಮೆ ಎನಿಸುತ್ತಿದೆ
ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ್, ಯಶವಂತಕುಮಾರ್‌ನಾಯಕ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.