ಏ.12 ರಂದು ಮೀನುಗಾರಿಕೆ ಇಲಾಖೆ ಯೋಜನೆಗಳ ಅರಿವು ಕಾರ್ಯಾಗಾರ-ಸಂವಾದ

ಶಿವಮೊಗ್ಗ ಏಪ್ರಿಲ್ 13:
ಸಾಗರ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಏ.12 ರಂದು ಮೀನುಗಾರಿಕೆ ಇಲಾಖೆ ಯೋಜನೆಗಳ ಅರಿವು ಕಾರ್ಯಾಗಾರ ಮ್ತು ಮೀನುಗಾರರು/ಮೀನು ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು.
     ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕರಾದ ಡಿ.ತಿಪ್ಪೇಸ್ವಾಮಿ ಇವರು ಉದ್ಘಾಟಿಸಿ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಮೀನುಗಾರರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರರು/ಮೀನು ಕೃಷಿಕರೊಂದಿಗೆ ಸಂವಾದ ಏರ್ಪಡಿಸಲಾಗಿದ್ದು ಹಾಜರಿದ್ದ ಮೀನುಗಾರರು ತಮ್ಮ ಬೇಡಿಕೆಗಳು ಹಾಗೂ ಹಾಲಿ ಕೆಲವು ಯೋಜನೆಗಳಲ್ಲಿ ನೀಡುತ್ತಿರುವ ಸಹಾಯಧನ ಮೊತ್ತವನ್ನು ಹೆಚ್ಚಿಸುವಂತೆ ಕೋರಿದರು.
    ಕಾರ್ಯಕ್ರಮದ ಭಾಗವಾಗಿ ಲಿಂಗನಮಕ್ಕಿ ಜಲಾಶಯಕ್ಕೆ ರೂ.2 ಲಕ್ಷ ಸಾಮಾನ್ಯ ಗೆಂಡೆ ಬಿತ್ತನೆ ಮೀನು ಮರಿಗಳನ್ನು ಮೀನುಗಾರರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಉಪಸ್ತಿತಿಯಲ್ಲಿ ದಾಸ್ತಾನು ಮಾಡಲಾಯಿತು. ಈ ವೇಳೆಯಲ್ಲಿ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಹಾಗೂ ಇಲಾಖೆ ಯೋಜನೆಗಳ ಕುರಿತಾದ ಮಾಹಿತಿ ಕೈಪಿಡಿ ಹಾಗೂ ಚಾರ್ಟ್‍ಗಳನ್ನು ಬಿಡುಗಡೆಗೊಳಿಸಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಕೋಳೂರು ಗ್ರಾಮ ಪಂಚಾಯಿತ ಅಧ್ಯಕ್ಷೆ ಸುಮಿತ್ರಾ ಹೆಚ್.ಎನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕೆ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕಿ ಉಮೇಶ್.ಜೆ, ಉಪನಿರ್ದೇಶಕ ಷಡಕ್ಷರಿ.ಜಿ.ಎಸ್, ಗ್ರಾ.ಪಂ ಸದಸ್ಯ ಉಮೇಶ್, ಪಿಡಿಓ ಸುರೇಶ್, ಮೀನುಗಾರಿಕೆ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.