ಏ. 11ರಂದು ಡಾ.ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಕವನ ಸಂಕಲನ ಬಿಡುಗಡೆ ಹಾಗೂ ನಾಟಕ ಪ್ರದರ್ಶನ
ಶಿವಮೊಗ್ಗ: ಹೊಸನಗರ ತಾಲೂಕು ಮಾದಾಪುರದ ಶ್ರೀ ಶನಿಪರಮೇಶ್ವರ ಯುವಕ ಸಂಘ, ಶಿವಮೊಗ್ಗದ ಜಾನಪದ ಕಲಾ ಮತ್ತು ಸಾಃಇ್ತಯ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಏ. 11 ರಂದು ಸಂಜೆ 4 ಗಂಟೆಗೆ ಮಾದಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಡಾ.ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಕವನ ಸಂಕಲನ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಎಂ.ಆರ್. ರೇವಣಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾದಾಪುರದಲ್ಲಿ ಏ. 11 ರಂದು ಹಬ್ಬದ ರೀತಿಯಲ್ಲಿ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾದಕರನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ 4 ಗಂಟೆಗೆ ಮಾಜಿ ಕಾಗೋಡು ತಿಮ್ಮಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಾಸಕರಾದ ಹರತಾಳು ಹಾಲಪ್ಪ, ಬಿ,ಕೆ. ಸಂಗಮೇಶ್ ಪ್ರಶಸ್ತಿ ಪ್ರದಾನ ಮಾಡುವರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಿ.ಎಸ್ಎಸ್. ಮುಖಂಡ ಎಂ. ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದರು.
ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಗಣೇಶ್, ಎ.ಕೆ. ನಾಗೇಂದ್ರಪ್ಪ, ಮಂಜುನಾಥ್ ಬ್ಯಾಣದ್, ಪ್ರಕಾಶ್ ಆರ್., ರೇವಣಪ್ಪ ಎಂ.ಆರ್., ಗುರುಮೂರ್ತಿ, ಸಿದ್ಧಬಸಪ್ಪ, ಮಹಾಬಲೇಶ್ವರ ಹೆಗ್ಡೆ, ವಿನಾಯಕ, ಅಪೇಕ್ಷಾ ಮಂಜುನಾಥ್, ಶಂಕರ್ ನಾಗ್, ದೇವರಾಜ್ ನಾಯ್ಕ್, ನಾಗರಾಜ್, ಆರ್. ರಘು, ನಿಂಗಪ್ಪ ಮಾಸ್ಟರ್, ಹುಚ್ಚಪ್ಪ ಮಾಸ್ಟರ್, ಜಿ.ಸಿ. ಮಂಜಪ್ಪ, ಲಕ್ಷ್ಮಣರಾವ್, ನಿಸಾರ್ ಖಾನ್, ಮಾರ್ಗಪ್ಪ, ಚಂದ್ರು, ಶಿಲ್ಪಾ, ಅವಿನಾಶ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾರತಿ ಗೋವಿಂದಸ್ವಾಮಿ, ಲೋಕಪ್ಪ ಎಂ.ಆರ್., ವೀರೇಶ್ ಹಾಲವಳ್ಳಿ, ಸರಸ್ವತಿ ಗಣಪತಿ, ಕೃಷ್ಣೋಜಿರಾವ್, ಮೊಹಮ್ಮದ್ ಷರೀಫ್, ಕೆ.ಆರ್. ನಾಗರಾಜ್, ಧರ್ಮರಾಜ್, ಗಿರೀಶ್ ಕುಮಾರ್, ಪುಟ್ಟಮ್ಮ, ರಮ್ಯಾ ಶಶಿಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಂಕರ್ ನಾಗ್, ಜೂ. ಪುನೀತ್ ರಾಜಕುಮಾರ್ ಅವರ ವಿಶೇಷ ಕಾರ್ಯಕ್ರಮವಿರುತ್ತದೆ. ಸಂಜೆ. ಸಂಗ್ಯಾ –ಬಾಳ್ಯ ನಾಟಕ ಪ್ರದರ್ಶನವಿದೆ. ಅಂತರರಾಷ್ಟ್ರೀಯ ಕಲಾವಿದ ಎಂ.ಆರ್. ರೇವಣಪ್ಪ ರಚಿಸಿರುವ ನನ್ನೊಳಗೆ ಕವನ ಸಂಕಲನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಮಾದಾಪುರದ ಸುತ್ತಮುತ್ತಲಿನ ಗ್ರಾಮಗಳ ಜನ ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೃಷ್ಣೋಜಿರಾವ್, ಎಂ.ಆರ್. ಮಂಜುನಾಥ್, ಹರೀಶ್, ಧರ್ಮಪ್ಪ, ಧನಂಜಯ, ಯು. ಮಹಾದೇವಪ್ಪ, ದೇವರಾಜ್ ನಿಸಾರ್ ಖಾನ್ ಕೆಂಚಾಯಿಕೊಪ್ಪ ಇದ್ದರು.

Leave a Comment