SDPI ಕಾರ್ಯಕರ್ತ ರಿಂದ ಶಿವಮೊಗ್ಗ ಜಿಲ್ಲಾಧಿಕಾರಿಯವರ ಬೇಟಿ- ಸಂತ್ರಸ್ತರಿಗೆ ಪರಿಹಾರ ನೀಡಲು ಮನವಿ

ಶಿವಮೊಗ್ಗ ನಗರದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆಯ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ಲಾಲ್ ಬಂದ್ ಕೇರಿಗೆ ಸೂಕ್ತ ರಕ್ಷಣೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ SDPI ಜಿಲ್ಲಾ ಸಮಿತಿ ವತಿಯಿಂದ ಶಿವಮೊಗ್ಗ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಈ ಮನವಿಯ ಜೊತೆ ಗಲಭೆಯಲ್ಲಿ ಹಲ್ಲೆಗೊಳಗಾದ ಪ್ರದೇಶಗಳಾದ ಆಜಾ:ದ್ ನಗರ, ಲಾಲ್ ಬಂದ್ ಕೇರಿ, ಇಮಾಮ್ ಬಾಡಾ, ಏನ್.ಟಿ ರಸ್ತೆ, ಬಿ ಹೆಚ್ ರಸ್ತೆ ಹಾಗೂ ರಾಜೀವ್ ಗಾಂಧಿ ಬಡಾವಣೆ ಸೇರಿದಂತೆ ಗಲಭೆಯಲ್ಲಿ ಹಾನಿಯಾದ ಆಸ್ತಿ ಪಾಸ್ತಿ ಹಾಗೂ ವಾಹನಗಳ ಹಾಗೂ ಕಲ್ಲು ತೂರಾಟದಿಂದ ಹಲ್ಲೆಗೊಳಗಾದವರ ಸಂಪೂರ್ಣ ಸರ್ವೆ ವರದಿಯನ್ನು ಈ ಮನವಿಗೆ ಲಗತ್ತಿಸಿ ನೀಡಲಾಯಿತು.
ಇನ್ನು ಬಹಳಷ್ಟು ಸಂತ್ರಸ್ತರು ಪ್ರಕರಣ ದಾಖಲಿಸದೆ ಇರುವುದು ಕೂಡ ಡಿಸಿಯವರ ಗಮನಕ್ಕೆ ತರಲಾಯಿತು.
 ಈ ಸಂದರ್ಭದಲ್ಲಿ SDPI ಜಿಲ್ಲಾಧ್ಯಕ್ಷರಾದ ಇಮ್ರಾನ್, ಉಪಾಧ್ಯಕ್ಷರಾದ ದೇವೇಂದ್ರ ಪಾಟಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಜೀಬ್ ಹಾಗೂ ಮನ್ಸೂರ್ ಖಾನ್, ಕೋಶಾಧಿಕಾರಿ ಅಲ್ಲಾಬಖಷ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.