ಮದುವೆ ಆಗುವುದಾಗಿ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ ನಂತರ ನಿರಾಕರಣೆ: ಯುವತಿ ನೇಣಿಗೆ ಶರಣು

ಶಿವಮೊಗ್ಗದ 34 ವರ್ಷದ ಯುವತಿಯು ಈ ಹಿಂದೆ ಸಹ್ಯಾದ್ರಿ ಕಾಲೇಜ್‌ನಲ್ಲಿ ಎಂ.ಎ ವಿದ್ಯಾಭ್ಯಾಸ ಮಾಡುತ್ತಿದ್ದಾಗ  *ಮಾರ್ನಮಿ ಬೈಲ್, ಶಿವಮೊಗ್ಗದ ವಾಸಿಯಾದ ಮುರುಳಿ ಟಿ. ಎಸ್* ಎಂಬ ಉಪನ್ಯಾಸಕರು ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಮತ್ತು ಮುರುಳಿಯು ಮದುವೆ ಆಗುವುದಾಗಿ  ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರದಲ್ಲಿ  ಆತ ಮದುವೆ ಆಗಲು ನಿರಾಕರಿಸಿರುತ್ತಾನೆ ಮತ್ತು ಆತನು ಬೇರೆ ಹುಡುಗಿಯ ಜೊತೆಗೆ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದು* ಈ ವಿಚಾರದಿಂದ ಬೇಸರಗೊಂಡು ದಿನಾಂಕ:20/03/2022 ರಂದು ಬೆಳಿಗ್ಗೆ ಮನೆಯಲ್ಲಿ *ಪ್ಯಾನಿಗೆ ಸೀರೆಯಿಂದ ನೇಣುಬಿಗಿದುಕೊಂಡು* ಯುವತಿಯು ಮೃತಪಟ್ಟ ಘಟನೆ ವರದಿಯಾಗಿದೆ.

ಆರೋಪಿ ಮುರುಳಿ ಟಿ ಎಸ್ ಹಾಗೂ ಆತನಿಗೆ ಮದುವೆ ಮಾಡಿಕೊಳ್ಳ ಬೇಡ ಎಂದು ಕುಮ್ಮಕ್ಕು ನೀಡಿದ ಭಾಸ್ಕರ್ ಮತ್ತು ದೀಪಕ್ ಇವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ಮೃತೆಯ ಸಹೋದರ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0141/2022 ಕಲಂ 376, 306, 417, 114 ಸಹಿತ 34 IPC ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.