ನಾಜೀಮಾ ಅವರ ಸೇವೆಯನ್ನು ಗುರುತಿಸಿ:ನಿರ್ಮಾಲಾ ಸೇವಾ ಕೇಂದ್ರದಿಂದ ಅಭಿನಂದನೆ

ಶಿವಮೊಗ್ಗ: ಜಯ ಕರ್ನಾಟಕ ಸಂಘಟನೆಯ ಮಹಿಳಾ ಜಿಲ್ಲಾಧ್ಯಕ್ಷೆ ನಾಜೀಮಾ ಅವರ ಸೇವೆಯನ್ನು ಗುರುತಿಸಿ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸೆಕ್ರೇಟ್ ಹಾರ್ಟ್ ಚರ್ಚಿನ ಸಮುದಾಯ ಭವನದಲ್ಲಿ ನಿರ್ಮಾಲಾ ಸೇವಾ ಕೇಂದ್ರದಿಂದ ಅಭಿನಂದನೆ ಸಲ್ಲಿಸಲಾಯಿತು.
ನಾಜೀಮಾ ಅವರು ಕಳೆದ ಹಲವರು ವರ್ಷಗಳಿಂದ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಪ್ರಮುಖವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಗೆ ಕೊಂಡಿಯಾಗಿದ್ದಾರೆ. ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಕನ್ನಡ ಭಾಷೆ, ನೆಲ, ಜಲದ ವಿಷಯದಲ್ಲಿ ಸದಾ ಹೋರಾಟದ ಮನೋಭಾವನೆ ಇಟ್ಟುಕೊಂಡಿದ್ದಾರೆ. ಮಹಿಳೆಯರ ಸಂಘಟನೆಯ ಮೂಲಕ ಹೋರಾಟ ಮಾಡುತ್ತಲೆ ಬಂದಿದ್ದಾರೆ.
ನಾಜೀಮಾ ಅವರದು ಕರುಣೆಯ ಮನಸ್ಸು. ಕೊರೋನಾ 19 ಸಂದರ್ಭದಲ್ಲಿ ತಮ್ಮ ಹಿಂದೂ ಹಾಗೂ ಮುಸ್ಲಿಂ ಮಹಿಳೆಯರನ್ನು ಸಂಘಟಿಸಿ ಸುಮಾರು 60 ದಿನಗಳ ತನಕ ಬಡವರಿಗೆ ಹಸಿದವರಿಗೆ ಊಟ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿಶೇಷ ಎಂದರೇ ಮಹಿಳೆಯರೆ ಸೇರಿಕೊಂಡು ಸ್ವತಃ ಅಡುಗೆ ಮಾಡಿ ಆಹಾರದ ಪೊಟ್ಟಣಗಳನ್ನು ಶಿವಮೊಗ್ಗದ ಎಲ್ಲಾ ಬಡಾವಣೆಗಳಿಗೆ ತಲುಪಿಸಿದ್ದರು.
ಇವರ ಸೇವೆಯನ್ನು ಗುರುತಿಸಿ ನಿರ್ಮಾಲಾ ಸೇವಾ ಕೇಂದ್ರ ಪ್ರಶಂಸೆ ವ್ಯಕ್ತಪಡಿಸಿ ಸನ್ಮಾನಿಸಿ ಮಹಿಳಾ ಸಾಧಕಿಗೆ ನಮ್ಮದೊಂದು ಸಲಾಂ. ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಸೇವಾ ಕೇಂದ್ರ ತಿಳಿಸಿದೆ.
ಈ ಸಂದರ್ಭದಲ್ಲಿ ಫಾದರ್ ಸ್ಟಾನಿ ಡಿಸೋಜಾ ಪ್ರಮೀಳಾ, ಸಿಸ್ಟರ್ ಎಲಿಸಾ, ಮೇರಿ ಡಿಸೋಜಾ, ಎನ್.ಪ್ರೇಮಾ ಶೆಟ್ಟಿ, ಕೌಸರ್ ಭಾನು, ಪ್ರತಿಭಾ, ಶಬನಾ ಸೇರಿದಂತೆ ಹಲವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.