ಸರ್ಕಾರಿ ಶಾಲೆಗೆ ಅಮೆರಿಕ ನಿವಾಸಿ ಬೆಂಚ್, ಡೆಸ್ಕ್ ಕೊಡುಗೆ

ಶಿವಮೊಗ್ಗ: ನಗರದ ನಿವೃತ್ತ ಉಪನ್ಯಾಸಕ ರುದ್ರಪ್ಪ ಹಾಗೂ ಯಶೋಧ ರುದ್ರಪ್ಪನವರ ಪುತ್ರ, ಶಶಿಕಿರಣ್ ಅವರು ಅಮೆರಿಕದ ವಾಷಿಂಗ್ಟನ್ ನಲ್ಲಿ ನೆಲೆಸಿದ್ದು, ಬಿ. ಬೀರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಚ್ ಹಾಗೂ ಡೆಸ್ಕ್ ಗಳನ್ನು ಅಗತ್ಯವಿದೆ ಎಂದು ತಿಳಿದು, ಸ್ಟೀಲ್ ಬೆಂಚ್, ಡೆಸ್ಕ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.
ಕೆ.ಎಸ್.ಎಸ್.ಐ.ಡಿ.ಸಿ. ಉಪಾಧ್ಯಕ್ಷ ಎಸ್ ದತ್ತಾತ್ರಿ ಅವರು ಶಾಲೆಗೆ ಭೇಟಿ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಬೆಂಚ್ ಹಾಗೂ ಡೆಸ್ಕ್ ಗಳನ್ನು ಶಾಲೆಗೆ ಹಸ್ತಾಂತರಿಸಿದ್ದಾರೆ.
ಸುಮಾರು ಒಂದು ಶತಮಾನದಷ್ಟು ಹಳೆಯದಾದ ಬಿ. ಬೀರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಸಾಕಷ್ಟು ಬೆಂಚ್ ಗಳಿಲ್ಲದೆ ನೆಲದ ಮೇಲೆ ಕುಳಿತುಕೊಂಡು ಶಿಕ್ಷಣ ಪಡೆಯಬೇಕಿತ್ತು, ಇದನ್ನು ಗಮನಿಸಿದ ಸ್ಥಳೀಯರು ಹಾಗೂ ರೋಟರಿ ಕ್ಲಬ್ ನಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡಿರುವ ಸಂತೋಷ್ ಅವರ ಶ್ರಮದ ಮೇರೆಗೆ ಹಾಗೂ ವಾಷಿಂಗ್ಟನ್ ನ ಶಶಿಕಿರಣ್ ಅವರು ಹಣವನ್ನು ನೀಡಿದ ಪರಿಣಾಮವಾಗಿ ಸ್ಟೀಲ್ ಡೆಸ್ಕ್ ಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಾಗಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್. ದತ್ತಾತ್ರಿ, ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ ಎಂಬಂತೆ. ಎಲ್ಲಿಯೋ ಇರುವ ವಾಷಿಂಗ್ಟನ್ ನ ನಿವಾಸಿ, ಇನ್ನೊಲ್ಲೋ ಇರುವ ಶಾಲೆಗೆ ವಿದ್ಯಾರ್ಥಿಗಳಿಗೋಸ್ಕರ ದೇಣಿಗೆ ನೀಡಿರುವುದು ಹೆಮ್ಮೆಯ ಸಂಗತಿ. ಸಂತೋಷ್ ಹಾಗೂ ಶಶಿಕಿರಣ್ ಅವರ ಈ ಸೇವೆ ನಿಜಕ್ಕೂ ಶ್ಲಾಘನೀಯ. ಅವರಿಗೆ ಅಭಿನಂದನೆಗಳು ಎಂದರು.
ಕಾರ್ಯಕ್ರಮದಲ್ಲಿ ಶಶಿಕಿರಣ್ ಅವರ ತಂದೆ ರುದ್ರಪ್ಪ, ಯಶೋಧ ರುದ್ರಪ್ಪ, ಪ್ರಗತಿ ಗ್ರಾಮೀಣ ಬ್ಯಾಂಕಿನ ಮಾಜಿ ಚೇರ್ಮನ್ ಕೆ.ಆರ್. ಲಿಂಗಪ್ಪ, ರೋಟೇರಿಯನ್ ಉಷಾ ನಟೇಶ್, ಸಂತೋಷ್, ಗಣೇಶ್ ಅಂಗಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಮಂಜುಳ ಬಾಯಿ, ಶಾಲಾ ಮುಖ್ಯ ಶಿಕ್ಷಕ ಅಯೂಬ್ ಖಾನ್, ಶಾಲಾ ಅಭಿವೃದ್ಧಿ ಮಂಡಳಿಯ ರಾಜಪ್ಪ ಹಾಗೂ ಶೋಭಾ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.