ಹಿಜಾಬ್ ಪ್ರಕರಣ:ಹೈಕೋರ್ಟ್ ತೀರ್ಪಿಗೆ ಸ್ವಾಗತ,ತೀರ್ಪು ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಿ: ಹಿಂದೂ ಜನಜಾಗೃತಿ ಸಮಿತಿ
*ಹಿಜಾಬ್ ಪ್ರಕರಣದ ಬಗ್ಗೆ ಉಚ್ಚ ನ್ಯಾಯಾಲಯದ ತೀರ್ಪಿಗೆ ಸ್ವಾಗತ ಮತ್ತು ತೀರ್ಪು ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಿ; ಹಿಂದೂ ಜನಜಾಗೃತಿ ಸಮಿತಿ
ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ಕೋಮುಭಾವನೆಯನ್ನು ಕೆರಳಿಸಿ, ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ತಮಗೆ ಧಾರ್ಮಿಕ ವಸ್ತ್ರ ಧರಿಸಲು ವಿಶೇಷ ಅಧಿಕಾವಿದೆಯೆಂದು ಸುಳ್ಳು ಹೇಳಿ, ಅಂತಾರಾಷ್ಟ್ರೀಯ ಸ್ಥರದಲ್ಲಿ ಷಡ್ಯಂತ್ರ್ಯವನ್ನು ಮತಾಂಧ ಸಂಘಟನೆಗಳು ರಚಿಸಿದ್ದವು.
ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ‘ಹಿಜಾಬ್ ಇಸ್ಲಾಂನ ಅತ್ಯವಶ್ಯಕ ಆಚರಣೆಯಲ್ಲ, ಶಾಲೆಗಳಲ್ಲಿ, ಸರ್ಕಾರ ನಿಗದಿ ಪಡಿಸಿದ ಸಮವಸ್ತ್ರವನ್ನೇ ಧರಿಸಬೇಕು ಎಂದು ಐತಿಹಾಸಿಕ ನಿರ್ಣಯ ನೀಡುವ ಮೂಲಕ ಅದನ್ನು ವಿಫಲಗೊಳಿಸಿದೆ. ಈ ಐತಿಹಾಸಿಕ ನಿರ್ಣಯವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ.
ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಅಲ್ಲದೇ ಹಿಂದೂ ಕಾರ್ಯಕರ್ತರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ಶಾಲಾ ವಿದ್ಯಾರ್ಥಿಗಳಲ್ಲಿ ಕೋಮುಭಾವನೆಯನ್ನು ಬಿತ್ತುವ ಮತಾಂಧ ಸಂಘಟನೆಗಳಿಗೆ ಶಾಲಾ ಕಾಲೇಜು ಆವರಣದೊಳಗೆ ಪ್ರವೇಶ ನೀಡಬಾರದು ಎಂದೂ ಆಗ್ರಹಿಸುತ್ತದೆ.
ತಮ್ಮ ವಿಶ್ವಾಸಿ
*ಶ್ರೀ. ಮೋಹನ ಗೌಡ,*
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ.
ಸಂಪರ್ಕ: 7204082609
Leave a Comment