ಪ್ರದಾನಿ ಮೋದಿ ಶಿವಮೊಗ್ಗ ಹೊಳಲೂರು ಗ್ರಾಮ ಬೇಟಿ ಕಾರ್ಯಕ್ರಮ ರದ್ದು!

ನವದೆಹಲಿ:  ಮೋದಿಯವರು ಏಪ್ರಿಲ್ ನಲ್ಲಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮವೊಂದಕ್ಕೆ ಭೇಟಿ ಕೊಡಬೇಕಾಗಿತ್ತು.ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಜಿಲ್ಲಾಡಳಿತ ದಿಂದ ಸಹ ನಡೆದಿತ್ತು.ಸಂಸದರು ಮತ್ತು ಸ್ಥಳೀಯ ಶಾಸಕರು ಸಹ ಗ್ರಾಮಕ್ಕೆ ಬೇಟಿ ನೀಡಿ ಸಿದ್ದತೆ ಬಗ್ಗೆ ಪರಿಶೀಲನೆ ಮಾಡಿದ್ದರು.ಅಲ್ಲಿನ ಗ್ರಾಮಸ್ಥರು ಸಹ ಬಹಳ ಉತ್ಸಾಹ ದಿಂದ ಮೋದಿ ಭೇಟಿ ಕಾರ್ಯಕ್ರಮ ವೀಕ್ಷಿಸಲು ಕಾಯುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಭೇಟಿ ರದ್ದು ಮಾಡಿ, ಅಂದೇ ಕಾಶ್ಮೀರಕ್ಕೆ ಏಪ್ರಿಲ್ 24ರಂದು ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

 ಶಿವಮೊಗ್ಗದ ಹೊಳಲೂರು ಗ್ರಾಮ ಪಂಚಾಯಿತಿಗೆ ಪ್ರಧಾನಿ ಮೋದಿ ಏಪ್ರಿಲ್ 24 ರಂದು ಭೇಟಿ ನೀಡಬೇಕಾಗಿತ್ತು. ಈ ಗ್ರಾಮ ಸುವರ್ಣ ಗ್ರಾಮ ಯೋಜನೆಯಡಿ ಪ್ರಶಸ್ತಿ ಪಡೆದಿತ್ತು. ಇಲ್ಲಿಗ ಪ್ರಧಾನಿ ಬರುವ ಬಗ್ಗೆ ಗ್ರಾಮಸ್ಥರು ಭಾರಿ ಸಂತಸದಲ್ಲಿದ್ದರು. ಆದರೆ ಪ್ರಧಾನಿ ಧಿಡೀರ್ ಪ್ರವಾಸ ರದ್ದು ಮಾಡಿದ್ದಾರೆ.

 ಕೊನೆ ಕ್ಷಣದಲ್ಲಿ ಅದೇ ದಿನ ಪ್ರಧಾನಿ ಕಾಶ್ಮೀರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಪ್ರಧಾನಿ ಮಂತ್ರಿ ಕಾರ್ಯಾಲಯ ತಿಳಿಸಿದೆ ಎಂದು ಸುದ್ದಿ ವಾಹಿನಿಯೊಂದರಲ್ಲಿ ವರದಿಯಾಗಿದೆ.

ಅಂದೇ ಇದೇ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರು ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.