ಅಪ್ಪು ಜನ್ಮದಿನಾಚರಣೆ ಹಾಗೂ ಜೇಮ್ಸ್ ಚಿತ್ರದ ಬಿಡುಗಡೆ ಕಾರ್ಯಕ್ರಮ

ಶಿಕಾರಿಪುರ : ಪಟ್ಟಣದ ಪುನೀತ್ ರಾಜಕುಮಾರ್  ಅಭಿಮಾನಿಗಳು ನಗರದ ವಿವಿಧ ಭಾಗದಲ್ಲಿ ಅಪ್ಪು  ಜನ್ಮದಿನಾಚರಣೆಹಾಗೂ ಜೇಮ್ಸ್ ಚಿತ್ರದ ಬಿಡುಗಡೆಯನ್ನು  ಸಂಭ್ರಮದಿಂದ ಆಚರಿಸಿದರು. 

ನಗರದ ಆರಾಧನಾ  ಕೆಫೆಯಲ್ಲಿ 1ಕ್ವಿಂಟಾಲ್ ಕಟ್ ಮಾಡುವ ಮೂಲಕ ಸುಮಾರು 2ಸಾವಿರ ಜನಗಳಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟವನ್ನು ಕೆಫೆ ಮಾಲೀಕರಾದ  ಕಾಳಿಂಗರವರು ಆಯೋಜನೆ ಮಾಡಿದ್ದರು.  ಶೇಖರ್ ಇಡ್ಲಿ ಎಂಬ ಅಭಿಮಾನಿ ಪಟ್ಟಣದ ಕಿರಣ್ ಚಿತ್ರ ಮದಿರದಲಿ 1ಕ್ವಿಂಟಾಲ್ ಕೇಕ್ ಕಟ್ ಮಾಡುವ ಅಭಿಮಾನಿಗಳು ಸಂಭ್ರಮಿಸಿದರು. ರಾಜ್ ಕುಮಾರ್  ನೇತುತ್ವದ ಅಭಿಮಾನಿ ತಂಡ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಅಪ್ಪು ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಕೇಕ್ ವಿತರಣೆ ಮಾಡಿ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದರು. ಡಾ. ರಾಜ್ ಕುಮಾರ್ ಸ್ನೇಹ ಬಳಗದ ವೈಭವ್ ಬಸವರಾಜ್  ರವರವ ತ೦ಡ  ಅಪ್ಪು ಟೀಶರ್ಟ್ ವಿತರಣೆ ಮೂಲಕ ಬೈಕ್ ರ್ಯಾಲಿ ನಡೆಸಿ ಪಟ್ಟಣದ ಕಿರಣ್ ಟಾಕೀಸ್ ಹಾಗೂ ಮಾಲತೇಷ ಚಿತ್ರ ಮ೦ದಿರದಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಿಸಿ ಸಿಹಿ ವಿತರಣೆ ಮಾಡಿದರು. ಈ ಸಂದರ್ಭ  ಆರಧಾನ ನ್ಯೂ ಕೆಫೆಯಲ್ಲಿ ಕೇಕ್ ಕಟ್ ಮಾಡಿದ ಪಟ್ಟಣ ಪೊಲೀಸ್ ಠಾಣೆ ಎಸ್‌.ಐ  ಪ್ರಶಾಂತ್ ಕುಮಾರ್  ಮಾತನಾಡಿ ಅವರ ತ೦ದೆ ಕಣ್ಣಿಗೆ ಕಾಣದಂತೆ ದಾನ ಧರ್ಮ  ಮಾಡಿದ್ದರು, ರಾಜ್ಯದಲ್ಲಿ ರಸಮಂಜರಿ ಕಾರ್ಯಕ್ರಮದ ಮೋಲಕ ಸಾಕಷ್ಟು ಸಹಾಯ ದಾನ ಮಾಡಿದರು. ಅದರಂತೆ ಅವರ ಮಗ ಕೂಡ  ದಾನ ಧರ್ಮ ಮಾಡಿ  ಎಡಗೈಗೆ ಕೊಟ್ಟಿದ್ದು ಬಲಗೈಗೆ  ಗೊತ್ತಾಗದಂತೆ ಸೇವೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ನೀವೆಲ್ಲಾ ಅವರಂತೆಯೇ ಆದರ್ಶ ಪಾಲಿಸಬೇಕೆಂದರು. ಅಖಿಲಾ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಎನ್ ವಿ. ಈರೇಶರವರು ಮಾತನಾಡಿ ಅಪ್ಪು  ನಿಮ್ಮಂಥ ಪ್ರತಿಯೊಬ್ಬ ಅತ್ಯುತ್ತಮ ಅಭಿಮಾನಿಗಳ ಎಂದೆಂದು ಜತೆಗಿರುತ್ತಾರೆ  ಎಂದರು. ವೈಭವ್  ಬಸವರಾಜ್ ಮಾತನಾಡಿ ಅಜರಾಮರ ಎನ್ನುವ ಪದಕ್ಕೆ ಅಪ್ಪು ನಿಧನದಿಂದ ಆ ಪದಕ್ಕೆ ಅರ್ಥ ಬಂದಿದೆ, ಕರ್ನಾಟಕ ಮಾತ್ರವಲ್ಲ ಇಂಡಿಯಾ ಮಾತ್ರವಲ್ಲ ಇಡೀ ಜಗತ್ತೇ  ಮೆಚ್ಚುವ ಜಾಗತಿಕ ವ್ಯಕ್ತಿಯಾಗಿದ್ದಾರೆ ಎಂದರು. ಈ ಸಂದರ್ಭ ರಾಜ್ ಕುಮಾರ್, ಶಿವರಂಜನಿ  ಸುದರ್ಶನ್,ರಾಜೇಂದ್ರ  ಟ್ಯೆಮಕರ್, ಸುಬ್ರಹ್ಮಣ್ಯ ರೆವಣಕರ,  ಪಾರು ಸ್ವಾಮಿ' ಇಡ್ಲಿ ಶೇಖರ್, ನಾಗರಾಜ್, ಎಸ್ ಬಿ ಅರುಣ್ ಕುಮಾರ್, ವೀರನಗೌಡ, ಕಾಳಿಂಗರಾವ್,  ಆಗುೂರ ಚಂದ್ರು, ಎನ್ ಜಗದೀಶ್,  ಪ್ರದೀಪ್, ಕಾಡು ಪ್ರವೀಣ್, ಬಸಂತಿ  ಸೇರಿದಂತೆ ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.