ಪ್ರೀತಿಸಿ ಮದುವೆಯಾದ ಗರ್ಭಿಣಿ ಪತ್ನಿಗೆ ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದ ಪತಿರಾಯ..ಬಂಧನ*

ಉಡುಪಿ: ಪ್ರೀತಿಸಿ ಮದುವೆಯಾದ ತನ್ನ ಗರ್ಭಿಣಿ ಪತ್ನಿಗೆ ದಿನನಿತ್ಯ ಚಿತ್ರಹಿಂಸೆ ಕೊಟ್ಟು ವರದಕ್ಷಿಣೆ ತರುವಂತೆ ಪೀಡಿಸಿ ಸಾಲದಕ್ಕೆ ಆಕೆಯ ದೇಹದ ಮೇಲೆ  ಸಿಗರೇಟ್‌ನಿಂದ ಸುಟ್ಟಿ ಹಿಂಸಿಸಿ ವಿಕೃತಿ  ಮೆರೆದ ಪತಿರಾಯನನ್ನು ಪೋಲಿಸರು ಬಂಧಿಸಿದ್ದಾರೆ ಈ ಘಟನೆ ನೆಡೆದದ್ದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ. 

ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಪೂಜಾರಿ ಬಂಧಿತ ಆರೋಪಿಯಾಗಿದ್ದಾನೆ.
ತಾನು ಪ್ರೀತಿಸಿ ವಿವಾಹವಾಗಿದ್ದ ಕುಂದಾಪುರದ ಬೀಜಾಡಿ ನಿವಾಸಿ ಪ್ರಿಯಾಂಕಾ (21)ಳನ್ನು ದಿನ ನಿತ್ಯ ಮನಬಂದಂತೆ ಚಿತ್ರಹಿಂಸೆ ನೀಡಿ ಸಹಿಸಿಕೊಳ್ಳಲು ಸಾಧ್ಯವಾಗದ ರೀತಿ ವರ್ತಿಸುತ್ತಿದ್ದ ಗಂಡ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು  ಹೇಳುತ್ತಿದ್ದನಂತೆ.
ಮೊದಲೇ ಮನೆಯವರನ್ನು ಬಿಟ್ಟು ಪ್ರೀತಿಸಿದವನನ್ನು ನಂಬಿ ಕೈಹಿಡಿದ ಪ್ರಿಯಾಂಕಾಳಿಗೆ ಪ್ರೀತಿಸಿ ಮದುವೆಯಾದ ಗಂಡನ ನಿಜ ಸ್ವರೂಪ ಬಯಲಾಗಿದೆ ಆತನನ್ನು ನಂಬಿ ಮದುವೆಯಾದ ದಿನದಿಂದಲೆ ಪ್ರದೀಪನ ವಿಕೃತ ವರ್ತನೆಯನ್ನು ಕಂಡು ಪ್ರಿಯಾಂಕಾ ನಲುಗಿ ಹೊಗಿದ್ದಾಳೆ ಮಡದಿ ಗರ್ಭಿಣಿಯಾಗಿದ್ದರು ಆಕೆಯನ್ನು ಬಿಟ್ಟು ಬಿಡದೆ ಕಾಡಿದ್ದಾನೆ . ಇತ್ತೀಚಿಗೆ ಗರ್ಭಿಣಿ ಪತ್ನಿಗೆ  ಸಿಗರೇಟಿನಿಂದ ಆಕೆಯ ಮುಖ, ದೇಹವನ್ನು ಸುಟ್ಟು  ಕ್ರೂರವಾಗಿ ಹಿಂಸಿಸಿದ ವಿಡಿಯೋ ಅನ್ನು ತನ್ನ ಕೈಯಾರೆ ತೆಗೆದು ಆಕೆಯ ಮನೆಯವರಿಗೆ ಕಳುಹಿಸಿ ವರದಕ್ಷಿಣೆ ಕೊಡುವಂತೆ ತಾಕೀತು ಮಾಡಿದ್ದನಂತೆ? ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ವೀಕ್ಷಿಸಿದ ಪ್ರತಿಯೊಬ್ಬರಿಂದಲೂ ಬಾರಿ ಆಕ್ರೋಶ ವ್ಯಕ್ತವಾಗಿತ್ತು

 ಕೂಡಲೇ ಪತ್ನಿ ಪ್ರಿಯಾಂಕಾ  ಕುಂದಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿ ಗಂಡನ ನೀಚತನದ ಬಗ್ಗೆ ದೂರು ದಾಖಲಿಸಿದ್ದಾಳೆ. 

ವಿಡಿಯೋ ವೈರಲ್ ಆದ ಹಾಗೂ ಪತ್ನಿ ಠಾಣೆಗೆ ದೂರು ನೀಡಿದ ವಿಚಾರ ತಿಳಿಯುತ್ತಲೇ ಆರೋಪಿ ಪ್ರದೀಪ್ ಪರಾರಿಯಾಗಿದ್ದ.  

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಪೊಲೀಸರ ತಂಡ ಆರೋಪಿಯ ಬೆನ್ನಿಗೆ ಬಿದ್ದು ಹಿಡಿದು ತಂದಿದ್ದಾರೆ. 

 ಪ್ರಿಯಾಂಕಾ ಮತ್ತು ಪ್ರದೀಪ್ ಪೂಜಾರಿಯದು  ಪ್ರೇಮ ವಿವಾಹ ಇವರಿಬ್ಬರು ಕಳೆದ ವರ್ಷ ಆಕ್ಟೋಬರ್ ತಿಂಗಳಿನಲ್ಲಿ ಕೊಲ್ಲೂರಿನಲ್ಲಿ ಮೂಕಾಂಬಿಕೆಯ ಸನ್ನಿಧಿಯಲ್ಲಿ  ವಿವಾಹವಾಗಿದ್ದರು. ವಿವಾಹದ 5 ತಿಂಗಳಿನಲ್ಲಿ  ತಾನೂ ಪ್ರೀತಿಸಿ ಮದುವೆಯಾದ ಯುವಕನ ರಾಕ್ಷಸ ಪ್ರವೃತ್ತಿ ಬಯಲಾಗಿದೆ ಮದುವೆಯಾದ ದಿನದಿಂದಲೆ ಗಂಡನ ವಿಕೃತ ತನಕ್ಕೆ ಒಳಗಾಗಿ ನಿತ್ಯ ಕಣ್ಣಿರಲ್ಲೆ ದಿನಕಳೆದ ಪ್ರಿಯಾಂಕಾ ಸಾಕಷ್ಟು ನೊಂದು ಠಾಣೆಯ ಮೆಟ್ಟಿ ಲೇರಿದ್ದಾಳೆ

ವಿವಾಹದ ಬಳಿಕ ಪ್ರಿಯಾಂಕಾ ಪತಿಯ ಮನೆಯಲ್ಲೇ ನೆಲೆಸಿದ್ದರು. ಮದುವೆಯಾಗಿ 4-5 ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ದಿನನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಬಾ ಎಂದು ಚಿತ್ರಹಿಂಸೆ ನೀಡಲಾರಂಭಿಸಿದ್ದಾನೆ. 2 ಲಕ್ಷ ರೂಪಾಯಿ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಪತ್ನಿಗೆ ದಿನನಿತ್ಯ ಪೀಡಿಸುತ್ತಿದ್ದ. ಪತ್ನಿ ವರದಕ್ಷಿಣೆ ತರಲು ಒಪ್ಪದಿದ್ದಾಗ ತಾನು ಸೇದುತ್ತಿದ ಸಿಗರೇಟಿನಿಂದ ಆಕೆಯ ಮುಖ ದೇಹವನ್ನೆಲ್ಲ ಸುಟ್ಟಿದ್ದಾನೆ. ಅದು ಕೂಡ ತನ್ನ ತಾಯಿಯ ಎದುರಲ್ಲೆ ಕ್ರೌರ್ಯತೆ ಮೆರೆದಿದ್ದಾನೆ.
ಸಿಗರೇಟ್‌ನಲ್ಲಿ ಚುಚ್ಚಿದ ವೇಳೆ ತಾಯಿ ಮಧ್ಯಪ್ರವೇಶಿಸಿ ಹಿಂಸೆ ಮಾಡದಂತೆ ಮನವಿ ಮಾಡಿದ್ದಾರೆ. ಗರ್ಭಿಣಿ ಪತ್ನಿಯನ್ನು ಹಿಂಸೆ ಮಾಡಿದರೆ ಪಾಪ ತಟ್ಟುವುದಾಗಿ ಹೇಳಿದ್ದಾರೆ. ತಾಯಿಯ ಮಾತನ್ನು ಲೆಕ್ಕಿಸದೆ  ಪಾಪಿ ಪತಿ ಪ್ರದೀಪ್ ಸಿಗರೇಟ್‌ನಿಂದ ಸುಟ್ಟಿ ಕಾಲು ಹಿಡಿಯುವಂತೆ ನಿರ್ದಯವಾಗಿ ನಡೆದುಕೊಂಡಿದ್ದಾನೆ.

ಪತ್ನಿ ಪ್ರೀಯಾಂಕಾಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ತನ್ನ ಮಗುವನ್ನೇ ಹತ್ಯೆ ಮಾಡುವುದಕ್ಕೆ ಪ್ರದೀಪ ಪ್ರೀಯಾಂಕಾಳ ಹೊಟ್ಟೆಗೆ ಒದ್ದು ಮಗವನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾನೆ. ಆದರೆ ಈ ವೇಳೆ ಒದ್ದ ಏಟು ಪ್ರೀಯಾಂಕಾ ಸೊಂಟಕ್ಕೆ ಬಿದ್ದಿದ್ದು, ಸದ್ಯ ಮಗು ಅಪಾಯದಿಂದ ಪಾರಾಗಿದೆ ಎಂದು ಪ್ರಿಯಾಂಕಾ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.‌
 ಪೊಲೀಸರು ಆರೋಪಿ ಪತಿ ಪ್ರದೀಪ್‌ನನ್ನು ಹೆಡೆಮುರಿಕಟ್ಟಿ ಠಾಣೆಗೆ ಎಳೆದು ತಂದಿದ್ದಾರೆ


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.