ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಬಗ್ಗೆ ವಿಶೇಷ ಲೇಖನ.. ಶಿವರಾತ್ರಿಯ ಪ್ರಯುಕ್ತ ವಿವಿಧ ದೇವಾಲಯ ದಲ್ಲಿ ವಿಶೇಷ ಅಲಂಕಾರ ನೋಡಿ..

ಮಹಾಶಿವರಾತ್ರಿಯ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ !

ಶಿವನ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯುವುದುಶಿವಮೊಗ್ಗ ನಗರದ ವಿನೋಬನಗರ ಶಿವಾಲಯ ದೇವಸ್ಥಾನ ದಲ್ಲಿ ಶಿವರಾತ್ರಿ ಹಬ್ಬದ ಪ್ರ ಯುಕ್ತ ವಿಶೇಷ ಅಲಂಕಾರ

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ.ಶಿವಮೊಗ್ಗ ನಗರದ ಕೋಟೆ ಭೀಮೇಶ್ವರ ದೇವಸ್ಥಾನ

ನಂದಿಯ ಕೊಂಬುಗಳಿಂದ ದರ್ಶನವನ್ನು ಪಡೆದುಕೊಳ್ಳದೇ ನೇರವಾಗಿ ಶಿವನ ದರ್ಶನವನ್ನು ಪಡೆದುಕೊಂಡರೆ ತೇಜಲಹರಿಗಳ ಆಘಾತದಿಂದ ಶರೀರದಲ್ಲಿ ಉಷ್ಣತೆ ನಿರ್ಮಾಣವಾಗುವುದು, ತಲೆ ಭಾರವಾಗುವುದು, ಶರೀರ ಅಕಸ್ಮಾತ್ತಾಗಿ ಕಂಪಿಸುವುದು ಮುಂತಾದ ತೊಂದರೆಗಳಾಗಬಹುದು.
ಶೃಂಗದರ್ಶನದ ಮಹತ್ವವೇನು ?

‘ಶೃಂಗದರ್ಶನ’ ಎಂದರೆ ನಂದಿಯ ಕೊಂಬುಗಳ ಮೂಲಕ ಶಿವಲಿಂಗವನ್ನು ನೋಡುವುದು.


ವೀರಶೈವ ಕಲ್ಯಾಣ ಮಂದಿರದ ಆವರಣದಲ್ಲಿರುವ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ವಿಶೇಷ ಅಲಂಕಾರ

ಶೃಂಗದರ್ಶನದ ಯೋಗ್ಯ ಪದ್ಧತಿ

ವಾಮಹಸ್ತಿ ವೃಷಣ ಧರೋನಿ|
ತರ್ಜನಿ ಅಂಗುಷ್ಠ ಶೃಂಗೀ ಠೆವೋನಿ|| - ಶ್ರೀಗುರುಚರಿತ್ರೆ
ಅರಕೇಶ್ವರ ಸ್ವಾಮಿ ದೇವಸ್ಥಾನ ಹೊಳೆಹೊನ್ನೂರು ರಸ್ತೆ

ಅರ್ಥ: ೧. ನಂದಿಯ ಬಲಬದಿಗೆ ಕುಳಿತುಕೊಂಡು ಅಥವಾ ನಿಂತುಕೊಂಡು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು.
೨. ಬಲಗೈಯ ತರ್ಜನಿ (ಹೆಬ್ಬೆರಳಿನ ಸಮೀಪದ ಬೆರಳು) ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು.
ಎರಡು ಕೊಂಬುಗಳು ಮತ್ತು ಅದರ ಮೇಲಿರಿಸಿದ ಎರಡು ಬೆರಳುಗಳ ನಡುವಿನ ಖಾಲಿ ಜಾಗದಿಂದ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳಬೇಕು.
  ಶಿವಮೊಗ್ಗ ನಗತದ ಹಳೆ ಜೈಲು ಆವರಣದಲ್ಲಿರುವ ಉಮಾಮಹೇಶ್ವರ ಸ್ವಾಮಿ ದೇವಸ್ಥಾನ

ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.
ರವೀಂದ್ರ ನಗರದಲ್ಲಿನ ಪಾರ್ಕ್ ಶಿವ 

ಶಿವಲಿಂಗದಿಂದ ಬರುವ ಶಕ್ತಿಶಾಲಿ ಸಾತ್ತ್ವಿಕ ಲಹರಿಗಳು ಮೊದಲು ನಂದಿಯ ಕಡೆಗೆ ಆಕರ್ಷಿತವಾಗಿ ನಂತರ ನಂದಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತಿರುತ್ತವೆ. ನಂದಿಯ ವೈಶಿಷ್ಟ್ಯವೇನೆಂದರೆ ನಂದಿಯಿಂದ ಈ ಲಹರಿಗಳು ಆವಶ್ಯಕತೆಗನುಸಾರವಾಗಿಯೇ ಪ್ರಕ್ಷೇಪಿತವಾಗುತ್ತಿರುತ್ತವೆ. ಇದರಿಂದ ಶಿವಲಿಂಗದ ದರ್ಶನವನ್ನು ಪಡೆಯುವವರಿಗೆ ಲಹರಿಗಳು ಶಿವನಿಂದ ನೇರವಾಗಿ ಸಿಗುವುದಿಲ್ಲ; ಇದರಿಂದ ಅವರಿಗೆ ಶಿವನಿಂದ ಬರುವ ಶಕ್ತಿ ಶಾಲಿ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಲ್ಲಿ ಗಮನದಲ್ಲಿಡಬೇಕಾದ ಮಹತ್ವದ ಸಂಗತಿಯೇನೆಂದರೆ ಶಿವನಿಂದ ಬರುವ ಲಹರಿಗಳು ಸಾತ್ತ್ವಿಕವೇ ಆಗಿದ್ದರೂ ಸಾಮಾನ್ಯ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟವು ಹೆಚ್ಚಿಗೆ ಇಲ್ಲದ ಕಾರಣ ಆ ಸಾತ್ತ್ವಿಕ ಲಹರಿಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಅವರಲ್ಲಿರುವುದಿಲ್ಲ. ಆದುದರಿಂದ ಈ ಲಹರಿಗಳಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸಾಮಾನ್ಯ ವ್ಯಕ್ತಿಗಳು ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತು ಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಗೆ ನಿಂತು ಕೊಳ್ಳಬೇಕು.

ಶೇ. ೫೦ ಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮಟ್ಟವಿರುವ ಭಕ್ತರಲ್ಲಿ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಸಹಿಸುವ ಕ್ಷಮತೆಯಿರುತ್ತದೆ, ಆದುದರಿಂದ ಅವರಿಗೆ ಆ ಲಹರಿಗಳಿಂದ ತೊಂದರೆಯಾಗುವುದಿಲ್ಲ. ಇಂತಹ ಭಕ್ತರು ದೇವತೆಯ ದರ್ಶನವನ್ನು ಎದುರಿನಿಂದಲೇ ಪಡೆದುಕೊಳ್ಳಬೇಕು. ಅವರಿಗೆ ದೇವತೆಗಳಿಂದ ಪ್ರಕ್ಷೇಪಿತವಾಗುವ ಲಹರಿಗಳನ್ನು ಸಹಜವಾಗಿ ಗ್ರಹಿಸಲು ಸಾಧ್ಯವಾಗುತ್ತದೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’)
ತಮ್ಮ ವಿಶ್ವಾಸಿ,
ಶ್ರೀ. ವಿನೋದ ಕಾಮತ್,
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 9342599299

*ಮಹಾಶಿವರಾತ್ರಿ ಪ್ರಯುಕ್ತ ಶಿವಮೊಗ್ಗ ನಗರದ ವಿನೋಬನಗರ ಶಿವಾಲಯದ ಮುಂಭಾಗ ಪ್ರತಿವರ್ಷದಂತೆ ಶ್ರೀ ಬಾಲಗಂಗಾಧರ ತಿಲಕ್ ಯುವ ಪಡೆ ಹಾಗೂ  ಸಿಹಿಮೊಗೆ ಕನ್ನಡ ಯುವ ವೇದಿಕೆ ವಿನೋಬನಗರ ಇವರ ಆಶ್ರಯದಲ್ಲಿ ಶಿವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಜ್ಜಿಗೆಯನ್ನು ವಿತರಿಸಲಾಯಿತು* 

*ಈ ಸಂದರ್ಭದಲ್ಲಿ ಶ್ರೀ ಬಾಲಗಂಗಾಧರ ತಿಲಕ್ ಯುವ ವೇದಿಕೆಯ ಅಧ್ಯಕ್ಷರಾದ ಸಂದೀಪ್ ಸುಂದರ್ ರಾಜ್, ಬಡಾವಣೆಯ ಯುವ ಮುಖಂಡರುಗಳಾದ ಹೆಚ್.ಪಿ. ಗಿರೀಶ್ , ಗುರುಪ್ರಸಾದ್, ಯಶ್ವಂತ್, ಪ್ರತೀಕ್ ಕೆಪಿ,  ಗಿರೀಶ್ ಶೆಟ್ಟಿ, ದರ್ಶನ್ ,ಅಭಿಷೇಕ್ ಗೌಡ, ಮನೋಜ್ ವಿಘ್ನೇಶ್  ಲೋಹಿತ್,  ಆಕರ್ಷ್, ದೇವರಾಜ್, ಯಶ್ವಂತ್, ವಿಕಾಸ್  ಹಾಗೂ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು*

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.