*ಎನ್‍ಹೆಚ್ 766(ಸಿ) ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ*

ಶಿವಮೊಗ್ಗ :ರಾಷ್ಟ್ರೀಯ ಹೆದ್ದಾರಿ 766(ಸಿ) ರಲ್ಲಿ ಬರುವ ನಗರ-ಚಿಕ್ಕಪೇಟೆ ಮಧ್ಯದಲ್ಲಿರುವ ಸೇತುವೆಯ ಎರಡೂ ಕಡೆಗೂ ಸುರಕ್ಷತಾ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಭದ್ರತಾ ವ್ಯವಸ್ಥೆಯೊಂದಿಗೆ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಮುಂದಿನ ಆದೇಶದವರೆಗೆ ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.
     ಶಿವಮೊಗ್ಗ-ತೀರ್ಥಹಳ್ಳಿ ಮೂಲಕ ಹೊಸನಗರದಿಂದ ನಗರ -ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ) ರಲ್ಲಿ ಬರುವ ನಗರ-ಚಿಕ್ಕಪೇಟೆ ಮಧ್ಯದಲ್ಲಿರುವ ಸೇತುವೆ ಕುಸಿದಿರುವುದರಿಂದ 15 ರಿಂದ 20 ಟನ್ ಸಾಮಥ್ರ್ಯದ ವಾಹನಗಳನ್ನು ಮುನ್ನೆಚ್ಚರಿಕೆ ಕ್ರಮ ವಹಿಸಿ ಸಂಚರಿಸಲು ದಿ: 02-12-2021 ರಂದು ಆದೇಶ ಹೊರಡಿಸಲಾಗಿತ್ತು. 
       ಇದೀಗ ಮುಂಗಾರು ಹಂಗಾಮಿನ ತೀವ್ರತೆ ಕಡಿಮೆಯಾಗಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಸ್ತುತ ಮುಂಗಾರು ಪ್ರಾರಂಭವಾಗುವವರೆಗೆ ಸೇತುವೆಯ ಎರಡೂ ಕಡೆಗೂ ಸುರಕ್ಷತಾ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಭದ್ರತಾ ವ್ಯವಸ್ಥೆಯೊಂದಿಗೆ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಮುಂದಿನ ಆದೇಶದವರೆಗೆ ಅವಕಾಶ ಕಲ್ಪಿಸಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಆದೇಶಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.